New Way To Stop Covid 19 - Coronavirus ತಡೆಗಟ್ಟಲು ಹೊಸ ದಾರಿ ಕಂಡು ಹಿಡಿದ ವಿಜ್ಞಾನಿಗಳು

New Way To Stop Coronavirus - ಅಮೇರಿಕಾದ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೊರೊನಾ ವೈರಸ್ನ ಒಂದು ಪ್ರೋಟೀನ್ ಪ್ಯಾಕೆಟ್  ಕಂಡುಹಿಡಿದಿದ್ದು, ಅದನ್ನು ಟಾರ್ಗೆಟ್ ಮಾಡುವ ಮೂಲಕ ಸೋಂಕು ಹರಡುವುದಕ್ಕು ಮುನ್ನವೇ ಅದನ್ನು ತಡೆಯಬಹುದು.

Written by - Nitin Tabib | Last Updated : Jul 8, 2021, 06:35 PM IST
  • ವಿಶ್ವಾದ್ಯಂತ ವಿಜ್ಞಾನಿಗಳು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ.
  • ಇದೀಗ ಇದರಲ್ಲಿ ಹೊಸ ಯಶಸ್ಸೊಂದು ಲಭಿಸಿದೆ.
  • ಅಮೇರಿಕನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕರೋನಾ ವೈರಸ್ನ ಪ್ರೋಟೀನ್ ಪಾಕೆಟ್ ಅನ್ನು ಪತ್ತೆಹಚ್ಚಿಹಚ್ಚಿದ್ದಾರೆ.
New Way To Stop Covid 19 - Coronavirus ತಡೆಗಟ್ಟಲು ಹೊಸ ದಾರಿ ಕಂಡು ಹಿಡಿದ ವಿಜ್ಞಾನಿಗಳು title=
New Way To Stop Coronavirus (File Photo)

Coronavirus Update - ವಿಶ್ವಾದ್ಯಂತ ವಿಜ್ಞಾನಿಗಳು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ. ಇದೀಗ ಇದರಲ್ಲಿ ಹೊಸ ಯಶಸ್ಸೊಂದು ಲಭಿಸಿದೆ. ಅಮೇರಿಕನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕರೋನಾ ವೈರಸ್ನ ಪ್ರೋಟೀನ್ ಪಾಕೆಟ್ ಅನ್ನು ಪತ್ತೆಹಚ್ಚಿದ್ದು, ಅದನ್ನು ಟಾರ್ಗೆಟ್ ಮಾಡುವ ಮೂಲಕ ಸೋಂಕು ಮುಂದುವರೆಯುವ ಮುನ್ನವೇ ಅದನ್ನು ತಡೆಯಬಹುದು.  ಕರೋನಾ ವೈರಸ್ನ ಮೂರನೇ ಅಲೆಯ ವಿರುದ್ಧದ ಹೋರಾಟದಲ್ಲಿ ಇದು ಸಹಾಯ ಮಾಡಲಿದೆ. ಪ್ರೋಟೀನ್ ರಚನೆಯಲ್ಲಿ ಕರೋನಾ ವೈರಸ್‌ಗಾಗಿ ವಿಜ್ಞಾನಿಗಳು ವಿಶೇಷ ಪಾಕೆಟ್ ಅನ್ನು ಕಂಡುಹಿಡಿದಿದ್ದಾರೆ, ಇದು ವೈರಸ್‌ನ್ನು ಒಂದೇ ಸ್ಥಳದಲ್ಲಿ ಕಟ್ಟಿಹಾಕುತ್ತದೆ. ಈ ಪ್ರೋಟಿನ್ ಸಹಾಯದಿಂದ ಕೊರೊನಾ ವೈರಸ್ ಹಾಗೂ ಕೊರೊನಾ ವೈರಸ್ (Covid-19 Virus) ಕೆಲಸವನ್ನು ನಿಲ್ಲಿಸಬಹುದಾದ ಔಷಧಿಯೊಂದನ್ನು ತಯಾರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಔಷಧಿ ತಯಾರಿಕೆಗಾಗಿ ಬಳಸಲಾಗುವ ಮುಖ್ಯ ವೈರಸ್ ಪ್ರೋಟೀನ್ ಗಳಲ್ಲಿ Nsp16 ಕೂಡ ಒಂದು. ಓರ್ವ ವ್ಯಕ್ತಿ ವೈರಸ್ ಸೋಂಕಿಗೆ ಗುರಿಯಾದ ಬಳಿಕ ಇದು ಆತನಲ್ಲಿ ಸೋಂಕು ಹರಡುವಿಕೆಯನ್ನು ತಡೆಯುತ್ತದೆ. ವ್ಯಕ್ತಿ ಗಂಭೀರ ಅನಾರೋಗ್ಯಕ್ಕೆ ಒಳಗಾಗುವ ಮೊದಲೇ ಆತನಲ್ಲಿನ ವೈರಸ್ ಅನ್ನು ಇದು ತಡೆಯುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಕುರಿತು ಉಲ್ಲೇಖಿಸಿರುವ ಅಮೆರಿಕಾದ ನಾರ್ತ್ ವೆಸ್ಟ್ ಯುನಿವೆರ್ಸಿಟಿಯ Feinberg School Of Medicine ಅಧ್ಯಯನಕಾರರು, ವಿಜ್ಞಾನಿಗಳು ಕೊರೊನಾ ವೈರಸ್ ನ ಮೂರನೇ ಅಲೆಗೆ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ  Feinberg School Of Medicine ನ ಮೈಕ್ರೋಬಯಾಲಾಜಿ-ಇಮ್ಯೂನಾಲಾಜಿ ಪ್ರೊಫೆಸ್ಸರ್ Karla Satchell, "ಮೂರನೇ ಅಲೆ (Coronavirus Third Wave) ಬರಬಾರದು ಎಂದು ನಾನು ದೇವರ ಬಳಿ ಪ್ರಾರ್ಥಿಸುತ್ತೇನೆ, ಆದರೆ ನಾವು ಅದಕ್ಕಾಗಿ ಸಿದ್ಧರಾಗಿರಲಿದ್ದೇವೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ-Delta Variant: ಅಮೇರಿಕಾದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಡೆಲ್ಟಾ ರೂಪಾಂತರಿ

