Vaccination Certificate : ಕರೋನಾ ಲಸಿಕೆ ಹಾಕಿಸಿಕೊಂಡರೆ ಮಾತ್ರ Term Insurance..!

ಕರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಮೆಯನ್ನು ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ.  ಅನೇಕ ವಿಮಾ ಕಂಪನಿಗಳು ಈಗ ಟರ್ಮ್ ಇನ್ಶುರೆನ್ಸ್‌ಗೆ ವ್ಯಾಕ್ಸಿನೇಷನ್ ಕಡ್ಡಾಯ ಎಂಬ ಷರತ್ತು ವಿಧಿಸಿವೆ. ಕರೋನಾ ಲಸಿಕೆ ಹಾಕಿಸಿಕೊಂಡಿಲ್ಲ ಎಂದಾದರೆ  ಟರ್ಮ್ ಇನ್ಶುರೆನ್ಸ್ ಸಿಗುವುದಿಲ್ಲ.

Written by - Ranjitha R K | Last Updated : Jun 10, 2021, 10:39 AM IST
  • ನಿಯಮಗಳನ್ನು ಬಿಗಿಗೊಳಿಸಿದ ವಿಮಾ ಕಂಪನಿಗಳು
  • ಕರೋನಾ ಲಸಿಕೆ ಹಾಕಿಸಿಕೊಂಡರೆ ಮಾತ್ರ ಟರ್ಮ್ ಇನ್ಶುರೆನ್ಸ್
  • ಇನ್ಶುರೆನ್ಸ್ ಪಡೆಯಬೇಕಾದರೆ ವಾಕ್ಸಿನೇಷನ್ ಸರ್ಟಿಫಿಕೇಟ್ ಅಗತ್ಯ
 Vaccination Certificate : ಕರೋನಾ ಲಸಿಕೆ ಹಾಕಿಸಿಕೊಂಡರೆ ಮಾತ್ರ Term Insurance..! title=
ನಿಯಮಗಳನ್ನು ಬಿಗಿಗೊಳಿಸಿದ ವಿಮಾ ಕಂಪನಿಗಳು (photo zee news)

ನವದೆಹಲಿ : ಕರೋನಾ ಸಾಂಕ್ರಾಮಿಕ (Coronavirus) ರೋಗದ ಹಿನ್ನೆಲೆಯಲ್ಲಿ ವಿಮೆಯನ್ನು ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ.  ಅನೇಕ ವಿಮಾ ಕಂಪನಿಗಳು (Insurance company) ಈಗ ಟರ್ಮ್ ಇನ್ಶುರೆನ್ಸ್‌ಗೆ ವ್ಯಾಕ್ಸಿನೇಷನ್ ಕಡ್ಡಾಯ ಎಂಬ ಷರತ್ತು ವಿಧಿಸಿವೆ. ಕರೋನಾ ಲಸಿಕೆ ಹಾಕಿಸಿಕೊಂಡಿಲ್ಲ ಎಂದಾದರೆ  ಟರ್ಮ್ ಇನ್ಶುರೆನ್ಸ್ (term insurance) ಸಿಗುವುದಿಲ್ಲ. ಕರೋನಾ ವೈರಸ್ ಹಿನ್ನೆಲೆಯಲ್ಲಿ ವಿಮೆ ಕ್ಲೈಂ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಹಾಗಾಗಿ ವಿಮಾ ಕಂಪನಿಗಳು ಇದೀಗ ಕೆಲ ನಿಯಮಗಳನ್ನು ಬದಲಾಯಿಸಿದೆ. ಈಗ ಟರ್ಮ್ ಇನ್ಶುರೆನ್ಸ್ ಪಡೆಯುವುದು ಅಷ್ಟು ಸುಲಭವಲ್ಲ. 

ಟರ್ಮ್ ಇನ್ಶುರೆನ್ಸ್ ಪಡೆಯಬೇಕಾದರೆ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ತೋರಿಸಬೇಕು : 
ವಿಮಾ ಕಂಪನಿಗಳಾದ Max Life ಮತ್ತು Tata AIA ಇನ್ಶುರೆನ್ಸ್ ಖರೀದಿ ಸಂದರ್ಭದಲ್ಲಿ ವ್ಯಾಕ್ಸಿನೇಷನ್  ಸರ್ಟಿಫಿಕೇಟ್ ತೋರಿಸುವುದು ಕಡ್ಡಾಯ ಬ ನಿಯಮವನ್ನು ತಂದಿದೆ. ವರದಿಯ ಪ್ರಕಾರ, ಮ್ಯಾಕ್ಸ್ ಲೈಫ್ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವಾಕ್ಸಿನೇಷನ್ ಸರ್ಟಿಫಿಕೇಟ್ (Vaccination certificate) ಇದ್ದರೆ ಮಾತ್ರ ವಿಮೆಯನ್ನು ಮಾರಾಟ ಮಾಡುತ್ತಿದೆ. ಇನ್ನು ಟಾಟಾ ಎಐಎ ಎಲ್ಲಾ ವಯಸ್ಸಿನ ಜನರಿಗೆ ಕನಿಷ್ಠ ಒಂದು ಲಸಿಕೆ ಡೋಸ್ ನಂತರ ವಿಮೆಯನ್ನು ಜಾರಿ ಮಾಡುತ್ತಿದೆ. 

