SBI Online FD Fraud : ಪತ್ತೆಯಾಗಿದೆ ಸೈಬರ್ ಕಳ್ಳರ ಹೊಸ ವಂಚನೆ, ಒಂದೇ ಒಂದು ತಪ್ಪಿನಿಂದ ಆಗಲಿದೆ ಎಫ್‌ಡಿ ಖಾತೆ ಖಾಲಿ

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,  ತನ್ನ ಲಕ್ಷಾಂತರ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಸೈಬರ್ ಅಪರಾಧಿಗಳು ಇದೀಗ ಗ್ರಾಹಕರ ಖಾತೆಗಳಲ್ಲಿ ಫಿಕ್ಸ್ಡ್ ಡೆಪಾಸಿಟ್ ಗಳನ್ನು ತೆರೆದಿರುವ ವಿಚಾರವನ್ನು ಎಸ್‌ಬಿಐ ಬಯಲು ಮಾಡಿದೆ.  

Written by - Ranjitha R K | Last Updated : Apr 12, 2021, 04:53 PM IST
  • ಗ್ರಾಹಕರ ಎಫ್‌ಡಿ ಮೇಲೆ ವಂಚಕರ ಕಣ್ಣು
  • ಗ್ರಾಹಕರ ಸಣ್ಣ ತಪ್ಪಿನಿಂದ ಆಗಲಿದೆ ಭಾರೀ ಪ್ರಮಾದ
  • ಗ್ರಾಹಕರನ್ನು ವಂಚನೆ ಬಗ್ಗೆ ಎಚ್ಚರಿಸಿದ SBI
 SBI Online FD Fraud : ಪತ್ತೆಯಾಗಿದೆ ಸೈಬರ್ ಕಳ್ಳರ ಹೊಸ ವಂಚನೆ, ಒಂದೇ ಒಂದು ತಪ್ಪಿನಿಂದ ಆಗಲಿದೆ ಎಫ್‌ಡಿ ಖಾತೆ ಖಾಲಿ  title=
ಗ್ರಾಹಕರನ್ನು ವಂಚನೆ ಬಗ್ಗೆ ಎಚ್ಚರಿಸಿದ SBI (file photo)

ನವದೆಹಲಿ : SBI Online FD Fraud : ಇದು ಡಿಜಿಟಲ್ ಯುಗ. ಬೆರಳ ತುದಿಯಲ್ಲೇ ಎಲ್ಲಾ ಕೆಲಸ ನಡೆದು ಹೋಗುತ್ತದೆ. ಗ್ರಾಹಕರು ಕುಳಿತ ಜಾಗದಿಂದಲೇ ಬ್ಯಾಂಕ್ ವ್ಯವಹಾರವನ್ನೂ ಮುಗಿಸಿಬಿಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಫ್ರಾಡ್ (online Fraud) ದಿನೇ ದಿನೇ ಹೆಚ್ಚುತ್ತಿದೆ. ಆನ್ ಲೈನ್ ಅನ್ನುವುದು ಸೈಬರ್ ವಂಚಕರಿಗೆ ವರವಾಗಿ ಪರಿಣಮಿಸಿರುವುದು ಬೇಸರದ ಸಂಗತಿ. ಎಷ್ಟೇ  ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಕೆಲವೊಮ್ಮೆ ಗ್ರಾಹಕರನ್ನು ಮೋಸಗೊಳಿಸುವಲ್ಲಿ ಈ ಸೈಬರ್ ಅಪರಾಧಿಗಳು ಮೇಲುಗೈ ಸಾಧಿಸಿಬಿಡುತ್ತಾರೆ. 

ಗ್ರಾಹಕರನ್ನು ಎಚ್ಚರಿಸಿದ ಎಸ್‌ಬಿಐ  :
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, (SBI) ತನ್ನ ಲಕ್ಷಾಂತರ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಸೈಬರ್ ಅಪರಾಧಿಗಳು ಇದೀಗ ಗ್ರಾಹಕರ ಖಾತೆಗಳಲ್ಲಿ ಫಿಕ್ಸ್ಡ್ ಡೆಪಾಸಿಟ್ ಗಳನ್ನು (FD) ತೆರೆದಿರುವ ವಿಚಾರವನ್ನು ಎಸ್‌ಬಿಐ ಬಯಲು ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಬ್ಯಾಂಕಿಂಗ್ ವಿವರಗಳನ್ನು ಯಾರೊಂದಿಗೂ ಯಾವುದೇ ಕಾರಣಕ್ಕೂ  ಹಂಚಿಕೊಳ್ಳದಂತೆ ಬ್ಯಾಂಕ್ ಮನವಿ ಮಾಡಿದೆ.

