ನವದೆಹಲಿ : ತಾಮ್ರದ ಉಂಗುರ ಧರಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಜ್ಯೋತಿಷ್ಯದಲ್ಲಿ (Astrology) ತಾಮ್ರದ ಉಂಗುರವನ್ನು ಧರಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ತಾಮ್ರದ ಉಂಗುರವನ್ನು ಧರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು (Benefits of Copper Ring )ಕೂಡಾ ಸಿಗಲಿದೆ. ತಾಮ್ರವನ್ನು ಸೂರ್ಯ ಮತ್ತು ಮಂಗಳನ ಲೋಹವೆಂದು ಹೇಳಲಾಗುತ್ತದೆ. ತಾಮ್ರದ ಉಂಗುರವನ್ನು ಧರಿಸುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ.
ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ : ತಾಮ್ರದ ಉಂಗುರ ಅಥವಾ ಬಳೆ ಧರಿಸಿದರೆ ಕೀಲು ನೋವು ನಿವಾರಣೆಯಾಗುತ್ತದೆ. ಇದಲ್ಲದೆ, ಇದನ್ನು ಹಾಕುವುದರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಸಹ ದೂರವಾಗುತ್ತವೆ. ಸಂಧಿವಾತ ರೋಗಿಗಳು (arthritis) ತಾಮ್ರದ ಕಂಕಣವನ್ನು ಧರಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : ಸೂರ್ಯನ ರಾಶಿ ಪರಿವರ್ತನೆಯಿಂದ ಪ್ರಕಾಶಿಸಲಿದೆ ಈ ರಾಶಿಯವರ ಭಾಗ್ಯ
ಸೂರ್ಯ ಮತ್ತು ಮಂಗಳ ದೋಷ ನಿವಾರಣೆಯಾಗುತ್ತದೆ : ಉಂಗುರದ ಬೆರಳಿನಲ್ಲಿ ತಾಮ್ರದ ಉಂಗುರವನ್ನು (Copper Ring) ಧರಿಸುವುದರಿಂದ ಸೂರ್ಯನ (Sun) ದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಮಂಗಳನ ಅಶುಭ ಫಲದಿಂದಲೂ ಮುಕ್ತಿ ಸಿಗಲಿದೆ ಎನ್ನಲಾಗುತ್ತದೆ.
ರಕ್ತ ಸಂಚಲನ ಸುಧಾರಿಸುತ್ತದೆ : ತಾಮ್ರದ ಉಂಗುರ ಅಥವಾ ಬಳೆ ಧರಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ಮತ್ತು ಅದರ ಸಂಚಲನ (Blood circulation) ಕೂಡಾ ಉತ್ತಮವಾಗಿರುತ್ತದೆ. ಇದನ್ನು ಹಾಕುವುದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ಕೂಡ ಕಡಿಮೆಯಾಗುತ್ತದೆ.
ವಾಸ್ತು ದೋಷಗಳು ನಿವಾರಣೆಯಾಗುತ್ತವೆ : ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರಿಸಿರುವ ತಾಮ್ರದ ಪಾತ್ರೆಗಳಿಂದ ಸಂತೋಷ ಮತ್ತು ಶಾಂತಿ ಉಳಿಯುತ್ತದೆ. ಇದರ ಶುದ್ಧತೆಯು ಧನಾತ್ಮಕ ಶಕ್ತಿಯ (Positive energy) ಹರಿವನ್ನು ಹೆಚ್ಚಿಸುತ್ತದೆ. ಮನೆಯ ಮುಖ್ಯ ಬಾಗಿಲು ಸರಿಯಾದ ದಿಕ್ಕಿನಲ್ಲಿ ಇರದೆ ಹೋದರೆ, ತಾಮ್ರದ ನಾಣ್ಯವನ್ನು ನೇತುಹಾಕುವುದರಿಂದ, ಅದರ ವಾಸ್ತು ದೋಷವು ಕೊನೆಗೊಳ್ಳುತ್ತದೆ.
ಇದನ್ನೂ ಓದಿ : Best Sleeping Direction: ಸುಖ ನಿದ್ದೆ ಮಾಡಬೇಕಾದರೆ ಯಾವಾಗಲೂ ಈ ವಿಷಯಗಳ ಬಗ್ಗೆ ಇರಲಿ ಗಮನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.