Bitter Gourd Juice: ರೋಗಗಳಿಂದ ದೂರವಿರಲು ನಿತ್ಯ ಸೇವಿಸಿ ಈ ಜ್ಯೂಸ್

Bitter Gourd Juice: ಹಾಗಲಕಾಯಿಯ ರಸವು ಕಹಿಯಾಗಿರುತ್ತದೆ, ಆದರೆ ಉತ್ತಮ ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿಯಾಗಿದೆ.

Written by - Yashaswini V | Last Updated : Aug 19, 2021, 02:12 PM IST
  • ಡಾ. ಅಬ್ರಾರ್ ಮುಲ್ತಾನಿ ಅವರು ಹಾಗಲಕಾಯಿಯ ರಸ (Bitter Gourd Juice) ಅತ್ಯುತ್ತಮ ರಕ್ತ ಶುದ್ಧಿಕಾರಕ ಎಂದು ಹೇಳುತ್ತಾರೆ
  • ನೀವು ಪ್ರತಿದಿನ ಅರ್ಧ ಗ್ಲಾಸ್ ಹಾಗಲಕಾಯಿಯ ರಸವನ್ನು ಸೇವಿಸಿದರೆ, ನಿಮಗೆ ವಿಟಮಿನ್ ಸಿ ಯ ದೈನಂದಿನ ಅಗತ್ಯದ ಶೇಕಡಾ 93 ರಷ್ಟು ಸಿಗುತ್ತದೆ
  • ಹಾಗಲಕಾಯಿಯ ರಸವು ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣ, ರಿಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್, ಪೊಟ್ಯಾಸಿಯಮ್ ಇತ್ಯಾದಿ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆ
Bitter Gourd Juice: ರೋಗಗಳಿಂದ ದೂರವಿರಲು ನಿತ್ಯ ಸೇವಿಸಿ ಈ ಜ್ಯೂಸ್ title=
Bitter Gourd Juice Benefits

Bitter Gourd Juice: ಹಾಗಲಕಾಯಿಯ ಹೆಸರು ಕೇಳಿದೊಡನೆ ಅಬ್ಬಾ ಎಂದು ಮುಖ ತಿರುಗಿಸಿಕೊಳ್ಳುತ್ತೇವೆ. ಆದರೆ ಆಯುರ್ವೇದದ ಪ್ರಕಾರ, ಹಾಗಲಕಾಯಿಯ ರಸವು ತುಂಬಾ ಪ್ರಯೋಜನಕಾರಿಯಾಗಿದ್ದು, ಪ್ರತಿಯೊಬ್ಬರೂ ಇದನ್ನು ಪ್ರತಿದಿನ ಸೇವಿಸಬೇಕು ಎಂದು ಹೇಳಲಾಗುತ್ತದೆ. ಹಾಗಲಕಾಯಿಯ ರಸವು ಕೆಲವರಿಗೆ ವರದಾನವಾಗಿದೆ. ಏಕೆಂದರೆ, ಅದು ಅವರ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಮೂಲದಿಂದ ನಿರ್ಮೂಲನೆ ಮಾಡುತ್ತದೆ. ಹಾಗಿದ್ದರೆ, ಹಾಗಲಕಾಯಿಯ ರಸದ ಪ್ರಯೋಜನಗಳ ತಿಳಿಯೋಣ...

ಅರ್ಧ ಗ್ಲಾಸ್ ಹಾಗಲಕಾಯಿ ರಸದಲ್ಲಿ ಇರುವ ಪೌಷ್ಟಿಕಾಂಶಗಳು (Half glass bitter gourd juice benefits)
ಆಯುರ್ವೇದ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಹಲವಾರು ಪುಸ್ತಕಗಳನ್ನು ಬರೆದಿರುವ ಡಾ. ಅಬ್ರಾರ್ ಮುಲ್ತಾನಿ, ಹಾಗಲಕಾಯಿಯ ರಸ (Bitter Gourd Juice) ಅತ್ಯುತ್ತಮ ರಕ್ತ ಶುದ್ಧಿಕಾರಕ ಎಂದು ಹೇಳುತ್ತಾರೆ. ನೀವು ಪ್ರತಿದಿನ ಅರ್ಧ ಗ್ಲಾಸ್ ಹಾಗಲಕಾಯಿಯ ರಸವನ್ನು ಸೇವಿಸಿದರೆ, ನಿಮಗೆ ವಿಟಮಿನ್ ಸಿ ಯ ದೈನಂದಿನ ಅಗತ್ಯದ ಶೇಕಡಾ 93 ರಷ್ಟು ಸಿಗುತ್ತದೆ. ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಸುವಲ್ಲಿ ಇದು ಬಹಳ ಮುಖ್ಯವಾಗಿದೆ. ಇದರ ಹೊರತಾಗಿ, ಹಾಗಲಕಾಯಿಯ ರಸವು ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣ, ರಿಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್, ಪೊಟ್ಯಾಸಿಯಮ್ ಇತ್ಯಾದಿ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆ.

