ನವದೆಹಲಿ : Business Opportunity: ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇಶದಲ್ಲಿ ವ್ಯಾಪಾರ ವ್ಯವಹಾರಗಳು ಕೂಡಾ ಕುಸಿದಿದೆ. ಅನೇಕ ವ್ಯವಹಾರಗಳು ಸ್ಥಗಿತಗೊಂಡಿವೆ. ಇನ್ನು ಕೆಲವು ವ್ಯವಹಾರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಆದರೆ, ಆತ್ಮನಿರ್ಭರ ಭಾರತ (Atma nirbhar bharatah) ಮಿಷನ್ ಅಡಿಯಲ್ಲಿ, ಉದ್ಯಮವನ್ನು ಪ್ರಾರಂಭಿಸುವವರಿಗೆ ಕೇಂದ್ರ ಸರ್ಕಾರ 10 ಲಕ್ಷ ರೂಗಳ ಧನ ಸಹಾಯ ನೀಡಲಿದೆ. ಈಗಾಲೇ ಸ್ಥಗಿತಗೊಂಡಿರುವ ವ್ಯವಹಾರವನ್ನು ಮತ್ತೆ ಆರಂಭಿಸಲು ಕೂಡ ಇದರಲ್ಲಿ ಸಹಾಯ ಮಾಡಲಾಗುವುದು.
ಕೇಂದ್ರ ಸರ್ಕಾರದ ಯೋಜನೆಯ ಲಾಭವನ್ನು ಹೀಗೆ ಪಡೆಯಿರಿ :
ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಕೇಂದ್ರ ಸರ್ಕಾರ ನಿಮಗೆ ಸಹಾಯ ಮಾಡಲಿದೆ. ಈ ಯೋಜನೆಯ ಅಡಿಯಲ್ಲಿ ನೀವು ಹೊಸ ಉದ್ಯಮವನ್ನಾದರು ಆರಂಭಿಸಬಹುದು ಅಥವಾ ಹಳೆಯ ವ್ಯವಹಾರವನ್ನು ಮತ್ತೆ ಶುರು ಮಾಡಬಹುದು.
ಇದನ್ನೂ ಓದಿ : Jan Dhan Account Update : ಈ 6 ಬ್ಯಾಂಕುಗಳಲ್ಲಿ Jan Dhan ಖಾತೆ ಇದೆಯಾ? ಹಾಗಿದ್ರೆ ಮನೆಯಲ್ಲಿ ಕುಳಿತು 'ಬ್ಯಾಲೆನ್ಸ್ ಚೆಕ್' ಮಾಡಬಹುದು!
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ :
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು (Pradhana mantri mudra yojana) ಪ್ರಾರಂಭಿಸಿದೆ. ಸಾಲ ತೆಗೆದುಕೊಳ್ಳಲು ಬ್ಯಾಂಕ್ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸುವ ಸಾಮರ್ಥ್ಯವಿಲ್ಲದ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಕಾಟೇಜ್ ಉದ್ಯಮ ಅಥವಾ ಪಾಲುದಾರಿಕೆ ಉದ್ಯಮ ಮಾಡುವ ಯಾರು ಬೇಕಾದರೂ ಈ ಯೋಜನೆಯಡಿ ಸಾಲ ಪಡೆದುಕೊಳ್ಳಬಹುದು.
ಮೂರು ಹಂತಗಳಲ್ಲಿ ಸಾಲ ಸೌಲಭ್ಯ :
ಪ್ರಧಾನ ಮಂತ್ರಿ ಮುದ್ರ ಯೋಜನೆಯಡಿ ಮೂರು ಹಂತಗಳಲ್ಲಿ ಸಾಲ (loan) ನೀಡಲಾಗುತ್ತದೆ. ಸರ್ಕಾರ ಇದನ್ನು ಶಿಶು ಸಾಲ, ಕಿಶೋರ ಸಾಲ ಮತ್ತು ತರುಣ ಸಾಲ ಎಂದು ವಿಂಗಡಿಸಿದೆ.
1.ಶಿಶು ಸಾಲ ಯೋಜನೆ ಅಡಿಯಲ್ಲಿ ಅಂಗಡಿ ತೆರೆಯಲು 50,000 ರೂ.ವರೆಗೆ ಸಾಲ ತೆಗೆದುಕೊಳ್ಳಬಹುದು.
