ಲಾರ್ಡ್ಸ್ : ಭಾರತೀಯ ಬೌಲರ್ ಗಳ ಅದ್ಬುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದಿಂದಾಗಿ ಲಾರ್ಡ್ಸ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 151 ರನ್ ಗಳಿಂದ ಗೆದ್ದಿದೆ.ಆ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಈಗ 1-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಇದನ್ನೂ ಓದಿ-Afghanistan: ತಾಲಿಬಾನ್ ಸರ್ಕಾರ ರಚನೆ; ಕಾಬೂಲ್ನಿಂದ ವಾಣಿಜ್ಯ ವಿಮಾನ ಹಾರಾಟ ನಿಷೇಧ
What a game of cricket 👌
Everyone stepping up, love the commitment and attitude. Way to go boys 🇮🇳 💪 pic.twitter.com/hSgmxkLiiP— Virat Kohli (@imVkohli) August 16, 2021
ಭಾರತ ತಂಡವು ನೀಡಿದ 272 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 51.5 ಓವರ್ ಗಳಲ್ಲಿ 120 ರನ್ ಗಳಿಗೆ ಆಲೌಟಾಯಿತು, ನಾಯಕ ಜೋ ರೂಟ್ 33 ರನ್ ಗಳಿಸಿದ್ದು ತಂಡದ ಪರ ಗರಿಷ್ಟ ಮೊತ್ತವಾಗಿತ್ತು. ಭಾರತದ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಮೊಹಮದ್ ಸಿರಾಜ್ ನಾಲ್ಕು, ಬುಮ್ರಾ ಮೂರು ಹಾಗೂ ಇಶಾಂತ್ ಶರ್ಮಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಕೇವಲ 120 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
WHAT. A. WIN! 👏 👏
Brilliant from #TeamIndia as they beat England by 1⃣5⃣1⃣ runs at Lord's in the second #ENGvIND Test & take 1-0 lead in the series. 👍 👍
Scorecard 👉 https://t.co/KGM2YELLde pic.twitter.com/rTKZs3MC9f
— BCCI (@BCCI) August 16, 2021
ಭಾರತವು ಮಧ್ಯಾಹ್ನದ ಭೋಜನದ ನಂತರ 298-8 ಕ್ಕೆ ಡಿಕ್ಲೇರ್ ಮಾಡಿಕೊಂಡಿತು.ಆ ಮೂಲಕ ಇಂಗ್ಲೆಂಡ್ ಗೆ 60 ಓವರ್ ಗಳಲ್ಲಿ 272 ರನ್ ಗೆಲುವಿಗೆ ಗುರಿ ನೀಡಿತು.ಭಾರತದ ಪರವಾಗಿ ರಹಾನೆ 61 ರನ್ ಗಳಿಸಿ ತಂಡಕ್ಕೆ ನೆರವಾದರು.ಇದಾದ ನಂತರ ಕೊನೆಯಲ್ಲಿ ಮೊಹಮ್ಮದ್ ಶಮಿ ಅವರ 56 ಹಾಗೂ ಬುಮ್ರಾ ಅವರ 34 ರನ್ ಗಳು ತಂಡಕ್ಕೆ ವರವಾದವು.
ಇದನ್ನೂ ಓದಿ-ತಾಲಿಬಾನ್ ಶ್ರೀಮಂತಿಕೆ ಎಷ್ಟು?, ಭಯೋತ್ಪಾದಕ ಸಂಘಟನೆಗೆ ಬರುವ ಹಣದ ಮೂಲ ಯಾವುದು ಗೊತ್ತೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