ಈ ಐದು ಆಹಾರ ತಿಂದರೆ ನಿಮ್ಮ ಲಿವರ್ ಹೆಲ್ತಿಯಾಗಿರುತ್ತದೆ.

ಲಿವರ್ ನಮ್ಮ ದೇಹದ ಮಹತ್ವಪೂರ್ಣವಾದ ಅಂಗವಾಗಿದೆ. ಇದು ಜೀರ್ಣ ಕ್ರಿಯೆಯಲ್ಲಿ ಅತ್ಯಂತ ಮುಖ್ಯ ಭೂಮಿಕೆ ನಿಭಾಯಿಸುತ್ತದೆ.  ಜೊತೆಗೆ ಇಮ್ಯೂನಿಟಿಯನ್ನೂ  ಹೆಚ್ಚಿಸುತ್ತದೆ. ದೇಹದಲ್ಲಿನ ವಿಷಯುಕ್ತ ಅಂಶಗಳನ್ನೂ ಹೊರತೆಗೆಯುತ್ತದೆ.

Written by - Ranjitha R K | Last Updated : Jun 25, 2021, 12:20 PM IST
  • ಲಿವರ್ ನಮ್ಮ ದೇಹದ ಮಹತ್ವಪೂರ್ಣವಾದ ಅಂಗವಾಗಿದೆ.
  • ಇದು ಜೀರ್ಣ ಕ್ರಿಯೆಯಲ್ಲಿ ಅತ್ಯಂತ ಮುಖ್ಯ ಭೂಮಿಕೆ ನಿಭಾಯಿಸುತ್ತದೆ.
  • ಜೊತೆಗೆ ಇಮ್ಯೂನಿಟಿಯನ್ನೂ ಹೆಚ್ಚಿಸುತ್ತದೆ.
ಈ ಐದು ಆಹಾರ ತಿಂದರೆ ನಿಮ್ಮ ಲಿವರ್ ಹೆಲ್ತಿಯಾಗಿರುತ್ತದೆ.  title=
ಲಿವರ್ ನಮ್ಮ ದೇಹದ ಮಹತ್ವಪೂರ್ಣವಾದ ಅಂಗವಾಗಿದೆ. (file photo zee news)

ನವದೆಹಲಿ : ಲಿವರ್ ನಮ್ಮ ದೇಹದ ಮಹತ್ವಪೂರ್ಣವಾದ ಅಂಗವಾಗಿದೆ. ಇದು ಜೀರ್ಣ ಕ್ರಿಯೆಯಲ್ಲಿ ಅತ್ಯಂತ ಮುಖ್ಯ ಭೂಮಿಕೆ ನಿಭಾಯಿಸುತ್ತದೆ.  ಜೊತೆಗೆ ಇಮ್ಯೂನಿಟಿಯನ್ನೂ  (Immunity) ಹೆಚ್ಚಿಸುತ್ತದೆ. ದೇಹದಲ್ಲಿನ ವಿಷಯುಕ್ತ ಅಂಶಗಳನ್ನೂ ಹೊರತೆಗೆಯುತ್ತದೆ. ಹಾಗಾಗಿ ಸ್ವಸ್ಥ ಆರೋಗ್ಯಕ್ಕಾಗಿ ಸ್ವಸ್ಥ ಲಿವರ್ (Healthy liver) ಹೊಂದಿರುವುದು ಬಹಳ ಮುಖ್ಯ.  ವಿಶೇಷಜ್ಞರ ಪ್ರಕಾರ ಲಿವರ್ ಆರೋಗ್ಯ ಕಾಪಾಡುವುದು ತುಂಬಾ ಸುಲಭ.  ಇದಕ್ಕಾಗಿ ಆರೋಗ್ಯಕರ ಜೀವನ ಶೈಲಿಯನ್ನು ನಾವು ಅನುಸರಿಸಬೇಕು. ಲಿವರ್ ಆರೋಗ್ಯ ಕಾಪಾಡುವುದು ಹೇಗೆ ಎಂಬುದನ್ನು ಇವತ್ತು ತಿಳಿದುಕೊಳ್ಳೋಣ.

