ನವದೆಹಲಿ: ಐಪಿಎಲ್ 2021ಕ್ಕೂ ಕರೋನಾವೈರಸ್ ಪ್ರವೇಶಿಸಿದ್ದು, ಇದೀಗ ಪಂದ್ಯಾವಳಿ ರದ್ದಾಗುವ ಅಪಾಯವಿದೆ. ಸೋಮವಾರ, ಕೋಲ್ಕತಾ ನೈಟ್ ರೈಡರ್ಸ್ ಕ್ರಿಕೆಟಿಗರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರು ಕರೋನಾ ಪಾಸಿಟಿವ್ ಎಂದು ಕಂಡುಬಂದಿದೆ. ಈ ಕಾರಣದಿಂದಾಗಿ, ಉದ್ದೇಶಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯವನ್ನು ಸೋಮವಾರ ಮುಂದೂಡಲಾಯಿತು. ಐಪಿಎಲ್ 2021ರ 31 ನೇ ಪಂದ್ಯದಲ್ಲಿ, ಇಂದು ಮಂಗಳವಾರ ಮುಂಬೈ ಇಂಡಿಯನ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಐಪಿಎಲ್ ರದ್ದತಿ ಬೆದರಿಕೆ:
ಆದಾಗ್ಯೂ, ಕರೋನಾವೈರಸ್ (Coronavirus) ಹರಡಿದ ಕಾರಣ, ಈ ಪಂದ್ಯದ ಸಂಘಟನೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕ್ರಿಕ್ಬಜ್ ಪ್ರಕಾರ, ಮೇ 1 ರಂದು ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯವನ್ನು ದೆಹಲಿಯಲ್ಲಿ ಆಡಲಾಯಿತು. ಇತ್ತೀಚೆಗೆ ಕರೋನಾ ಪಾಸಿಟಿವ್ ಎಂದು ತಿಳಿದುಬಂದ ಸಿಎಸ್ಕೆ ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಅವರು ಮುಂಬೈ ಇಂಡಿಯನ್ಸ್ ಸದಸ್ಯರನ್ನು ಭೇಟಿಯಾದರು. ಅಂತಹ ಪರಿಸ್ಥಿತಿಯಲ್ಲಿ, ಪ್ರೋಟೋಕಾಲ್ ಅಡಿಯಲ್ಲಿ, ಮುಂಬೈನ ಆಟಗಾರರನ್ನು ಸಹ ಪರೀಕ್ಷಿಸಲಾಗುತ್ತದೆ ಮತ್ತು ನಿಯಮಗಳ ಪ್ರಕಾರ, ಎಲ್ಲರ ಎರಡು ವರದಿಗಳು ನಕಾರಾತ್ಮಕವಾಗಿ ಬಂದ ನಂತರವೇ ಅವರು ಪಂದ್ಯವನ್ನು ಆಡಲು ಸಾಧ್ಯವಾಗುತ್ತದೆ. ಆದರೆ, ಈ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ - IPL 2021: ಬಯೋ-ಬಬಲ್ನಲ್ಲಿ ಕರೋನಾ ಪ್ರವೇಶಿಸಿದ್ದು ಹೇಗೆ? ಇಲ್ಲಿಗೆ ಮಹತ್ವದ ಮಾಹಿತಿ
ಮಾಲ್ಡೀವ್ಸ್ ತಲುಪಿದ ಮೈಲೇಕ್ ಸ್ಲೇಟರ್
ಐಪಿಎಲ್ನ 14 (IPL 14) ನೇ ಋತುವಿನ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಲ್ಕ್ ಸ್ಲೇಟರ್, ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ಭಾರತದಿಂದ ಮಾಲ್ಡೀವ್ಸ್ ತಲುಪಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ತಮ್ಮ ಆಟಗಾರರಿಗೆ ವಾಪಸಾತಿಗೆ ಅನುಮತಿ ನೀಡುತ್ತಿಲ್ಲ ಎಂದು ಮಾಜಿ ಆರಂಭಿಕ ಆಟಗಾರ ಸ್ಲೇಟರ್ ತೀವ್ರವಾಗಿ ಟೀಕಿಸಿದ್ದಾರೆ, ಅವರ ಪ್ರಧಾನ ಮಂತ್ರಿಯ ಕೈಗಳು ರಕ್ತದ ಬಣ್ಣದ್ದಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಆಸ್ಟ್ರೇಲಿಯಾಕ್ಕೆ ಹೋಗಲು ಕಾಯಬೇಕಾಗುತ್ತದೆ:
