ಹಂಪಿ: ವಿಶ್ವಪ್ರಸಿದ್ಧ ಹಂಪಿಗೆ ಇಂದು (ಆಗಸ್ಟ್ 21) ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು(M Venkaiah Naidu) ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಹಂಪಿಯ ಶ್ರೀ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿರುವ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉಪರಾಷ್ಟ್ರಪತಿಗಳ ಆಗಮನಕ್ಕೂ ಮುನ್ನ ಹಂಪಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಿಶೇಷ ಕೆಂಪು ಹಾಸಿನ ಮೂಲಕ ವೆಂಕಯ್ಯ ನಾಯ್ಡು ಮತ್ತು ಅವರ ಕುಟುಂಬ ಸದಸ್ಯರನ್ನು ಸ್ವಾಗತಿಸಲಾಯಿತು. ಈ ವೇಳೆ ಬಿಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿತ್ತು ಅಂತಾ ತಿಳಿದುಬಂದಿದೆ.
ಕುಟುಂಬ ಸಮೇತರಾಗಿ ಹಂಪಿ ಪ್ರವಾಸ ಕೈಗೊಂಡಿದ್ದ ವೆಂಕಯ್ಯ ನಾಯ್ಡು ಮೊದಲು ಶ್ರೀ ವಿರೂಪಾಕ್ಷ ದೇಗುಲ(Virupaksha Temple), ಪಾರ್ವತಿ, ಭುವನೇಶ್ವರಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಲೋಟಸ್ ಮಹಲ್, ವಿಜಯ ವಿಠ್ಠಲ ದೇಗುಲ, ಉಗ್ರ ನರಸಿಂಹ, ಕಡಲೇಕಾಳು ಗಣೇಶ, ಸಂಗೀತ ಕಂಬಗಳು, ಐತಿಹಾಸಿಕ ಹಂಪಿ ಕಲ್ಲಿನ ರಥ ಸೇರಿದಂತೆ ಅನೇಕ ಸ್ಮಾರಕಗಳನ್ನು ವೀಕ್ಷಿಸಿದರು.
ಇದನ್ನೂ ಓದಿ: SBI ನಗದು ಠೇವಣಿ ಯಂತ್ರದಿಂದ ಜಮಾ ಮಾಡಿದ ಹಣ, ಖಾತೆಗೆ ಜಮಾ ಆಗಲ್ಲವೇ? ಇಲ್ಲಿದೆ ಪರಿಹಾರ
Karnataka | Vice President M Venkaiah Naidu and his family garlanded by a temple elephant during their visit to Virupaksha Temple in Hampi pic.twitter.com/Ofh4Mcwe9q
— ANI (@ANI) August 21, 2021
ಶುಕ್ರವಾರ ಕಲ್ಯಾಣ ಕರ್ನಾಟಕ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ(Tungabhadra Dam)ದ ಸೌಂದರ್ಯವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತವರ ಕುಟುಂಬ ಸದಸ್ಯರು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದ್ದರು. ಇಂದು ಹೊಸಪೇಟೆ ತಾಲೂಕಿನಲ್ಲಿರುವ ಹಂಪಿಗೆ ಭೇಟಿ ನೀಡುವ ಮೂಲಕ ಪ್ರಾಚೀನ ಸ್ಮಾರಕಗಳನ್ನು ವೀಕ್ಷಿಸಿ ಸಂತಸಪಟ್ಟಿದ್ದಾರೆ.
ಇದನ್ನೂ ಓದಿ: Big Fight: ಏಕವಚನದಲ್ಲಿಯೇ ಬಾಯಿಗೆ ಬಂದಂತೆ ಬೈದಾಡಿಕೊಂಡ ಜನಪ್ರತಿನಿಧಿಗಳು..!
ವೆಂಕಯ್ಯನಾಯ್ಡು ಮತ್ತವರ ಕುಟುಂಬಸ್ಥರು ಬ್ಯಾಟರಿ ಚಾಲಿತ ವಾಹನದ ಮೂಲಕ ಹಂಪಿ ಸ್ಮಾರಕ(Hampi Monuments)ಗಳ ವೀಕ್ಷಣೆ ಮಾಡಿದ್ದಾರೆ ಅಂತಾ ತಿಳಿದುಬಂದಿದೆ. ಹಂಪಿ ವೀಕ್ಷಿಸಲು ಆಗಮಿಸಿದ್ದ ವೆಂಕಯ್ಯ ನಾಯ್ಡು ಮತ್ತು ಅವರ ಧರ್ಮಪತ್ನಿ ಎಂ.ಉಷಾ ದಂಪತಿಗೆ ಇಂದು ಬೆಳಗ್ಗೆ ಹಂಪಿ ಪ್ರಾಚೀನ ದೇವಾಲಯಗಳ ಆಡಳಿತ ಮಂಡಳಿ ಸದಸ್ಯರು ಆತ್ಮೀಯ ಸ್ವಾಗತ ಕೋರಿದರು. ಈ ವೇಳೆ ವಿರೂಪಾಕ್ಷ ದೇವಾಲಯದ ಆನೆ ಲಕ್ಷ್ಮೀ ಉಪರಾಷ್ಟ್ರಪತಿಗಳಿಗೆ ಹೂಮಾಲೆ ಹಾಕಿ ವಿಶೇಷ ಸ್ವಾಗತ ಕೋರಿತು. ಐತಿಹಾಸಿಕ ಪ್ರಾಚೀನ ಸ್ವಾರಕಗಳನ್ನು ವೀಕ್ಷಿಸಿದ ವೆಂಕಯ್ಯನಾಯ್ಡು ಕುಟುಂಬ ಖುಷಿ ವ್ಯಕ್ತಪಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