ಲಸಿಕೆ ಹಾಕಿಸಿಕೊಂಡು ಕರೋನಾ ವಿರುದ್ಧ ಹೋರಾಡಲು ಸಹಕರಿಸುವಂತೆ ಬಿಎಸ್ ವೈ ಮನವಿ

ಕೋವಿಡ್ ಲಸಿಕೆ ಪಡೆದುಕೊಂಡು, ಕೊರೋನಾ ವಿರುದ್ಧದ ಸಮರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.   

Written by - Ranjitha R K | Last Updated : Mar 19, 2021, 04:23 PM IST
  • ಕರೋನಾ ಲಸಿಕೆ ಹಾಕಿಸುವಂತೆ ಸಿಎಂ ಸೂಚನೆ
  • ಕರೋನಾ ರೋಗವನ್ನು ನಿರ್ಲಕ್ಷ್ಯ ಮಾಡದಂತೆ ಮನವಿ
  • ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ - ಸಿಎಂ
ಲಸಿಕೆ ಹಾಕಿಸಿಕೊಂಡು ಕರೋನಾ ವಿರುದ್ಧ ಹೋರಾಡಲು ಸಹಕರಿಸುವಂತೆ ಬಿಎಸ್ ವೈ ಮನವಿ  title=
ಕರೋನಾ ಲಸಿಕೆ ಹಾಕಿಸುವಂತೆ ಸಿಎಂ ಸೂಚನೆ (File photo)

ಬೆಂಗಳೂರು : ಕೋವಿಡ್ ಲಸಿಕೆ (Corona Vaccine) ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ.  ಕೋವಿಡ್ ಲಸಿಕೆ ಪಡೆದುಕೊಂಡು, ಕೊರೋನಾ (COVID-19) ವಿರುದ್ಧದ ಸಮರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.   

ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ (BS Yediyurappa) ಅವರು, ಕರೋನಾ ರೋಗವನ್ನು ನಿರ್ಲಕ್ಷ್ಯ ಮಾಡದಂತೆ ಮನವಿ  ಮಾಡಿದ್ದಾರೆ. ಅಲ್ಲದೆ,  ನಾನೂ ಕೂಡ ಕೊರೋನಾ ಲಸಿಕೆ (Corona Vaccine) ಪಡೆದುಕೊಂಡಿದ್ದೇನೆ. ನಿಯಮಗಳ ಅನ್ವಯ ಎಲ್ಲಾ ಅರ್ಹರೂ ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ವಿನಂತಿಸಿ ಕೊಂಡಿದ್ದಾರೆ. 

ಇದನ್ನೂ ಓದಿ Covid-19 ಜಾಸ್ತಿಯಾಗದಂತೆ ಎಚ್ಚರ ವಹಿಸೋಣ: ಸಚಿವ ಎಸ್.ಟಿ. ಸೋಮಶೇಖರ್

ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ.  ಇದು ನಿಮ್ಮ, ನಿಮ್ಮ ಕುಟುಂಬದ ಮತ್ತು ಸಮಾಜದ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ. ಕರೋನಾವನ್ನು ಮಣಿಸಲು ಲಸಿಕೆ ಪಡೆದುಕೊಳ್ಳುವುದು ಅಗತ್ಯವಾಗಿದೆ.  ಇದರ ಜೊತೆಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ  (Social distancing)  ಕಾಯ್ದುಕೊಂಡು ನೈರ್ಮಲ್ಯವನ್ನು ತಪ್ಪದೆ ಪಾಲಿಸುವಂತೆ ಹೇಳಿದ್ದಾರೆ. 

ಇದನ್ನೂ ಓದಿ : Covid 2nd wave ನಿಯಂತ್ರಿಸಲು ಪೂರ್ವಸಿದ್ಧತೆ : ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News