ಆಸ್ಟ್ರೇಲಿಯಾದ ವರದಿಯ ಪ್ರಕಾರ, ಮಾಲ್ಡೀವ್ಸ್ಗೆ ಹೋಗುವ ಮೊದಲು ಸ್ಲೇಟರ್ ಒಂದು ವಾರ ಮನೆಗೆ ಹೋಗಲು ಪ್ರಯತ್ನಿಸುತ್ತಿದ್ದರು, ಆದರೆ ಈಗ ಅವರು ಆಸ್ಟ್ರೇಲಿಯಾಕ್ಕೆ ಹೋಗಲು ಕಾಯಬೇಕಾಗುತ್ತದೆ. ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 9,000 ಆಸ್ಟ್ರೇಲಿಯನ್ನರನ್ನು ಹಿಂದಿರುಗುವುದನ್ನು ಆಸ್ಟ್ರೇಲಿಯಾ ಸರ್ಕಾರ ನಿಷೇಧಿಸಿದೆ. ಅವರಲ್ಲಿ ಆಸ್ಟ್ರೇಲಿಯಾದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮತ್ತು ನಿರೂಪಕ ಸ್ಲೇಟರ್ ಐಪಿಎಲ್ನಲ್ಲಿ ಆಡುತ್ತಿದ್ದರು.
If our Government cared for the safety of Aussies they would allow us to get home. It's a disgrace!! Blood on your hands PM. How dare you treat us like this. How about you sort out quarantine system. I had government permission to work on the IPL but I now have government neglect
— Michael Slater (@mj_slats) May 3, 2021
ಇದನ್ನೂ ಓದಿ- KKR vs RCB: ಇಬ್ಬರಿಗೆ ಕರೋನಾ ದೃಢ, ಕೆಕೆಆರ್, ಆರ್ಸಿಬಿ ನಡುವಿನ ಪಂದ್ಯ ಮರುನಿಗದಿ
ಟ್ವೀಟ್ ಮಾಡುವ ಮೂಲಕ ಕೋಪ ಹೊರಹಾಕಿರುವ ಸ್ಲೇಟರ್:
"ನಮ್ಮ ಸರ್ಕಾರವು ಆಸ್ಟ್ರೇಲಿಯನ್ನರ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ಹೊಂದಿದ್ದರೆ, ಅವರು ನಮಗೆ ಮನೆಗೆ ಮರಳಲು ಅವಕಾಶ ನೀಡುತ್ತಿದ್ದರು" ಎಂದು ಸ್ಲೇಟರ್ ಟ್ವೀಟ್ ಮಾಡಿದ್ದಾರೆ. ಇದು ಅವಮಾನ! ಪ್ರಧಾನ ಮಂತ್ರಿಯ ಕೈಗಳು ರಕ್ತದಿಂದ ಕೂಡಿದೆ. ನೀವು ನಮ್ಮನ್ನು ಈ ರೀತಿ ಹೇಗೆ ಪರಿಗಣಿಸಬಹುದು? ನಿಮ್ಮ ಕ್ವಾರಂಟೈನ್ ವ್ಯವಸ್ಥೆಗೆ ಏನಾಯಿತು. ಐಪಿಎಲ್ನಲ್ಲಿ ಕೆಲಸ ಮಾಡಲು ನನಗೆ ಸರ್ಕಾರದ ಅನುಮತಿ ಸಿಕ್ಕಿತು, ಆದರೆ ಈಗ ನಾನು ಸರ್ಕಾರದ ನಿರ್ಲಕ್ಷ್ಯವನ್ನು ಎದುರಿಸಬೇಕಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.