2.ಕಿಶೋರ ಸಾಲ ಯೋಜನೆ ಅಡಿಯಲ್ಲಿ 50,000 ರೂ.ಗಳಿಂದ 5 ಲಕ್ಷ ರೂ.ವರೆಗಿನ ಸಾಲವನ್ನು ತೆಗೆದುಕೊಳ್ಳಬಹುದು.
3. ತರುಣ್ ಸಾಲ ಯೋಜನೆ ಅಡಿಯಲ್ಲಿ ಸಣ್ಣ ಪ್ರಮಾಣದ ಉದ್ಯಮವನ್ನು ಸ್ಥಾಪಿಸಲು 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಸಾಲವನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ : Earn Money Idea : ಈ ₹1 ನೋಟು ನಿಮ್ಮಲಿದ್ರೆ ನೀವು ನಿಮಿಷಗಳಲ್ಲಿ ಗಳಿಸಬಹುದು ₹7 ಲಕ್ಷ : ಹೇಗೆ ಇಲ್ಲಿ ನೋಡಿ
ಯಾರು ಸಾಲ ಪಡೆಯಬಹುದು ?:
ಪ್ರಧಾನ ಮಂತ್ರಿ ಮುದ್ರ ಯೋಜನೆ ಸಣ್ಣ ಉದ್ಯಮಿಗಳಿಗಾಗಿ ಇರುವ ಯೋಜನೆ. ದೊಡ್ಡ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ, ಅದರ ಅಡಿಯಲ್ಲಿ ಸಾಲವನ್ನು ಪಡೆಯಲು ಸಾಧ್ಯವಿಲ್ಲ. ಸಣ್ಣ ಪ್ರಮಾಣದ (Small business) ಅಸೆಮ್ ಬ್ಲಿಂಗ್ ಯುನಿಟ್, ಸರ್ವಿಸ್ ಸೆಕ್ಟರ್, ಅಂಗಡಿಯವರು, ಹಣ್ಣು / ತರಕಾರಿ ಮಾರಾಟಗಾರರು, ಟ್ರಕ್ ನಿರ್ವಾಹಕರು, ಆಹಾರ ಸೇವಾ ಘಟಕಗಳು, ರಿಪೇರ್ ಅಂಗಡಿಗಳು, ಯಂತ್ರ ನಿರ್ವಾಹಕರು, ಸಣ್ಣ ಪ್ರಮಾಣದ ಕೈಗಾರಿಕೆಗಳು, ಕುಶಲಕರ್ಮಿಗಳು ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಈ ಯೋಜನೆಯಡಿ ಸಾಲ ಪಡೆಯಬಹುದು.
ಸಾಲ ಪಡೆಯುವುದು ಎಲ್ಲಿ?
ಪ್ರಧಾನ ಮಂತ್ರಿ ಮುದ್ರ ಯೋಜನೆಯಡಿ ಸರ್ಕಾರಿ ಬ್ಯಾಂಕುಗಳಿಂದ (Bank) ಸಾಲ ಪಡೆಯಬಹುದು. ಇದಕ್ಕಾಗಿ ಗ್ರಾಮೀಣ ಬ್ಯಾಂಕುಗಳು ಸಹ ಸಾಲ ನೀಡುತ್ತಿವೆ. ಸಹಕಾರಿ ಬ್ಯಾಂಕುಗಳಿಂದ ಸಾಲ ಲಭ್ಯವಿದೆ. ಈ ಯೋಜನೆಯಡಿ ಸಾಲ ನೀಡಲು RBI 27 ಬ್ಯಾಂಕ್ಗಳಿಗೆ ಅಧಿಕಾರ ನೀಡಿದೆ. ಇದರಲ್ಲಿ 17 ಖಾಸಗಿ ವಲಯದ ಬ್ಯಾಂಕುಗಳು, 31 ಗ್ರಾಮೀಣ ಬ್ಯಾಂಕುಗಳು, 4 ಸಹಕಾರಿ ಬ್ಯಾಂಕುಗಳು, 36 ಮೈಕ್ರೋ ಫೈನಾನ್ಸ್ ಬ್ಯಾಂಕ್, 25 ಬ್ಯಾಂಕೇತರ ವಲಯದ ಹಣಕಾಸು ಕಂಪನಿಗಳಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು mudra.org.in ಗೆ ಲಾಗಿನ್ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