ಇದಕ್ಕೂ ಮೊದಲು ಈ ತಂಡ NPS 16 ಹೆಸರಿನ ವೈರಸ್ ಪ್ರೋಟೀನ್ ಸ್ಟ್ರಕ್ಚರ್ ನ ಮ್ಯಾಪಿಂಗ್ ನಡೆಸಿತ್ತು. ಈ ಪ್ರೋಟಿನ್ ಎಲ್ಲಾ ಕೊರೊನಾ ವೈರಸ್ ಗಳಲ್ಲಿ ಸಿಗುತ್ತದೆ. ಸೈನ್ಸ್ ಸಿಗ್ನಲಿಂಗ್ ಹೆಸರಿನ ಜರ್ನಲ್ ನಲ್ಲಿ ಪ್ರಕಟಗೊಂಡ ಲೇಟೆಸ್ಟ್ ವರದಿಯಲ್ಲಿ ಈ ಕುರಿತು ಮಹತ್ವದ ಮಾಹಿತಿ ನೀಡಲಾಗಿದ್ದು, ಇದನ್ನು ಭವಿಷ್ಯದ ಕೊರೊನಾ ವೈರಸ್ ಜೊತೆಗೆ SARS-CoV-2 ವಿರುದ್ಧ ಔಷಧಿಯ ಅಭಿವೃದ್ಧಿಗೆ ಸಹಾಯ ಸಿಗಲಿದೆ ಎನ್ನಲಾಗಿದೆ.

ಇದನ್ನೂ ಓದಿ- Coronaಗೆ ಬಲಿಯಾದ China Corona Vaccine ಟ್ರಯಲ್ ನ ಪ್ರಮುಖ ವಿಜ್ಞಾನಿ!

ಈ ಕುರಿತು ಮಾತನಾಡುವ  Satchell, "SARS-CoV-2 ಅಥವಾ ಕೊವಿಡ್ -19 ಮಹಾಮಾರಿ ಹಾಗೂ ಭವಿಷ್ಯದ ಕೊರೊನಾ ವೈರಸ್ ವಿರುದ್ಧ ಹೋರಾಡಲು ಔಷಧಿಯ ಹುಡುಕಾಟದಲ್ಲಿ ಹೊಸ ಪದ್ಧತಿಗಳ ಅವಶ್ಯಕತೆ ಇದೆ. ಸೋಂಕನ್ನು ಅದರ ಆರಂಭಿಕ ಹಂತದಲ್ಲಿಯೇ ತಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ. ಒಂದು ವೇಳೆ ನಿಮ್ಮ ಅಕ್ಕ-ಪಕ್ಕ ಯಾವುದೇ ಓರ್ವ ವ್ಯಕ್ತಿ ಕೊರೊನಾ ಸೋಂಕಿಗೆ ಗುರಿಯಾದರೆ, ನೀವು ಔಷಧಿ ಮಾರಾಟಗಾರರ ಬಳಿ ಹೋಗಿ ಔಷಧಿಯನ್ನು ಖರೀದಿಸಿ ಅದನ್ನು ಮೂರರಿಂದ ನಾಲ್ಕು ದಿನಗಳವರೆಗೆ ಸೇವಿಸಬೇಕು. ಒಂದು ವೇಳೆ ನೀವು ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ಕೇವಲ ಸ್ವಲ್ಪೇ ಸಮಯದಲ್ಲಿ ನೀವು ಚೇತರಿಸಿಕೊಳ್ಳುವಿರಿ"  ಎಂದು ಹೇಳಿದ್ದಾರೆ. 

ಇದನ್ನೂ ಓದಿ-Joe Biden - ಅಮೆರಿಕ ವಾರದ ಅಂತ್ಯದ ವೇಳೆ 160 ಮಿಲಿಯನ್ ಜನರಿಗೆ ಲಸಿಕೆ ಗುರಿ ತಲುಪಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News