ಕರೋನಾ ಕಾಲದಲ್ಲಿ ಅಮೃತ ಸಮಾನ ಈ ಅಮೃತ ಬಳ್ಳಿ ಜ್ಯೂಸ್

ಅಮೃತಬಳ್ಳಿಯ  ಎಲೆ, ಕಾಂಡ, ಬೇರು ಎಲ್ಲವೂ ಆರೋಗ್ಯಕ್ಕೆ  ಬಹಳ ಒಳ್ಳೆಯದು. ಇದರ ಎಲೆಯನ್ನು ನೀರಿನಲ್ಲಿ ಬೇಯಿಸಿ ಕುಡಿದರೆ ದೇಹಾರೋಗ್ಯಕ್ಕೆ ಬಹಳ ಉತ್ತಮ. ನೀರಿನಲ್ಲಿ ಬೇಯಿಸಿ ಜ್ಯೂಸ್ ರೀತಿ ಮಾಡಿ ಕುಡಿಯಬಹುದು.

Written by - Ranjitha R K | Last Updated : May 3, 2021, 01:44 PM IST
  • ಅಮೃತಬಳ್ಳಿಯ ಪ್ರಯೋಜನ ಗೊತ್ತಿಲ್ಲದವರು ಯಾರೂ ಇಲ್ಲ
  • ಇಮ್ಯೂನಿಟಿ ಬೂಸ್ಟ್ ಮಾಡಲು ಅಮೃತಬಳ್ಳಿ ಅತ್ತುತ್ತಮ ಔಷಧ
  • ಮೆಟಾಬಾಲಿಸಂ ಸಿಸ್ಟಮ್, ಜ್ವರ, ಕೆಮ್ಮು, ಶೀತಕ್ಕಿದು ರಾಮಬಾಣ
ಕರೋನಾ ಕಾಲದಲ್ಲಿ ಅಮೃತ ಸಮಾನ ಈ ಅಮೃತ ಬಳ್ಳಿ ಜ್ಯೂಸ್ title=
ಇಮ್ಯೂನಿಟಿ ಬೂಸ್ಟ್ ಮಾಡಲು ಅಮೃತಬಳ್ಳಿ ಅತ್ತುತ್ತಮ ಔಷಧ (file photo)

ನವದಹೆಲಿ : ನಿಮಗೆ ಅಮೃತಬಳ್ಳಿ (Amrutha balli)  ಗೊತ್ತಿರಬಹುದು. ಅಮೃತಬಳ್ಳಿಯ ಕಷಾಯ ಕುಡಿದಿರಬಹುದು.  ಇದನ್ನು ಗಿಲೋಯಿ (Giloy) ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಈ ಬಳ್ಳಿ ಎಲ್ಲಾ ಕಡೆ ಸಿಗುತ್ತದೆ. ವಿಶೇಷ ಮುತುವರ್ಜಿಯಿಂದ ಬೆಳೆಸಬೇಕಾದ  ಅಗತ್ಯವೂ ಇಲ್ಲ.  ಎಲ್ಲಿ ನೀರಿನ ಆಸರೆ ಸಿಗುತ್ತದೆಯೋ ಅಲ್ಲಿ, ಅಮೃತಬಳ್ಳಿ ಬೆಳೆಯುತ್ತದೆ.

ಅಮೃತ ಬಳ್ಳಿ ಎಲೆಯ ಜ್ಯೂಸ್ :
ಅಮೃತಬಳ್ಳಿಯ (Amrutha balli) ಎಲೆ, ಕಾಂಡ, ಬೇರು ಎಲ್ಲವೂ ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ಇದರ ಎಲೆಯನ್ನು ನೀರಿನಲ್ಲಿ ಬೇಯಿಸಿ ಕುಡಿದರೆ ದೇಹಾರೋಗ್ಯಕ್ಕೆ ಬಹಳ ಉತ್ತಮ. ನೀರಿನಲ್ಲಿ ಬೇಯಿಸಿ ಜ್ಯೂಸ್ (Juice) ರೀತಿ ಮಾಡಿ ಕುಡಿಯಬಹುದು. ಮಾಡೋದು ತುಂಬಾ ಸಿಂಪಲ್. ಇದು  ಇಮ್ಯೂನಿಟಿ (Immunity) ಬೂಸ್ಟರ್ ಕೂಡಾ. ಕೆಲವರು ಇದರ ಎಲೆಯನ್ನು ಬೇರೆ ಹಣ್ಣಿನ (fruits) ಜೊತೆ ಸೇರಿಸಿ ತಿನ್ನುತ್ತಾರೆ. 

