ಆಸ್ಟ್ರೇಲಿಯಾದ ಬ್ರಾಡ್ಕಾಸ್ಟಿಂಗ್ ಕಾರ್ಪ್ಗೆ ನೀಡಿದ ಸಂದರ್ಶನದಲ್ಲಿ, ಕ್ರೂಗರ್ ತಮ್ಮ ದೀರ್ಘಾಯುಷ್ಯದ ಗುಟ್ಟನ್ನು ಹೇಳಿದ್ದಾರೆ.
ನವದೆಹಲಿ : ಆಸ್ಟ್ರೇಲಿಯಾದ ಈ ವ್ಯಕ್ತಿಯ ವಯಸ್ಸು 111. ವಯಸ್ಸು ಇಷ್ಟಾದರೂ, ಈ ವ್ಯಕ್ತಿ ಆರೋಗ್ಯವಂತರಾಗಿದ್ದಾರೆ. ಬಹಳ ಚುರುಕಾಗಿದ್ದಾರೆ. ಇದೀಗ ಈ ವ್ಯಕ್ತಿ ತಮ್ಮ ಆರೋಗ್ಯದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ತಾನು ಸೇವಿಸುತ್ತಿದ್ದ ಆಹಾರದ ಬಗ್ಗೆಯೂ ಹೇಳಿದ್ದಾರೆ. ಅಲ್ಲದೆ ತನ್ನ ಜೀವನ ಶೈಲಿಯ ಬಗ್ಗೆಯೂ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಿವೃತ್ತ ಪಶುಪಾಲಕರಾದ ಡೆಕ್ಸ್ಟರ್ ಕ್ರುಗರ್ (Dexter Kruger) ನಿಜವಾದ ವಯಸ್ಸು, 111 ವರ್ಷ 124 ದಿನಗಳು.
ಆಸ್ಟ್ರೇಲಿಯಾದ ಬ್ರಾಡ್ಕಾಸ್ಟಿಂಗ್ ಕಾರ್ಪ್ಗೆ ನೀಡಿದ ಸಂದರ್ಶನದಲ್ಲಿ, ಕ್ರೂಗರ್ ತಮ್ಮ ದೀರ್ಘಾಯುಷ್ಯದ ಗುಟ್ಟನ್ನು ಹೇಳಿದ್ದಾರೆ. ವಾರಕ್ಕೊಮ್ಮೆ ಸೇವಿಸುವ ಈ ಚಿಕನ್ ಫುಡ್ ಕ್ರೂಗರ್, ದೀರ್ಘಾಯುಷ್ಯಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.
ಕ್ರೂಗರ್, 'ಕೋಳಿ ಮೆದುಳನ್ನು ತಿನ್ನುತ್ತಿದ್ದರು ಎಂದು ಹೇಳಿದ್ದಾರೆ, ಕೋಳಿಯ ಮೆದುಳು ಅತೀ ಸಣ್ಣದಾಗಿದ್ದರೂ, ತಿನ್ನಲು ಬಹಳ ರುಚಿಕರವಾಗಿದೆ ಎಂದು, ಕ್ರೂಗರ್ ಹೇಳಿದ್ದಾರೆ.
ಕ್ರೂಗರ್ ಅತ್ಯಂತ ಬುದ್ದಿವಂತ ವ್ಯಕ್ತಿಯಾಗಿದ್ದು ಅವರ ಮೆದುಳು ಬಹಳ ಚುರುಕಾಗಿದೆ ಎಂದು, ನರ್ಸಿಂಗ್ ಹೋಮ್ ಮ್ಯಾನೇಜರ್ ಮೆಲಾನಿ ಕ್ಯಾಲ್ವರ್ಟ್ ಹೇಳಿದ್ದಾರೆ. , '111 ನೇ ವಯಸ್ಸಿನಲ್ಲಿಯೂ ಅವರ ಮೆದುಳು ಅತ್ಯಂತ ಚುರುಕಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಕ್ರೂಗರ್ ಅವರ 74 ವರ್ಷ ವಯಸ್ಸಿನ ಮಗ ಗ್ರೆಗ್ ತನ್ನ ದೀರ್ಘಾಯುಷ್ಯಕ್ಕೆ ತಂದೆ ಕ್ರೂಗರ್ ಅವರ ಸರಳ ಜೀವನ ಶೈಲಿಯೇ ಕಾರಣ ಎಂದು ಹೇಳಿದ್ದಾರೆ.