ಇದನ್ನೂ ಓದಿ : PM Kisan Yojana : ಒಂದೇ ಸಲ ಎರಡು ಕಂತಿನ ಹಣ ಪಡೆಯಲು ಶೀಘ್ರವೇ ಈ ಕೆಲಸ ಮಾಡಿ

ICICI Prudential, Tata AIA and Aegon Life ಮೊದಲಾದ ಕಂಪನಿಗಳು ವ್ಯಾಕ್ಸಿನೇಶನ್ ನಂತರ 7-15 ದಿನ ಕೂಲಿಂಗ್ ಆಫ್ ಪಿರಿಯಡ್ಸ್  ಇಡುತ್ತವೆ.  ಈ ಹೊತ್ತಿನಲ್ಲಿ ಹೊಸ ಪಾಲಿಸಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.  ವ್ಯಾಕ್ಸಿನ್ (Vaccine) ಹಾಕಿದ ಬಳಿಕವೂ ಕೆಲವು ಪಾಲಿಸಿದಾರರಲ್ಲಿ ಅತಿ ಸಂವೇದನಶೀಲ ರಿಯಾಕ್ಷನ್ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಸಿಐಸಿಐ  ಪ್ರುಡೆನ್ಶಿಯಲ್  ಹೇಳಿದೆ.

ವಿಮಾ ಕಂಪನಿಗಳ  ಉತ್ತರ:
ತಮ್ಮ ಗ್ರಾಹಕರ ವಿತ್ತೀಯ ಸುರಕ್ಷತೆಗಾಗಿ ಅವರ ಹಿತದ ಎಲ್ಲಾ ಅಂಶವನ್ನು ಪರಿಶೀಲಿಸಲಾಗುತ್ತದೆ ಎಂದು ಟಾಟಾ ಎಐಎ (TATA AIA) ಹೇಳಿದೆ.  ವಾಸ್ತವಾಂಶಗಳ ಹಿನ್ನೆಲೆಯಲ್ಲಿ ನಮ್ಮ ನೀತಿ  ನಿರ್ಧಾರಿತವಾಗುತ್ತದೆ.  ಗ್ರಾಹಕರಿಗೆ ನೆರವಾಗುವುದರ ಜೊತೆಗೆ ವಿವೇಕಪೂರ್ಣವಾಗಿ ಇರಬೇಕಾಗುತ್ತದೆ ಎಂದು ಅದು ಹೇಳಿದೆ. ಆದರೆ Max Life ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಇದನ್ನೂ ಓದಿ : Post Office: ಪೋಸ್ಟ್ ಆಫೀಸ್‌ನೊಂದಿಗೆ ಕೇವಲ ₹5000 ಹೂಡಿಕೆ ಮಾಡಿ ಬುಸಿನೆಸ್ಸ್ ಪ್ರಾರಂಭಿಸಿ

ರಿಸ್ಕ್ ಮ್ಯಾನೇಜ್ಮೆಂಟ್ ಬಿಗಿಗೊಳಿಸಿದ ವಿಮಾಕಂಪನಿಗಳು :
ಕರೋನಾ (Coronavirus) ಮಹಾಮಾರಿ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ರಿಸ್ಕ್ ಮ್ಯಾನೇಜ್ಮೆಂಟ್ ನಿಯಮಗಳನ್ನು ಬಿಗಿಗೊಳಿಸಿವೆ.  ಕರೋನಾ ಎರಡನೇ ಅಲೆಯ ವೇಳೆ  ಜೀವ ವಿಮೆ ಕಂಪನಿಗಳ ಕ್ಲೈಮ್ ನಲ್ಲಿ ಭಾರೀ ಏರಿಕೆ ಕಂಡಿದೆ. ಹಾಗಾಗಿ ರಿಸ್ಕ್ ಮ್ಯಾನೇಜ್ಮೆಂಟ್ ನಿಯಮಗಳನ್ನು  ಇನ್ನಷ್ಟು ಬಿಗಿ ಗೊಳಿಸಿವೆ.  ಹೋಂ ಕ್ವಾರಂಟೈನ್ ಮೂಲಕ ಕೊವಿಡ್ (COVID- 19)  ಗುಣಮುಖವಾದರೆ ಯಾವ ಕಂಪನಿ ಕೂಡಾ ಮೂರು ತಿಂಗಳ ಅವಧಿಗೆ ಟರ್ಮ್ ಇನ್ಶೂರೆನ್ಶ್ ನೀಡುತ್ತಿಲ್ಲ.  ಈಗ ಕಂಪನಿಗಳು ಸಂಪೂರ್ಣ ಮೆಡಿಕಲ್ ಟೆಸ್ಟ್ ಮಾಡಲು ಒತ್ತಾಯಿಸುತ್ತಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News