ಇದನ್ನೂ ಓದಿ- Walking: ಪ್ರತಿದಿನ ಹೀಗೆ ಮಾಡಿದರೆ ನಿಮ್ಮ Diabetes, ರಕ್ತದೊತ್ತಡವನ್ನು ನಿಯಂತ್ರಿಸಬಹುದು

ಹಾಗಲಕಾಯಿ ರಸದ ಪ್ರಯೋಜನಗಳು:
ಹಾಗಲಕಾಯಿಯ ರಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.
ರೋಗಗಳಿಂದ ದೂರವಿರುತ್ತೀರಿ:
ಡಾ.ಅಬ್ರಾರ್ ಮುಲ್ತಾನಿಯವರ ಪ್ರಕಾರ, ಹಾಗಲಕಾಯಿಯ ರಸವು (Bitter Gourd Juice benefits) ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವವರಿಗೆ ವರದಾನವಿದ್ದಂತೆ. ಏಕೆಂದರೆ, ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವುದು ಎಂದರೆ ನಿಮ್ಮ ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ದುರ್ಬಲವಾಗಿದೆ ಎಂದರ್ಥ. ಅದನ್ನು ಬಲಪಡಿಸಲು ವಿಟಮಿನ್ ಸಿ ಅಗತ್ಯವಿದೆ ಮತ್ತು ಹಾಗಲಕಾಯಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇರುತ್ತದೆ.

ಮಧುಮೇಹಿಗಳಿಗೂ ಇದು ವರದಾನವಾಗಿದೆ:
ಹಾಗಲಕಾಯಿಯು ಮಧುಮೇಹ ನಿರೋಧಕ ಗುಣಗಳನ್ನು ಹೊಂದಿದೆ, ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿಯಲ್ಲಿರುವ ಸಪೋನಿನ್ಸ್ ಮತ್ತು ಟೆರ್ಪಿನಾಯ್ಡ್ಸ್ ಎಂಬ ಜೈವಿಕ ಸಕ್ರಿಯ ಸಂಯುಕ್ತಗಳು ರಕ್ತದಿಂದ ಗ್ಲೂಕೋಸ್ ಜೀವಕೋಶಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿಯ ಸೇವನೆಯು ಜೀವಕೋಶಗಳಿಂದ ಗ್ಲೂಕೋಸ್ ಅನ್ನು ಉಪಯೋಗಿಸುವಲ್ಲಿ ಸಹಾಯಕವಾಗಿದೆ.

ಇದನ್ನೂ ಓದಿ- Vegetables For Eyes: ದುರ್ಬಲ ಕಣ್ಣುಗಳನ್ನು ಬಲಪಡಿಸಲು ನಿಮ್ಮ ಆಹಾರದಲ್ಲಿರಲಿ ಈ ತರಕಾರಿಗಳು

ಚರ್ಮಕ್ಕೆ ಪ್ರಯೋಜನಕಾರಿ:
ಹಾಗಲಕಾಯಿಯ ರಸವನ್ನು (Bitter Gourd Juice) ಸೇವಿಸುವುದರಿಂದ ಹೊಳೆಯುವ ಮತ್ತು ಕಲೆರಹಿತ ಮುಖಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ, ಹಾಗಲಕಾಯಿ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಮುಖದ ಹೊಳಪು ಹೆಚ್ಚಾಗುತ್ತದೆ.

ಹಾಗಲಕಾಯಿಯ ರಸ ಪ್ರಯೋಜನಗಳು - ಬಲವಾದ ಕೂದಲು:
ರಕ್ತ ಶುದ್ಧೀಕರಣ ಮತ್ತು ರಕ್ತದ ಹರಿವು ಸರಿಯಾಗಿರುವುದರಿಂದ ಕೂದಲು ಕೂಡ ಪ್ರಯೋಜನ ಪಡೆಯುತ್ತದೆ. ಈ ಕಾರಣದಿಂದಾಗಿ ಕೂದಲು ಬಲವಾಗಿರುತ್ತದೆ ಮತ್ತು ಉದ್ದವಾಗುತ್ತದೆ. ಏಕೆಂದರೆ, ಸರಿಯಾದ ರಕ್ತದ ಹರಿವಿನಿಂದಾಗಿ, ಸಾಕಷ್ಟು ಪೋಷಣೆ ಕೂದಲಿನ ಬೇರುಗಳನ್ನು ತಲುಪುತ್ತದೆ.

ಹೊಟ್ಟೆ ಹುಳುಗಳ ಚಿಕಿತ್ಸೆ:
ತಜ್ಞರ ಪ್ರಕಾರ, ಹೊಟ್ಟೆ ಹುಳುಗಳಿಗೆ ಚಿಕಿತ್ಸೆ ನೀಡಲು ಹಾಗಲಕಾಯಿಯ ರಸವನ್ನು ಸೇವಿಸಬೇಕು. ಇದಕ್ಕಾಗಿ ನೀವು ಹಾಗಲಕಾಯಿಯ ರಸವನ್ನು ಒಂದು ಲೋಟ ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯಬೇಕು. ಇದು ನಿಮ್ಮ ಹೊಟ್ಟೆ ಹುಳುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News