IND vs NZ : WTC ಫೈನಲ್ ನಲ್ಲಿ ದಾಖಲೆ ಬರೆದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ!

ಟೆಸ್ಟ್ ಫೈನಲ್‌ನಲ್ಲಿ ಭಾರತ ಪರ 4 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ.

Last Updated : Jun 23, 2021, 03:35 PM IST
  • WTCನ ಫೈನಲ್‌ನಲ್ಲಿ ಟೀಂ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ದಾಖಲೆ
  • ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್‌ ಕಬಳಿಸುವ ಮೂಲಕ ಸಾಧನೆ
  • ಟೆಸ್ಟ್ ಫೈನಲ್‌ನಲ್ಲಿ ಭಾರತ ಪರ 4 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆ
IND vs NZ : WTC ಫೈನಲ್ ನಲ್ಲಿ ದಾಖಲೆ ಬರೆದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ! title=

ನವದೆಹಲಿ : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌(WTC)ನ ಫೈನಲ್‌ನಲ್ಲಿ ಟೀಂ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ದಾಖಲೆ ಬರೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್‌ ಕಬಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಟೆಸ್ಟ್ ಫೈನಲ್‌ನಲ್ಲಿ ಭಾರತ ಪರ 4 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಮೊಹಮ್ಮದ್ ಶಮಿ(Mohammed Shami) ಪಾತ್ರರಾಗಿದ್ದಾರೆ. ಮೊಹಮ್ಮದ್ ಶಮಿ ಈ ವಿಷಯದಲ್ಲಿ ಮೊಹಿಂದರ್ ಅಮರನಾಥ್, ಜಹೀರ್ ಖಾನ್, ಆರ್.ಪಿ. ಸಿಂಗ್ ಮತ್ತು ಇರ್ಫಾನ್ ಪಠಾಣ್ ಅವರಂತಹ ದಿಗ್ಗಜ ಆಟಗಾರರನ್ನು ಹಿಂದಿಕ್ಕಿದ್ದಾರೆ. 1983 ರ ವಿಶ್ವಕಪ್ ಫೈನಲ್ ನಲ್ಲಿ ಮೊಹಿಂದರ್ ಅಮರನಾಥ್ 12 ರನ್ ಗಳಿಗೆ 3 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ : WTC Final 2021: ಭಾರತಕ್ಕೆ 32 ರನ್ ಗಳ ಮುನ್ನಡೆ, ಎರಡನೇ ಇನಿಂಗ್ಸ್ 64/2

ಇದರ ನಂತರ 2007 ರ ಟಿ 20 ವಿಶ್ವಕಪ್ ಫೈನಲ್‌(T20 WorldCup Final)ನಲ್ಲಿ ಇರ್ಫಾನ್ ಪಠಾಣ್ 16 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರು. 2007 ರ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಆರ್.ಪಿ. ಸಿಂಗ್ 26 ರನ್‌ಗಳಿಗೆ 3 ವಿಕೆಟ್ ಕಬಳಿಸಿ ದಾಖಲೆ ಮಾಡಿದ್ದರು. 2000 ರಲ್ಲಿ ನಡೆದ ಐಸಿಸಿ ಏಕದಿನ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ 27 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರು. 2002 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಹರ್ಭಜನ್ ಸಿಂಗ್ 27 ರನ್‌ಗಳಿಗೆ 3 ವಿಕೆಟ್ ಕಬಳಿಸಿದ್ದರು. 

ಇದನ್ನೂ ಓದಿ : WTC Final 2021: ಸಾಧಾರಣ ಮೊತ್ತಕ್ಕೆ ಕುಸಿದ ಭಾರತ, ಸುಸ್ಥಿತಿಯಲ್ಲಿ ಕೀವಿಸ್ ತಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News