Mirror Vastu Tips: ಮನೆಯಲ್ಲಿರುವ ಕನ್ನಡಿ ಕೂಡ ನಿಮ್ಮ ಅದೃಷ್ಟ ಬದಲಿಸಬಹುದು

Mirror Vastu Tips: ಕನ್ನಡಿಯನ್ನು ಲಕ್ಷ್ಮೀ ಸ್ವರೂಪ ಎಂದೂ ಹೇಳಲಾಗುತ್ತದೆ. ಆದರೆ ತಪ್ಪಾದ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

Written by - Yashaswini V | Last Updated : Jul 29, 2021, 11:47 AM IST
  • ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಹೊಂದಿರುವುದು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ
  • ವಾಸ್ತು ಪ್ರಕಾರ ಕನ್ನಡಿ ಕೂಡ ನಿಮ್ಮ ಅದೃಷ್ಟವನ್ನು ಬದಲಿಸಬಹುದು
  • ಕನ್ನಡಿಗೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳ ಬಗ್ಗೆ ತಿಳಿಯಿರಿ
Mirror Vastu Tips: ಮನೆಯಲ್ಲಿರುವ ಕನ್ನಡಿ ಕೂಡ ನಿಮ್ಮ ಅದೃಷ್ಟ ಬದಲಿಸಬಹುದು title=
Mirror Vastu Tips

Mirror Vastu Tips: ವಾಸ್ತು ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಕೆಲವು ವಸ್ತುಗಳನ್ನು ಹೊಂದಿರುವುದು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ವಸ್ತುಗಳು ವಾಸ್ತು ಪ್ರಕಾರ ಇಲ್ಲದಿದ್ದರೆ ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಕೂಡ ಇದೆ. 

ಸಾಮಾನ್ಯವಾಗಿ ನಾವು ಮನೆಯನ್ನು ಅಲಂಕರಿಸುವ ದೃಷ್ಟಿಯಿಂದ ಕೆಲವು ವಸ್ತುಗಳನ್ನು ತರುತ್ತೇವೆ. ಇನ್ನೂ ಹಲವು ವೇಳೆ ಕೆಲವು ವಸ್ತುಗಳನ್ನು ನಾವು ನಿತ್ಯ ಬಳಸುತ್ತೇವೆ. ಆದರೆ ಅದರಲ್ಲಿನ ವಾಸ್ತು ದೋಷದ ಬಗ್ಗೆ ನಮಗೆ ಅರಿವಿರುವುದಿಲ್ಲ ಅಥವಾ ಅದರ ಬಗ್ಗೆ ನಾವು ಗಮನ ನೀಡಿರುವುದಿಲ್ಲ. ಅಂತಹ ವಸ್ತುಗಳಲ್ಲೇ ಒಂದು ಮನೆಯಲ್ಲಿರುವ ಕನ್ನಡಿ. 

ಇದನ್ನೂ ಓದಿ- Kitchen Spices Vastu Tips: ಜಾತಕದಲ್ಲಿನ ಗ್ರಹ ದೋಷಗಳನ್ನು ನಿವಾರಿಸುತ್ತಂತೆ ಈ ಮಸಾಲೆಗಳು

ವಾಸ್ತು (Vastu) ಪ್ರಕಾರ, ಕನ್ನಡಿ ಕೂಡ ನಿಮ್ಮ ಅದೃಷ್ಟವನ್ನು ಬದಲಿಸಬಹುದು. ಅದೇ ಸಮಯದಲ್ಲಿ, ತಪ್ಪಾದ ಕನ್ನಡಿಯನ್ನು ತಪ್ಪಾದ ದಿಕ್ಕಿನಲ್ಲಿ ಇರಿಸಿದರೆ ಅದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಮನೆಗೆ ಕನ್ನಡಿ ತರುವಾಗ ಕೆಲವು ವಿಷಯಗಳನ್ನು ನೆನಪಿಡುವುದು ಬಹಳ ಮುಖ್ಯ. 

ಕನ್ನಡಿಗೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳ ಬಗ್ಗೆ ತಿಳಿಯಿರಿ...
ಈ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿ- ಕನ್ನಡಿಯನ್ನು ಯಾವಾಗಲೂ ಮನೆಯ ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಇಡಬೇಕು. ಅಲ್ಲದೆ, ಕನ್ನಡಿಯನ್ನು ನೋಡುವ ವ್ಯಕ್ತಿಯ ಮುಖವು ಪೂರ್ವ ಅಥವಾ ಉತ್ತರದ ಕಡೆಗೆ ಇರುವ ರೀತಿಯಲ್ಲಿ ಇರಿಸಿ. 

ಈ ರೀತಿಯ ಕನ್ನಡಿಯನ್ನು ಬಳಸಬೇಡಿ - ಮನೆಯಲ್ಲಿ ಮುರಿದ ಮತ್ತು ಮಸುಕಾದ ಕನ್ನಡಿಯನ್ನು (Mirror) ಅಪ್ಪಿ-ತಪ್ಪಿಯೂ ಬಳಸಲೇ ಬಾರದು ಎಂದು ಹೇಳಲಾಗುತ್ತದೆ. ಜೊತೆಗೆ ಅದರ ಸ್ವಚ್ಛತೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ.

ಇದನ್ನೂ ಓದಿ-  ಸುಖ ಶಾಂತಿ ಸಮೃದ್ಧಿಗಾಗಿ ಮನೆಯಿಂದ ತಕ್ಷಣ ಹೊರ ಹಾಕಿ ಈ ವಸ್ತುಗಳನ್ನು

ಬೆಡ್ ರೂಂನಲ್ಲಿ ಈ ರೀತಿಯ ಕನ್ನಡಿ ಇರಿಸಿ - ವಾಸ್ತು ಪ್ರಕಾರ, ಕನ್ನಡಿಯನ್ನು ಹಾಸಿಗೆಯ ಮುಂದೆ ಇಡಬೇಡಿ. ನಿಮ್ಮ ಕನ್ನಡಿ ಹಾಸಿಗೆಯ ಮುಂದೆ ಇದ್ದರೆ, ನಂತರ ಮಲಗುವ ಮೊದಲು ಕನ್ನಡಿಯನ್ನು ಒಂದು ಬಟ್ಟೆಯಿಂದ ಮುಚ್ಚಿ. ವಾಸ್ತವವಾಗಿ, ನಿದ್ದೆ ಮಾಡುವಾಗ ಕನ್ನಡಿಯಲ್ಲಿ ಪ್ರತಿಫಲನವನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

ಇಲ್ಲಿ ಸ್ಥಾಪಿಸಲಾದ ಕನ್ನಡಿ ಮನೆಯ ಹಿರಿಯರ ಮೇಲೆ ಪರಿಣಾಮ ಬೀರುತ್ತದೆ - ನೈಋತ್ಯ ದಿಕ್ಕಿನಲ್ಲಿರುವ ಕನ್ನಡಿ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ. ಇದರ ಪರಿಣಾಮ ಮನೆಯ ಹಿರಿಯರ ಮೇಲೆ ಉಂಟಾಗುತ್ತದೆ. ಈ ಕಾರಣದಿಂದಾಗಿ, ಮನೆಯ ಹಿರಿಯ ವ್ಯಕ್ತಿ ಯಾವಾಗಲೂ ಮನೆಯಿಂದ ಹೊರಗುಳಿಯಬೇಕಾದ ಸನ್ನಿವೇಶ ಎದುರಾಗಬಹುದು ಎಂದು ಹೇಳಲಾಗುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News