1. ಲಿಂಬೆ ಹಣ್ಣು: 
ಲಿಂಬೆ ಹಣ್ಣು ಲಿವರ್ ಅನ್ನು (lemon for liver health) ಸ್ವಸ್ಥವಾಗಿಡುತ್ತದೆ.  ಇದರಲ್ಲಿ  ಸಿಗುವ ಡಿ ಲಿಮೊನೆನೆ ಎಂಬ ಹೆಸರಿನ ಪೋಷಕಾಂಶಲಿವರ್ ಕೋಶಗಳನ್ನು ಸ್ವಸ್ಥವಾಗಿಡುತ್ತದೆ.  ಹಾಗಾಗಿ ನಿಯಮಿತ ರೂಪದಲ್ಲಿ ನಿಂಬುಪಾನಿ ಕುಡಿದರೆ ಲಿವರ್ ಸ್ವಸ್ಥವಾಗಿರುತ್ತದೆ.

ಇದನ್ನೂ ಓದಿ : Drinking Milk : ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ರೆ, ತಪ್ಪದೆ ಇದನ್ನು ಓದಿ 

2. ಗ್ರೀನ್ ಟೀ :
ಗ್ರೀನ್ ಟೀಯಿಂದ (Green tea) ಶರೀರಕ್ಕೆ ಹಲವು ರೀತಿಯ ಲಾಭ ಇದೆ. ದೇಹದಲ್ಲಿರುವ ವಿಷಯುಕ್ತ ಕಣಗಳನ್ನು ಇದು ದೇಹದಿಂದ ಹೊರಕ್ಕೆ ತೆಗೆಯುತ್ತದೆ.  ನಿಯಮಿತ ರೂಪದಲ್ಲಿ ಗ್ರೀನ್ ಟೀ ಕುಡಿದರೆ ದೇಹದಲ್ಲಿ ಕ್ಯಾನ್ಸರ್ (Cancer) ಕಾರಕ ಅಂಶಗಳೂ ಕೊನೆಯಾಗುತ್ತದೆ.

3. ಬೆಳ್ಳುಳ್ಳಿ:
ಲಿವರ್ ಆರೋಗ್ಯ ಕಾಪಾಡುವಲ್ಲಿ ಬೆಳ್ಳುಳ್ಳಿ (Garlic) ಪಾತ್ರ ಬಹಳ ದೊಡ್ಡದು.  ಇದು ಲಿವರ್ ನಲ್ಲಿರುವ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಇವು ಲಿವರ್ ನ್ನು ಸ್ವಚ್ಛಗೊಳಿಸುತ್ತದೆ.  ಜೊತೆಗೆ ಲಿವರ್ ಹಾನಿಗೊಳ್ಳುವುದನ್ನು ತಪ್ಪಿಸುತ್ತದೆ. ಲಿವರ್ ತಾಕತ್ತನ್ನುಹೆಚ್ಚಿಸುತ್ತದೆ.

4.ಅರಸಿಣ :
ಲಿವರ್ ನ್ನು ಸ್ವಚ್ಚಗೊಳಿಸಬಲ್ಲ ಸರ್ವೋತ್ತಮ ಆಹಾರ ಅರಸಿಣ (Turmeric) ಎಂದು ಹೇಳಲಾಗುತ್ತದೆ. ಇದು ಲಿವರನ್ನು ಡಿಟಾಕ್ಸಿಫೈ ಮಾಡುತ್ತದೆ.  ಕಾಲು ಚಮಚ ನ್ನು ಅರಸಿಣವನ್ನು ಒಂದು ಗ್ಲಾಸ್ ನೀರಿನಲ್ಲಿ (water) ಬೆರೆಸಿ ಕುಡಿದರೆ ನಿಮ್ಮ ಲಿವರ್ ಮಜಬೂತಾಗುತ್ತದೆ.

ಇದನ್ನೂ ಓದಿ : Weight Loss Tips : ನಿತ್ಯ ಶುಂಠಿಯನ್ನು ಈ ರೀತಿ ಬಳಸಿದರೆ ಬಹುಬೇಗ Weight Loss ಮಾಡಿಕೊಳ್ಳಬಹುದು

5. ಬೀಟ್ರೂಟ್ :
ಬಿಟ್ರೂಟಿನಲ್ಲಿ (Beetroot) ಬಿಟಾ ಕೆರೋಟಿನ್ ಎಂಬ  ಅಂಶವಿದೆ.  ಇದು ಲಿವರನ್ನು ಉತ್ತೇಜಿತಗೊಳಿಸುತ್ತದೆ.  ಜೊತೆಗೆ ಅದರ ಕಾರ್ಯಶೈಲಿಯಲ್ಲಿ ಸುಧಾರಣೆ ತರುತ್ತದೆ. ಇದ್ನ್ನು ಪ್ರಾಕೃತಿಕ ರಕ್ತ ಶೋಧಕ ಎಂದು ಕರೆಯಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News