ಇದನ್ನೂ ಓದಿ : PAN-Aadhaar ಲಿಂಕ್ ಆಗಿಲ್ಲವಾದರೆ ತಕ್ಷಣ ಮಾಡಿಕೊಳ್ಳಿ.. ಇಲ್ಲವಾದರೆ ಬೀಳಲಿದೆ ದಂಡ..!

ಗ್ರಾಹಕರ ಎಫ್‌ಡಿ ಮೇಲೆ ವಂಚಕರ ಕಣ್ಣು : 
ಪಾಸ್‌ವರ್ಡ್, ಒಟಿಪಿ (OTP), ಕಾರ್ಡ್ ಸಂಖ್ಯೆ ಮುಂತಾದ ವಿವರಗಳನ್ನು ಕೇಳಿಕೊಂಡು ಬರುವ ಕರೆಗಳ ಬಗ್ಗೆ ಎಚ್ಚರದಿಂದ ಇರುವಂತೆ ಬ್ಯಾಂಕ್ (Bank) ಹೇಳಿದೆ. ಅಲ್ಲದೆ ಎಸ್‌ಬಿಐ ತನ್ನ ಗ್ರಾಹಕರಿಂದ ಈ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎನ್ನುವುದನ್ನು ಕೂಡಾ ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ಹೊಸ ರೀತಿಯ ವಂಚನೆಯ ಮಾಹಿತಿಯನ್ನು ಎಸ್‌ಬಿಐ ತನ್ನ ಗ್ರಾಹಕರಿಗೆ ಟ್ವಿಟರ್ ಮೂಲಕ ನೀಡಿದೆ. 

ತಪ್ಪಿಯೂ ಮಾಡದಿರಿ ಈ ಕೆಲಸ : 
ಸೈಬರ್ ಅಪರಾಧಿಗಳು (Cyber Criminals) ಗ್ರಾಹಕರ ಖಾತೆಯಲ್ಲಿ ಆನ್‌ಲೈನ್ ಎಫ್ ಡಿ ತೆರೆದಿರುವ ಬಗ್ಗೆ ದೂರುಗಳು ಬಂದಿವೆ ಎಂದು ಎಸ್‌ಬಿಐ (State bank Of India) ಹೇಳಿದೆ. ಮೊದಲು ಈ ಸೈಬರ್ ಕಳ್ಳರು, ಗ್ರಾಹಕರ ಎಫ್‌ಡಿ ಖಾತೆಯನ್ನು ತೆರೆಯುತ್ತಾರೆ. ನಂತರ ಅದರಲ್ಲಿ ಗ್ರಾಹಕರ ನೆಟ್ ಬ್ಯಾಂಕಿಂಗ್ (Net Banking) ವಿವರಗಳನ್ನು ಬಳಸಲಾಗುತ್ತದೆ. ಅಲ್ಲದೆ ಸ್ವಲ್ಪ ಪ್ರಮಾಣದ ಹಣವನ್ನು ಕೂಡಾ ಟ್ರಾನ್ಸ್ಫರ್ ಮಾಡುತ್ತಾರೆ. ಇದಾದ ನಂತರ ಎಸ್‌ಬಿಐ ಅಧಿಕಾರಿ ಎಂದು ಹೇಳಿಕೊಂಡು ಗ್ರಾಹಕರಿಗೆ ಕರೆ ಮಾಡಿ, ಒಟಿಪಿ ಕೇಳುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರು ಒಟಿಪಿ ನೀಡಿದರೆ, ಕೂಡಲೇ ಗ್ರಾಹಕರ ಖಾತೆಯಿಂದ ಸಂಪೂರ್ಣ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. 

ಇದನ್ನೂ ಓದಿ : Public Provident Fund: ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, 26 ಲಕ್ಷ ರೂ. ಗಳಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News