ಇದನ್ನೂ ಓದಿ : Cloves Benefits : ಪುರುಷರು ಪ್ರತಿ ದಿನ ಈ ಸಮಯದಲ್ಲಿ3 ಲವಂಗ ತಿಂದರೆ ಅದ್ಭುತ ಪ್ರಯೋಜನಗಳಿವೆ : ಇಲ್ಲಿವೆ ನೋಡಿ

ಇದೊಂದು ಅತ್ಯುತ್ತಮ ಪವರ್ ಡ್ರಿಂಕ್ :
ಅಮೃತಬಳ್ಳಿ ಪಾನ್ ಬೀಡಾ ಎಲೆಯ ರೀತಿಯಲ್ಲೇ ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ಪಾಸ್ಪರಸ್ ಬೇಕಾದಷ್ಟು ಸಿಗುತ್ತದೆ.  ಅಲ್ಲದೆ ಇದರ ಎಲೆಯಲ್ಲಿ ಗಂಜಿಯ  ಅಂಶ ಕೂಡಾ  ಇರುತ್ತದೆ. ಹಾಗಾಗಿ ಇದೊಂದು ಅತ್ಯುತ್ತಮ ಪವರ್ ಡ್ರಿಂಕ್ (Power drink) . ಇಮ್ಯುನ್ ಸಿಸ್ಟಮ್ ಬೂಸ್ಟ್ ಮಾಡುವುದು ಅಷ್ಟೇ ಅಲ್ಲ, ಮಾರಕ ಕಾಯಿಲೆಗಳಿಂದ ರಕ್ಷಣೆ ನೀಡುತ್ತವೆ. 

ಮಾರಕ ರೋಗಗಳಿಗೆ ಮಹಾ ರಕ್ಷ ಕವಚ ಅಮೃತಬಳ್ಳಿ
ಮೆಟಾಬಾಲಿಸಂ ಸಿಸ್ಟಮ್, ಜ್ವರ (Fever), ಕೆಮ್ಮು, ಶೀತ ಮತ್ತು ಗ್ಯಾಸ್ಟ್ರೋಇಂಟೈಸ್ಟಿನಲ್ ಸಮಸ್ಯೆಗಳು ಅಲ್ಲದೆ ಇತರ ಮಾರಕ ರೋಗಗಳಿಂದ ಇದು ರಕ್ಷಣೆ ನೀಡುತ್ತದೆ. ಇದನ್ನು ಕಷಾಯ, ಚಹ (Tea) ಅಥವಾ ಕಾಫಿಯಲ್ಲಿ ಬಳಸಬಹುದಾಗಿದೆ.  ವಿಜ್ಞಾನ ಲೋಕದ ಮಹಾರಥಿಗಳೂ ಕೂಡಾ ಅಮೃತಬಳ್ಳಿ ಅತ್ಯುತ್ತಮ ಆಯುರ್ವೇದಿಕ್ ವಸ್ತುವಾಗಿದೆ.

ಇದನ್ನೂ ಓದಿ : 8ನೇ ತಿಂಗಳಲ್ಲಿ ಮಕ್ಕಳಿಗೆ ತಿನ್ನಿಸಿ ನೋಡಿ ಈ ಆಹಾರ..!

ಅಮೃತಬಳ್ಳಿಯಿಂದ ರಕ್ತ ಹೀನತೆ ದೂರವಾಗುತ್ತದೆ.  ಸ್ಕಿನ್ ಅಲರ್ಜಿಗೆ (Skin allergy) ರಾಮಬಾಣ. ವಾತ, ಪಿತ್ತ, ಕಫ, ವಾಂತಿ, ಕಿಡ್ನಿ ಕಲ್ಲು, ಹೊಟ್ಟೆ ಉರಿ ಮುಂತಾದ ಸಮಸ್ಯೆಗಳಿಗೆ ಅಮೃತಬಳ್ಳಿ ಅತಿ ಉತ್ತಮ ಪರಿಹಾರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News