ನವದೆಹಲಿ : Drinking Tea After Meal: ಕೆಲವರು ಚಹಾವನ್ನು ಬಹಳ ಇಷ್ಟ ಪಡುತ್ತಾರೆ. ಅವರಿಗೆ ಅದು ಎಷ್ಟು ಪ್ರಿಯವಾಗಿರುತ್ತದೆ ಎಂದರೆ ದಿನಕ್ಕೆ ಎಷ್ಟು ಬಾರಿ ಚಹಾ ಸೇವಿಸುತ್ತಾರೆಯೋ ಅವರಿಗೇ ಗೂತ್ತಿರಲಿಕ್ಕಿಲ್ಲ. ಇಷ್ಟ ಎಂದ ಮಾತ್ರಕ್ಕೆ ಯಾವುದೇ ವಸ್ತುವನ್ನು ಅತಿಯಾಗಿ ತಿನ್ನುವುದು ಕುಡಿಯುವುದು ಯಾವತ್ತೂ ಒಳ್ಳೆಯದಲ್ಲ. ಇನ್ನು ಕೆಲವರಿಗೆ ಊಟ ಮಾಡಿದ ತಕ್ಷಣ ಕುಡಿಯವ ಅಭ್ಯಾಸವಿರುತ್ತದೆ. ಇದು ಬಹಳ ಅಪಾಯಕಾರಿ ಅಭ್ಯಾಸ ಎನ್ನುವುದು ಅವರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಊಟ ಮುಗಿಸಿದ ತಕ್ಷಣ ಚಹಾ ಸೇವಿಸುವುದರಿಂದ ಆಗುವ ಅಡ್ಡ ಪರಿಣಾಮಗಳ (Side effects of tea after meal) ಬಗ್ಗೆ ನಾವು ಹೇಳಲಿದ್ದೇವೆ.
ಊಟದ ನಂತರ ಚಹಾ ಸೇವನೆ ಎಷ್ಟು ಅಪಾಯಕಾರಿ :
ಊಟ ಮಾಡಿದ ನಂತರ ಎಂದಿಗೂ ಚಹಾ ಕುಡಿಯಬಾರದು (tea after meal) . ಹಾಗೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಚಹಾದಲ್ಲಿ (Tea) ಕೆಫಿನ್ ಅಂಶ ಇರುತ್ತದೆ. ಇದು ದೇಹದಲ್ಲಿ ಕಾರ್ಟಿಸೋಲ್ ಅಥವಾ ಸ್ಟೀರಾಯ್ಡ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ, ಇದು ಆಸಿಡಿಟಿ, ಮಲಬದ್ಧತೆ (Constipation) ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ : ಅಗಸ್ಟ್ ಅಂತ್ಯಕ್ಕೆ ಕೊರೊನಾ ಮೂರನೇ ಅಲೆ..!
ಊಟದ ನಂತರ ಚಹಾ ಸೇವನೆಯಿಂದಾಗುವ ಅನಾನುಕೂಲಗಳು :
ಹೃದಯದ ಮೇಲೆ ಪರಿಣಾಮ : ಊಟ ಸೇವಿಸಿದ ನಂತರ ಚಹಾ ಕುಡಿಯುವುದರಿಂದ ಹೃದಯ ದುರ್ಬಲಗೊಳ್ಳುತ್ತದೆ. ಸಂಶೋಧನೆಯ ಪ್ರಕಾರ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟದ ನಂತರ ಚಹಾ ಕುಡಿಯುವುದರಿಂದ ಹೃದ್ರೋಗಗಳು (Heart disease) ಕಾಡಬಹುದು.
ರಕ್ತದೊತ್ತಡವನ್ನು ಹೆಚ್ಚಿಸುತ್ತದೆ : ಊಟದ ನಂತರ ಚಹಾ ಕುಡಿಯುವುದರಿಂದ ಬಿಪಿ (Blood pressure) ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಏಕೆಂದರೆ ಚಹಾದಲ್ಲಿ ಕೆಫೀನ್ ಇರುತ್ತದೆ.
ಜೀರ್ಣಕಾರಿ ತೊಂದರೆಗಳು : ಆಹಾರವನ್ನು ಸೇವಿಸಿದ ನಂತರ ಚಹಾವನ್ನು ಸೇವಿಸುವುದರಿಂದ ಜೀರ್ಣಾಂಗ (Digestion) ವ್ಯವಸ್ಥೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗಬಹುದು. ಚಹಾ ಆಸಿಡಿಟಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ಆಲೋವಿರಾ ಜ್ಯೂಸ್ ಕುಡಿದರೆ ಈ ಎಲ್ಲಾ ರೋಗಗಳಿಂದ ದೂರವಿರಬಹುದು
ರಕ್ತದ ಕೊರತೆ: ಊಟದ ನಂತರ ಚಹಾ ಕುಡಿಯುವುದರಿಂದ, ದೇಹವು ಆಹಾರದಲ್ಲಿಣ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇದರಿಂದಾಗಿ ರಕ್ತದಲ್ಲಿ ಹಿಮೋಗ್ಲೋಬಿನ್ (himoglobin) ಕೊರತೆ ಉಂಟಾಗಬಹುದು. ಇದು ರಕ್ತಹೀನತೆಯ ಸಮಸ್ಯೆಗೆ ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