ನವದೆಹಲಿ : ನಿಮ್ಮ ವೈಯಕ್ತಿಕ ಡೇಟಾ ಸೋರಿಕೆಯಾಗದಂತೆ ರಕ್ಷಿಸಲು ಬಯಸಿದರೆ, ತಕ್ಷಣವೇ ಎಚ್ಚರವಹಿಸಿ. ಮಾಲ್ವೇರ್ನಿಂದ ದಾಳಿಗೊಳಗಾದ ನಿಮ್ಮ ಫೋನ್ನಲ್ಲಿ ಇಂತಹ ಹಲವು ಆ್ಯಪ್ಗಳು ಇರಬಹುದು. ನಿಮ್ಮ ಗೌಪ್ಯತೆಯು ಅಪಾಯಕ್ಕೆ ಸಿಲುಕುತ್ತದೆ. ಬಳಕೆದಾರರ ಡೇಟಾವನ್ನು ರಹಸ್ಯವಾಗಿ ಕದಿಯುತ್ತಿದ್ದ ಗೂಗಲ್ ಇತ್ತೀಚೆಗೆ ತನ್ನ 9 ಪ್ಲಾಟ್ಫಾರ್ಮ್ಗಳಿಂದ ಇಂತಹ ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಆದರೆ ನೀವು ಇನ್ನೂ ಆ ಆ್ಯಪ್ಗಳನ್ನು ಬಳಸುತ್ತಿದ್ದರೆ, ತಕ್ಷಣ ಅವುಗಳನ್ನು ಡಿಲೀಟ್ ಮಾಡಿ
ಅಪಾಯದಲ್ಲಿದೆ ಫೇಸ್ ಬುಕ್ ಬಳಕೆದಾರರ ಡೇಟಾ
ಇತ್ತೀಚೆಗೆ, ಸಂಶೋಧಕರು ಹೊಸ ಆಂಡ್ರಾಯ್ಡ್ ಟ್ರೋಜನ್ ಫ್ಲೈಟ್ರಾಪ್(Android Trojan Flytrap) ಅನ್ನು ಗುರುತಿಸಿದ್ದಾರೆ, ಇದರ ಮೂಲಕ 140 ಕ್ಕೂ ಹೆಚ್ಚು ದೇಶಗಳ ಫೇಸ್ ಬುಕ್(Facebook) ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಇದನ್ನೂ ಓದಿ : Jio Cheap Recharge Plan : Jio ಗ್ರಾಹಕರೆ ಗಮನಿಸಿ: 39 ರೂ. ರಿಚಾರ್ಜ್ ಮಾಡಿ ಪಡೆಯಿರಿ ಅನಿಯಮಿತ ಕರೆ ಮತ್ತು Data ಪ್ರಯೋಜನ!
ನೀವು ಕಳ್ಳತನಕ್ಕೆ ಮಾತ್ರ ಸಹಾಯ ಮಾಡುತ್ತೀರಿ
Zimperium zLabs ಮೊಬೈಲ್ ಥ್ರೆಟ್ ರಿಸರ್ಚ್ ತಂಡದ ಪ್ರಕಾರ, ಮಾರ್ಚ್ 2021 ರಿಂದ, ಮಾಲ್ವೇರ್ ಗೂಗಲ್ ಪ್ಲೇ ಸ್ಟೋರ್, ಥರ್ಡ್ ಪಾರ್ಟಿ ಆಪ್ ಸ್ಟೋರ್ಗಳು ಮತ್ತು ಸೈಡ್ಲೋಡ್ ಮಾಡಿದ ಆ್ಯಪ್ಗಳಿಂದ ದುರುದ್ದೇಶಪೂರಿತ ಅಪ್ಲಿಕೇಶನ್ಗಳ ಮೂಲಕ ಹರಡಿದೆ. ಈ ಮಾಲ್ವೇರ್ ಬಹಳ ಸರಳವಾದ ಟ್ರಿಕ್ ನಲ್ಲಿ ಕೆಲಸ ಮಾಡುತ್ತದೆ. ಮೊದಲಿಗೆ, ಇದು ಮಿಖಾಗಳನ್ನ ತಮ್ಮ ಫೇಸ್ಬುಕ್(Facebook Credentials) ಮೂಲಕ ಖಚಿತ ಪಡಿಸಿಕೊಂಡು ದುರುದ್ದೇಶಪೂರಿತವಾಗಿ ಅಪ್ಲಿಕೇಶನ್ಗೆ ಲಾಗಿನ್ ಮಾಡುತ್ತದೆ, ನಂತರ ಅದು ಬಳಕೆದಾರರ ಡೇಟಾವನ್ನು ಕದಿಯುತ್ತದೆ.
ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡಬೇಡಿ
ಫ್ಲೈಟ್ರಾಪ್ ನೆಟ್ಫ್ಲಿಕ್ಸ್ ಕೂಪನ್ ಕೋಡ್(Netflix Coupon Code), ಗೂಗಲ್ ಆಡ್ವರ್ಲ್ಡ್ ಕೂಪನ್ ಕೋಡ್ ಮತ್ತು ಅತ್ಯುತ್ತಮ ಫುಟ್ಬಾಲ್ ತಂಡದ ವೋಟ್(Google adworld Coupon Code) ಮತ್ತು ಪ್ಲೇಯರ್ನಂತಹ ವಿವಿಧ ರೀತಿಯ ಮೊಬೈಲ್ ಅಪ್ಲಿಕೇಶನ್ಗಳನ್ನು ಬಳಸುತ್ತದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ.
ಇದನ್ನೂ ಓದಿ : Xiaomi ಬಿಡುಗಡೆ ಮಾಡಿದೆ ಮೊಬೈಲ್ ಫೋನ್ ಗಿಂತಲೂ ಸ್ಲಿಮ್ ಆಗಿರುವ ಟಿವಿ
ಕ್ವೆಶ್ಚನ್-ಆನ್ಸರ್ ಗೇಮ್
ಈ ಆ್ಯಪ್ ಡೌನ್ಲೋಡ್(Download) ಮಾಡಿದ ನಂತರ, ಅದು ಬಳಕೆದಾರರನ್ನು ಮೂರ್ಖರನ್ನಾಗಿಸುತ್ತದೆ ಮತ್ತು ಅನೇಕ ಪ್ರಶ್ನೆಗಳನ್ನು ಕೇಳುತ್ತದೆ. ಈ ಎಲ್ಲದಕ್ಕೂ ಉತ್ತರಿಸಿದ ನಂತರ, ಅದು ಬಳಕೆದಾರರನ್ನು ಫೇಸ್ ಬುಕ್ ಲಾಗಿನ್ ಪುಟಕ್ಕೆ ದಾರಿ ತೋರಿಸುತ್ತದೆ, ಅದಕ್ಕಾಗಿ ವೋಟಿಂಗ್ ಮಾಡಲು ಫೇಸ್ ಬುಕ್ ಅಕೌಂಟ್ ಗೆ ಲಾಗಿನ್ ಆಗಲು ಕೇಳುತ್ತದೆ.
ಕದ್ದ ಡೇಟಾವನ್ನು ಎಲ್ಲಿ ಸೇವ್ ಮಾಡಲಾಗುತ್ತದೆ?
ಮಾಲ್ವೇರ್ ಜಾವಾಸ್ಕ್ರಿಪ್ಟ್ ಇಂಜೆಕ್ಷನ್ ಅನ್ನು ಬಳಸುತ್ತದೆ. ಇದರಿಂದ ಅದು ಫೇಸ್ ಬುಕ್ ಐಡಿ(Facebook ID), ಸ್ಥಳ, ಇಮೇಲ್ ಅಡ್ರೆಸ್, ಬಳಕೆದಾರರ ಐಪಿ ಅಡ್ರೆಸ್ ಗೆ ಎಂಟ್ರಿ ನೀಡುತ್ತದೆ. ಕದ್ದ ಮಾಹಿತಿಯನ್ನು ನಂತರ ಫ್ಲೈಟ್ರಾಪ್ ನ ಕಮಾಂಡ್ ಮತ್ತು ಕಂಟ್ರೋಲ್ ಸರ್ವರ್ ಗಳಿಗೆ ವರ್ಗಾಯಿಸಲಾಗುತ್ತದೆ.
ಇದನ್ನೂ ಓದಿ : ISRO: ಭೂಮಿಯ ಮೇಲ್ವಿಚಾರಣೆ ಉಪಗ್ರಹ EOS-03ರ ಮಿಷನ್ ವಿಫಲ, ಉಡಾವಣೆಯ ನಂತರ ಏನಾಯ್ತು ಗೊತ್ತಾ?
Google ಪ್ರೋಸೆಸ್
ಜಿಪ್ರಿಯಮ್ ಗೂಗಲ್ ಪ್ಲೇ ಸ್ಟೋರ್ ಮೂಲಕ ಫ್ಲೈಟ್ರಾಪ್ ಮಾಲ್ವೇರ್ ಅನ್ನು ವರ್ಗಾಯಿಸುತ್ತಿದ್ದ ಮೂರು ಅಪಾಯಕಾರಿ ಆ್ಯಪ್ಗಳ ಬಗ್ಗೆ ಗೂಗಲ್(Goole Alert) ಗೆ ಎಚ್ಚರಿಕೆ ನೀಡಿದೆ. ನಂತರ ಗೂಗಲ್ ಸಂಶೋಧನೆ ಮತ್ತು ದುರುದ್ದೇಶಪೂರಿತ ಆ್ಯಪ್ಗಳನ್ನು ಪರಿಶೀಲಿಸಿತು ಮತ್ತು ಅವುಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡಿಲೀಟ್ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