ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೆಲವರು ಖಾತೆ ಕ್ಯಾತೆ ಶುರುವಿಟ್ಟುಕೊಂಡಿದ್ದಾರೆ. ತಮ್ಮಿಷ್ಟದ ಖಾತೆ ನೀಡಿಲ್ಲವೆಂದು ಅನೇಕ ಸಚಿವರು ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai)ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟವಿಲ್ಲದ ಖಾತೆ ನೀಡದಕ್ಕೆ ಕೆಲವರು ರಾಜೀನಾಮೆ ಬೆದರಿಕೆಯನ್ನೂ ಹಾಕಿದ್ದಾರೆ. ರಾಜೀನಾಮೆ ಬೇಕಾದರೂ ಕೊಡ್ತೀನಿ ಆದರೆ ಈ ಖಾತೆ ಮಾತ್ರ ಬೇಡವೆಂದು ಸಚಿವ ಆನಂದ್ ಸಿಂಗ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಸಚಿವರ ಖಾತೆ ಕ್ಯಾತೆ ವಿಚಾರವಾಗಿ ಮಾತನಾಡಿರುವ ಸಿಎಂ ಬೊಮ್ಮಾಯಿ, ‘ಎಲ್ಲರಿಗೂ ಅವರಿಷ್ಟದ ಖಾತೆ ನೀಡಲು ಸಾಧ್ಯವಿಲ್ಲ’ವೆಂದು ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ: N Mahesh : ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಶಾಸಕ ಎನ್ ಮಹೇಶ್!
ಹೌದು, ಸಂಪುಟ ರಚನೆ ಬೆನ್ನಲ್ಲೇ ಕೇಸರಿ ಪಡೆಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಖಾತೆಗಾಗಿ ಕ್ಯಾತೆ ತೆಗೆದಿರುವ ಸಚಿವರಿಗೆ ಸಿಎಂ ಬೊಮ್ಮಾಯಿ(Basavaraj Bommai) ಖಡಕ್ ತಿರುಗೇಟು ನೀಡಿದ್ದಾರೆ. ಎಲ್ಲರಿಗೂ ಅವರಿಷ್ಟದ ಖಾತೆ ನೀಡಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಮತ್ತು ಅವರು ಬಯಸಿದ ಖಾತೆಗಳನ್ನೇ ನೀಡಲು ಸಾಧ್ಯವಿಲ್ಲ. ಖಾತೆಗಳ ಬಗ್ಗೆ ಗೊಂದಲವಿದ್ದರೆ ಈ ಬಗ್ಗೆ ಸಚಿವರೊಂದಿಗೆ ಮಾತನಾಡುತ್ತೇನೆ ಅಂತಾ ಹೇಳಿದ್ದಾರೆ.
ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿದ್ದೇನೆ
ಖಾತೆ ಹಂಚಿಕೆ ವಿಚಾರವಾಗಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಸಚಿವ ಆನಂದ್ ಸಿಂಗ್(Anand singh) ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ‘ಈಗಾಗಲೇ ಆನಂದ್ ಸಿಂಗ್ ನನ್ನನ್ನು ಭೇಟಿಯಾಗಿ ಖಾತೆ ವಿಚಾರವಾಗಿ ಚರ್ಚಿಸಿದ್ದಾರೆ. ಆನಂದ್ ಸಿಂಗ್ ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಅವರ ಭಾವನೆ ಮತ್ತು ಮನವಿಯನ್ನು ನಾನು ಗೌರವಿಸುವುದಾಗಿ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಅವರಿಗೆ ಭರವಸೆ ನೀಡಿದ್ದೇನೆ’ ಅಂತಾ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ‘ಮಸಾಲೆ ದೋಸೆ’ ಬೊಂಬಾಟ್ ಗುರು ಎಂದ ಬ್ರಿಟಿಷ್ ರಾಯಭಾರಿ..!
ಬದಲಿ ಖಾತೆ ನೀಡುವಂತೆ ಆನಂದ್ ಸಿಂಗ್ ಮನವಿ
ನೂತನ ಸಚಿವ ಸಂಪುಟದಲ್ಲಿ ಸಚಿವ ಆನಂದ್ ಸಿಂಗ್ ಅವರಿಗೆ ಅರಣ್ಯ, ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ. ಆದರೆ ನಾನು ಕೇಳಿದ್ದೇ ಒಂದು, ನನಗೆ ಕೊಟ್ಟ ಖಾತೆ ಮತ್ತೊಂದು ಅಂತಾ ಆನಂದ್ ಸಿಂಗ್(Anand singh) ಅಸಮಾಧಾನ ವ್ಯಕ್ತಪಡಿಸಿದ್ದರು. ಭಾನುವಾರ ಕುಟುಂಬ ಸಮೇತರಾಗಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿರುವ ಆನಂದ್ ಸಿಂಗ್ ಬದಲಿ ಖಾತೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದಿದೆ.
ಜನರಿಗೆ ಸೇವೆ ಮಾಡುವಂಥ ಖಾತೆ ನೀಡಲಿ
ಎಂಟಿಬಿ ನಾಗರಾಜ್(MTB Nagaraj) ಕೂಡ ಖಾತೆ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಈಗಾಗಲೇ ಅವರಿಗೆ ಪೌರಾಡಳಿತ, ಸಣ್ಣ ನೀರಾವರಿ ಖಾತೆ ಹಂಚಿಕೆ ಮಾಡಲಾಗಿದೆ. ಆದರೆ ಅವರು ಸಿಎಂ ಬೊಮ್ಮಾಯಿ ಬಳಿ ವಸತಿ ಖಾತೆ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಅದರೆ ನನ್ನಿಷ್ಟದ ಖಾತೆ ನೀಡಿಲ್ಲವೆಂದು ಎಂಟಿಬಿ ಕ್ಯಾತೆ ತೆಗೆದಿದ್ದಾರೆ. ಇಂದು ನಾನು ಸಿಎಂ ಬೊಮ್ಮಾಯಿಯನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ನನಗೆ ಯಾವ ಖಾತೆ ನೀಡಬೇಕೆಂದು ಅವರಿಗೆ ಗೊತ್ತಿದೆ. ಸರ್ಕಾರ ಮತ್ತು ಜನರಿಗೆ ಸೇವೆ ಮಾಡುವಂಥ ಖಾತೆ ನೀಡಲಿ ಅಂತಾ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