ನವದೆಹಲಿ : ನೀವು ಇಂದು ಚಲಾವಣೆಯಲ್ಲಿಲ್ಲದ ಅಪರೂಪದ ಅಥವಾ ವಿಶೇಷ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳನ್ನು ಸಂಗ್ರಹಿಸುತ್ತಿರುವವರಾಗಿದ್ದರೆ, ಈಗ ಅವುಗಳನ್ನು ಹರಾಜು ಮಾಡುವ ಮೂಲಕ ಹಣ ಸಂಪಾದಿಸಲು ನಿಮಗೆ ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ, ನಿಮ್ಮ ಮನೆಯಲ್ಲಿ ಕುಳಿತು ಹಳೆಯ ನಾಣ್ಯಗಳಾದ 1, 2 ಮತ್ತು 5 ರೂ ನೋಟುಗಳನ್ನು ಆನ್ಲೈನ್ನಲ್ಲಿ ಸಾವಿರಾರು ರೂಪಾಯಿಗೆ ಹರಾಜು ಮಾಡಬಹುದು. ಈ 1 ರೂಪಾಯಿ ನೋಟಿನ ಬೆಲೆ 7 ಲಕ್ಷ ರೂ. ಇದೆ. ನಿಮ್ಮ ಬಳಿ ಈ ಹಳೆಯ ನೋಟು ಇದ್ರೆ ಇಲ್ಲಿ ಮಾರಾಟ ಮಾಡಿ..
ಸುಮಾರು 26 ವರ್ಷಗಳ ಹಿಂದೆ, ಭಾರತ ಸರ್ಕಾರ(Government of India)ವು 1 ನೋಟನ್ನು ಸ್ಥಗಿತಗೊಳಿಸಿತ್ತು, ಆದರೆ ಅದನ್ನು 2015 ರ ಜನವರಿಯಲ್ಲಿ ಮರುಮುದ್ರಣ ಮಾಡಲಾಯಿತು, ನಂತರ ಅದನ್ನು ಮಾರುಕಟ್ಟೆಯಲ್ಲಿ ಹೊಸ ರೂಪದಲ್ಲಿ ಪರಿಚಯಿಸಲಾಯಿತು. ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡುವ ನೋಟು ಸ್ವಾತಂತ್ರ್ಯ ಪೂರ್ವದ ಯುಗದಾಗಿದೆ. ಈ ವಿಶೇಷ 1 ರೂಪಾಯಿ ನೋಟು 1935 ರಲ್ಲಿ ಬ್ರಿಟಿಷ್ ರಾಜ್ ಅಡಿಯಲ್ಲಿ ಪರಿಚಯಿಸಲಾಯಿತು. ಇದು ಅಂದಿನ ಗವರ್ನರ್ ಜೆ ಡಬ್ಲ್ಯೂ ಕೆಲ್ಲಿಯ ಸಹಿ ಹೊಂದಿದೆ.
ಇದನ್ನೂ ಓದಿ : Gold-Silver Rate Today : ಚಿನ್ನದ ಬೆಲೆಯಲ್ಲಿ ಬದಲಾವಣೆ : ನಿಮ್ಮ ನಗರದಲ್ಲಿ ಪರಿಷ್ಕೃತ ಚಿನ್ನ-ಬೆಳ್ಳಿ ದರಗಳನ್ನು ಪರಿಶೀಲಿಸಿ
1957 ರ ಈ 1 ರೂ. ನೋಟ್ ನಿಮಗೆ 57,000 ರೂ. ಹಣ(Money) ಪಡೆಯಬಹುದು ಮತ್ತು ಅದು 1966 ರ ಆವೃತ್ತಿಯದಾಗಿದ್ರೆ 45,000 ರೂ. ಗಳಿಸಬಹುದು. ಏಕೈಕ ಕ್ಯಾಚ್ ಎಂದರೆ ಅದು ಹಣಕಾಸು ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಹಿರುಭಾಯ್ ಎಂ. ಪಟೇಲ್ ಅವರ ಸಹಿಯನ್ನು ಹೊಂದಿರಬೇಕು. ಇಂದಿರಾ ಗಾಂಧಿಯನ್ನು ಸೋಲಿಸಿದ ನಂತರ ಅಧಿಕಾರಕ್ಕೆ ಬಂದ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಅಧಿಕಾರಾವಧಿಯಲ್ಲಿ 1977 ರಿಂದ 1979 ರವರೆಗೆ ಅವರು ಸೇವೆ ಸಲ್ಲಿಸಿದ್ದರು. ಇದು ಆ ಕಾಲದ ಭಾರತದ ಮೊದಲ ಕಾಂಗ್ರೆಸ್ ಅಲ್ಲದ ಸರ್ಕಾರವಾಗಿತ್ತು.
ಇದನ್ನೂ ಓದಿ : Petrol-Diesel Rate : ಎರಡು ತಿಂಗಳಲ್ಲಿ ಪೆಟ್ರೋಲ್ ಬೆಲೆ ₹10 ಏರಿಕೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ
ನೀವು ಈ ಯಾವುದೇ ನೋಟುಗಳನ್ನು ಹೊಂದಿದ್ದರೆ, ನೀವು ಕಾಯಿನ್ ಬಜಾರ್ನ(Coin Bazaar) ವೆಬ್ಸೈಟ್ಗೆ ಭೇಟಿ ನೀಡಿ.ಅಲ್ಲಿ ನಿಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಸಂಪೂರ್ಣ ವಿಳಾಸದ ವಿವರಗಳನ್ನು ದಾಖಲಿಸುವ ಮೂಲಕ ಅಕೌಂಟ್ ತೆರೆಯಿರಿ. ನಂತರ ನೀವು ವೆಬ್ಸೈಟ್ನಲ್ಲಿ ನಾಣ್ಯಗಳು ಅಥವಾ ನೋಟುಗಳನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು. ಆಸಕ್ತ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸಿ ಅದನ್ನ ಖರೀದಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