New Wage Code : ಸರ್ಕಾರಿ ನೌಕರರಿಗೆ ಇನ್ನು ಸಿಗಲಿದೆ 300 Earned Leave! ಈ ತಿಂಗಳಿನಿಂದ ಹೊಸ ನಿಯಮ ಜಾರಿ

New Wage Code India Updates: ಹೊಸ ವೇತನ ಸಂಹಿತೆಯಲ್ಲಿ ಕೆಲವು ನಿಬಂಧನೆಗಳನ್ನು ನೀಡಲಾಗಿದೆ. ಇದು ಕಚೇರಿಯಲ್ಲಿ ಕೆಲಸ ಮಾಡುವ ವೇತನ ಪಡೆಯುವ ವರ್ಗ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೂ ಪರಿಣಾಮ ಬೀರುತ್ತದೆ. ನೌಕರರ ಸಂಬಳ, ರಜಾದಿನಗಳು ಮತ್ತು ಕೆಲಸದ ಸಮಯವೂ ಬದಲಾಗುತ್ತದೆ. 

Written by - Ranjitha R K | Last Updated : Jul 18, 2021, 09:24 AM IST
  • ಹೊಸ ವೇತನ ಸಂಹಿತೆಯ ನಿಯಮಗಳ ಅನುಷ್ಠಾನದ ನಂತರ ಅನೇಕ ಬದಲಾವಣೆಗಲಾಗಳಿವೆ
  • ಅಕ್ಟೋಬರ್‌ನಲ್ಲಿ ಹೊಸ ವೇತನ ಸಂಹಿತೆ ಜಾರಿಗೆ ಬರಬಹುದು
  • Earned Leave ಹೆಚ್ಚಿಸಲು ಯೂನಿಯನ್ ಬೇಡಿಕೆ
New Wage Code : ಸರ್ಕಾರಿ ನೌಕರರಿಗೆ ಇನ್ನು ಸಿಗಲಿದೆ 300 Earned Leave! ಈ ತಿಂಗಳಿನಿಂದ ಹೊಸ ನಿಯಮ ಜಾರಿ   title=
ಅಕ್ಟೋಬರ್‌ನಲ್ಲಿ ಹೊಸ ವೇತನ ಸಂಹಿತೆ ಜಾರಿಗೆ ಬರಬಹುದು (photo zee news)

ನವದೆಹಲಿ: New Wage Code India Updates: ಹೊಸ ವೇತನ ಸಂಹಿತೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.  ಏಪ್ರಿಲ್ 1 ರಿಂದಲೇ ಹೊಸ ನೀತಿ ಜಾರಿಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ  ನಿಯಮಗಳನ್ನು ಜಾರಿಗೆ ತರಲಾಗಿಲ್ಲ. ಇದೀಗ  ದೊರೆತ ಮಾಹಿತಿಯ ಪ್ರಕಾರ,  ಹೊಸ ವೇತನ ಸಂಹಿತೆ ಅಕ್ಟೋಬರ್‌ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಎಲ್ಲಾ ರಾಜ್ಯಗಳು ತಮ್ಮದೇ ಆದ ಕರಡು ನಿಯಮಗಳನ್ನು ಸಿದ್ಧಪಡಿಸುತ್ತವೆ. ಇದರ ಅಡಿಯಲ್ಲಿ ನೌಕರರ ವೇತನ, ರಜಾದಿನಗಳು ಇತ್ಯಾದಿಗಳಲ್ಲಿ ಬದಲಾವಣೆ ಮಾಡಲಾಗುತ್ತದೆ. 

1. ಹೊಸ ವೇತನ ಸಂಹಿತೆಯಿಂದ ಏನು ಬದಲಾವಣೆ  : 
ಹೊಸ ವೇತನ ಸಂಹಿತೆಯಲ್ಲಿ (New Wage Code) ಕೆಲವು ನಿಬಂಧನೆಗಳನ್ನು ನೀಡಲಾಗಿದೆ. ಇದು ಕಚೇರಿಯಲ್ಲಿ ಕೆಲಸ ಮಾಡುವ ವೇತನ ಪಡೆಯುವ ವರ್ಗ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೂ ಪರಿಣಾಮ ಬೀರುತ್ತದೆ. ನೌಕರರ ಸಂಬಳ, ರಜಾದಿನಗಳು ಮತ್ತು ಕೆಲಸದ ಸಮಯವೂ ಬದಲಾಗುತ್ತದೆ. 

