Baby Shamili: ಬೇಬಿ ಶಾಮಿಲಿ... ಈ ಹೆಸರು ಕೇಳದವರುಂಟೇ? ಅಂದು ಬಾಲ ಕಲಾವಿದೆಯಾಗಿ ನಟಿಸಿ ಅದೆಷ್ಟೋ ಹಿಟ್ ಸಿನಿಮಾಗಳನ್ನು ನೀಡಿದವರು. ಆದರೆ ಇಂದು ಆಕೆಯ ಸುಳಿವೇ ಇಲ್ಲದಂತಾಗಿದೆ. ಅಷ್ಟಕ್ಕೂ ಆ ನಟಿ ಎಲ್ಲಿದ್ದಾರೆ? ಮದುವೆಯಾಗಿದ್ಯಾ? ಈಗ ಆಕೆಯ ವಯಸ್ಸೆಷ್ಟು? ಎಂಬೆಲ್ಲಾ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಬೇಬಿ ಶಾಮಿಲಿ... ಈ ಹೆಸರು ಕೇಳದವರುಂಟೇ? ಅಂದು ಬಾಲ ಕಲಾವಿದೆಯಾಗಿ ನಟಿಸಿ ಅದೆಷ್ಟೋ ಹಿಟ್ ಸಿನಿಮಾಗಳನ್ನು ನೀಡಿದವರು. ಆದರೆ ಇಂದು ಆಕೆಯ ಸುಳಿವೇ ಇಲ್ಲದಂತಾಗಿದೆ. ಅಷ್ಟಕ್ಕೂ ಆ ನಟಿ ಎಲ್ಲಿದ್ದಾರೆ? ಮದುವೆಯಾಗಿದ್ಯಾ? ಈಗ ಆಕೆಯ ವಯಸ್ಸೆಷ್ಟು? ಎಂಬೆಲ್ಲಾ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಹಲವಾರು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿಯೇ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದ ನಟಿ ಬೇಬಿ ಶಾಮಿಲಿ, ತಮ್ಮ ಮುದ್ದಾದ ಮಾತುಗಳಿಂದಲೇ ಜನರನ್ನು ಆಕರ್ಷಿಸುತ್ತಿದ್ದರು.
ಜಗತ್ತೇ ಅರಿಯದ ವಯಸ್ಸಲ್ಲಿ ಅದೆಷ್ಟೋ ಅಭಿಮಾನಿಗಳನ್ನು ಗಳಿಸಿದ್ದ ಬೇಬಿ ಶಾಮಿಲಿಗೆ ಆಗ ವಿಶಿಷ್ಟವಾದ ಐಡೆಂಟಿಟಿ ಇತ್ತು. ಅಷ್ಟೇ ಯಾಕೆ! ಈ ಮಗುವಿನ ಅಭಿನಯ ನೋಡಲೆಂದೇ ಜನ ಥಿಯೇಟರ್‌ಗೆ ಬರುತ್ತಿದ್ದರು.
ಬೇಬಿ ಶಾಮಿಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಆ ನಂತರ ಚಿತ್ರರಂಗದಿಂದ ದೂರವಾದರು. ಹಲವು ವರ್ಷಗಳ ನಂತರ ಸಿದ್ಧಾರ್ಥ್ ಅಭಿನಯದ ಓಯ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಮತ್ತೆ ನಾಯಕಿಯಾಗಿ ಎಂಟ್ರಿಕೊಟ್ಟಿದ್ದರು. ಆದರೆ ಅದೃಷ್ಟ ಕೈಹಿಡಿಯಲಿಲ್ಲ. ಇನ್ನೂ ಕೆಲವರು ಆಕೆಗಿದ್ದ ಅಹಂಕಾರವೇ ಸಿನಿಮಾದಲ್ಲಿ ಅವಕಾಶ ಕಳೆದುಕೊಳ್ಳುವಂತೆ ಮಾಡಿತು ಎನ್ನುತ್ತಾರೆ. ಆದರೆ ಇದೆಷ್ಟು ಸತ್ಯ ಎಂಬುದು ತಿಳಿಯದ ಸಂಗತಿ.
ಇನ್ನು ಶಾಮಿಲಿ ಜನಿಸಿದ್ದು 10 ಜುಲೈ 1987 ರಂದು. ಕೇರಳದಲ್ಲಿ ಜನಿಸಿದ ಅವರಿಗೆ ಈಗ 37 ವರ್ಷ ವಯಸ್ಸು. ತಮ್ಮ ಮೂರನೇ ವಯಸ್ಸಿನಲ್ಲೇ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಹಲವು ಚಿತ್ರಗಳಲ್ಲಿ ನಟಿಸಿದ್ದರೂ ನಾಯಕಿಯಾಗಿ ಮಾಡಿದ್ದು ಒಂದು ಸಿನಿಮಾ ಮಾತ್ರ. ಆ ನಂತರ ಶಾಮಿಲಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಅಂದಹಾಗೆ ಅವಿವಾಹಿತೆಯಾಗಿರುವ ಶಾಮಿಲಿ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.