ಇದನ್ನೂ ಓದಿ : ಕೇವಲ 24 ಗಂಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಗೆ ಸುಮಾರು 1 ಲಕ್ಷ ಬುಕಿಂಗ್ ಬೇಡಿಕೆ..!

2. ಸ್ಯಾಲರಿ ಸ್ಟ್ರಕ್ಚರ್ ಬದಲಾಗಲಿದೆ : 
ಹೊಸ ವೇತನ ಸಂಹಿತೆಯಡಿಯಲ್ಲಿ, ನೌಕರರ ವೇತನ ರಚನೆಯಲ್ಲಿ ಬದಲಾವಣೆ ಇರುತ್ತದೆ. Take Home Salary ಕಡಿಮೆಯಾಗಬಹುದು.  ವೇತನ ಸಂಹಿತೆ ಕಾಯ್ದೆ 2019 ರ ಪ್ರಕಾರ, ನೌಕರನ ಮೂಲ ವೇತನವು ಕಂಪನಿಯ ವೆಚ್ಚದ (Cost To Company-CTC)  50% ಕ್ಕಿಂತ ಕಡಿಮೆಯಿರಬಾರದು. ಪ್ರಸ್ತುತ, ಅನೇಕ ಕಂಪನಿಗಳು ಮೂಲ ವೇತನವನ್ನು ಕಡಿಮೆ ಮಾಡಿ, ಹೆಚ್ಚಿನ ಭತ್ಯೆಗಳನ್ನು ನೀಡುತ್ತವೆ ಇದರಿಂದ ಕಂಪನಿಯ ಮೇಲಿನ ಹೊರೆ ಕಡಿಮೆಯಾಗುತ್ತದೆ.

3. ವರ್ಷದ ರಜಾದಿನಗಳನ್ನು 300 ಕ್ಕೆ ಹೆಚ್ಚಿಸಬಹುದು:
 ನೌಕರರ Earned Leave ಅನ್ನು 240 ರಿಂದ 300 ಕ್ಕೆ ಹೆಚ್ಚಿಸಬಹುದು. ಕಾರ್ಮಿಕ ಸಂಹಿತೆಯ ನಿಯಮಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯ, ಕಾರ್ಮಿಕ ಸಂಘ ಮತ್ತು ಉದ್ಯಮದ ಪ್ರತಿನಿಧಿಗಳ ನಡುವೆ ಅನೇಕ ನಿಬಂಧನೆಗಳ ಬಗ್ಗೆ ಚರ್ಚಿಸಲಾಯಿತು. ಇದರಲ್ಲಿ Earned Leave ಅನ್ನು 240 ರಿಂದ 300 ಕ್ಕೆ ಹೆಚ್ಚಿಸುವ ಬೇಡಿಕೆ ಇತ್ತು.

4. ಕೆಲಸದ ಅವಧಿ ಹೆಚ್ಚಾಗಲಿದೆ, ವಾರದ ರಜೆಯೂ ಹೆಚ್ಚಾಗುತ್ತದೆ : 
ಸ್ವೀಕರಿಸಿದ ಮಾಹಿತಿಯ ಪ್ರಕಾರ, ಹೊಸ ವೇತನ ಸಂಹಿತೆಯಡಿ, ಕೆಲಸದ ಅವಧಿ 12 ಗಂಟೆಗೆ ಏರಿಕೆಯಾಗಬಹುದು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಸ್ತಾವಿತ ಕಾರ್ಮಿಕ ಸಂಹಿತೆಯಲ್ಲಿ, ವಾರದಲ್ಲಿ 48 ಗಂಟೆಗಳ ಕೆಲಸದ ನಿಯಮವು ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಆದರೆ ಕೆಲವು ಒಕ್ಕೂಟಗಳು 12 ಗಂಟೆಗಳ ಕೆಲಸ ಮತ್ತು 3 ದಿನಗಳ ರಜೆ (week off) ನಿಯಮವನ್ನು ಪ್ರಶ್ನಿಸಿವೆ. ಈ ಕುರಿತು ಸ್ಪಷ್ಟೀಕರಣ ನೀಡಿದ ಸರ್ಕಾರ, ವಾರದಲ್ಲಿ 48 ಗಂಟೆಗಳ ಕೆಲಸದ ನಿಯಮವಿರುತ್ತದೆ, ಯಾರಾದರೂ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಿದರೆ, ಅವರು ವಾರದಲ್ಲಿ 6 ದಿನ ಕೆಲಸ ಮಾಡಬೇಕಾಗುತ್ತದೆ ಮತ್ತು ಅವರಿಗೆ ಕೇವಲ ಒಂದು ದಿನ ರಜೆ ಸಿಗುತ್ತದೆ ಎಂದು ಹೇಳಿದೆ. ಯಾವುದೇ ಕಂಪನಿಯು ದಿನಕ್ಕೆ 12 ಗಂಟೆಗಳ ಕಾಲ ಕೆಲಸವನ್ನು ಅಳವಡಿಸಿಕೊಂಡರೆ, ಅದು ವಾರದಲ್ಲಿ 3 ರಜೆಗಳನ್ನು ಕೂಡಾ ನೀಡಬೇಕಾಗುತ್ತದೆ. ಆದರೆ ಇದಕ್ಕಾಗಿ ಉದ್ಯೋಗಿ ಮತ್ತು ಕಂಪನಿ ಎರಡರ ನಡುವೆ ಒಪ್ಪಂದ ಮಾಡಿಕೊಳ್ಳುವುದು ಸಹ ಅಗತ್ಯವಾಗಿದೆ.

ಇದನ್ನೂ ಓದಿ : Amazonನೊಂದಿಗೆ ದಿನಕ್ಕೆ ಕೇವಲ 4 ಗಂಟೆ ಕೆಲಸ ಮಾಡಿ ತಿಂಗಳಿಗೆ 60 ಸಾವಿರ ಸಂಪಾದಿಸಿ, ಹೇಗೆ ಅಂತಿರಾ?

5. ಕಾರ್ಮಿಕರಿಗೆ ಕನಿಷ್ಠ ವೇತನ ಅನ್ವಯ :
ಮೊದಲ ಬಾರಿಗೆ, ದೇಶದ ಎಲ್ಲಾ ರೀತಿಯ ಕಾರ್ಮಿಕರಿಗೆ ಕನಿಷ್ಠ ವೇತನ (salary) ಸಿಗಲಿದೆ. ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆಗಳನ್ನು ತರಲಾಗುತ್ತಿದೆ. ಇದಲ್ಲದೆ, ಎಲ್ಲಾ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಭವಿಷ್ಯ ನಿಧಿಯ ಸೌಲಭ್ಯವನ್ನು ನೀಡಲಾಗುವುದು. ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳಿಗೆ ಇಎಸ್‌ಐ ವ್ಯಾಪ್ತಿ ತರಲಾಗುವುದು. 

6. ಪಿಎಫ್, ಗ್ರಾಚ್ಯುಟಿ ಹೆಚ್ಚಾಗುತ್ತದೆ :
ಮೂಲ ವೇತನ ಹೆಚ್ಚಳದಿಂದಾಗಿ, ನೌಕರರ ಪಿಎಫ್ (PF) ಗಾಗಿ ಹೆಚ್ಚು ಹಣವನ್ನು ಕಡಿತಗೊಳಿಸಲಾಗುತ್ತದೆ, ಅಂದರೆ ನಿಮ್ಮ ಭವಿಷ್ಯವು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ. ಪಿಎಫ್ ಜೊತೆಗೆ, ಗ್ರ್ಯಾಚುಟಿ ಕಡೆಗೆ ಕೊಡುಗೆ ಕೂಡ ಹೆಚ್ಚಾಗುತ್ತದೆ. ಅಂದರೆ, ಟೇಕ್ ಹೋಮ್ ಸಂಬಳ ಕಡಿಮೆಯಾಗುತ್ತದೆ ಆದರೆ ನಿವೃತ್ತಿಯ ನಂತರ ಉದ್ಯೋಗಿಗೆ ಹೆಚ್ಚಿನ ಮೊತ್ತ ಸಿಗುತ್ತದೆ. ಅಸಂಘಟಿತ ವಲಯದ ಉದ್ಯೋಗಿಗಳಿಗೂ ಹೊಸ ವೇತನ ಸಂಹಿತೆ ಅನ್ವಯವಾಗಲಿದೆ. ಸಂಬಳ ಮತ್ತು ಬೋನಸ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತವೆ ಮತ್ತು ಪ್ರತಿ ಉದ್ಯಮ ಮತ್ತು ವಲಯದಲ್ಲಿ ಕೆಲಸ ಮಾಡುವ ನೌಕರರ ವೇತನದಲ್ಲಿ ಸಮಾನತೆ ಇರುತ್ತದೆ.

ಇದನ್ನೂ ಓದಿ SBI Yono App Updates: SBI ಗ್ರಾಹಕರಿಗೊಂದು ಸಂತಸದ ಸುದ್ದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News