BSNL offers : 47 ರೂ ರೀಚಾರ್ಜ್ ಪ್ಲಾನ್ ನಲ್ಲಿ ಸಿಗಲಿದೆ unlimited calls, 14GB data

BSNL ನ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮಾಡುವ ಸೌಲಭ್ಯ ನೀಡಲಾಗುತ್ತಿದೆ. ಇದಲ್ಲದೆ, ಪ್ರತಿದಿನ 100 ಎಸ್‌ಎಂಎಸ್ ಮಾಡಬಹುದು. ಇದರೊಂದಿಗೆ ನ್ಯಾಷನಲ್  ರೋಮಿಂಗ್ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ. 

Written by - Ranjitha R K | Last Updated : Mar 19, 2021, 12:44 PM IST
  • ಬಿಎಸ್‌ಎನ್‌ಎಲ್‌ನ ಅಗ್ಗದ ಯೋಜನೆ
  • ಕಡಿಮೆ ಹಣಕ್ಕೆ ಅನೇಕ ಪ್ರಯೋಜನಗಳಿವೆ
  • ಇದರೊಂದಿಗೆ ಉಚಿತ ಸಿಮ್ ಕಾರ್ಡ್ ಸಿಗುತ್ತದೆ

Trending Photos

 BSNL offers : 47 ರೂ ರೀಚಾರ್ಜ್ ಪ್ಲಾನ್ ನಲ್ಲಿ ಸಿಗಲಿದೆ unlimited calls, 14GB data  title=
ಬಿಎಸ್‌ಎನ್‌ಎಲ್‌ನ ಅಗ್ಗದ ಯೋಜನೆ (file photo)

ನವದೆಹಲಿ : ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದುವರೆಗೆ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ರೂಪಿಸಿದೆ. ಖಾಸಗಿ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ ಮತ್ತು Vi ಜೊತೆ ಸ್ಪರ್ಧಿಸಲು ಬಿಎಸ್‌ಎನ್‌ಎಲ್  ಹಲವಾರು ಪ್ರಾರಂಭಿಸುತ್ತಿದೆ. ಇದು ಅಗ್ಗದ ಪ್ರಿಪೇಯ್ಡ್ ಯೋಜನೆ ಎಂದು ಬಿಎಸ್ಎನ್ಎಲ್ ಹೇಳಿಕೊಂಡಿದೆ.

ಬಿಎಸ್‌ಎನ್‌ಎಲ್‌ನ  47 ರೂಪಾಯಿಯ ಹೊಸ  ರೀಚಾರ್ಜ್ ಪ್ಲಾನ್ : 
ಬಿಎಸ್ಎನ್ಎಲ್ 47 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ (Recharge) ಅನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಇದು ಅಗ್ಗದ ಪ್ರಿಪೇಯ್ಡ್ ಪ್ಲಾನ್ (Prepaid plan) ಎಂದು ಕಂಪನಿ ಹೇಳಿಕೊಂಡಿದೆ. ಈ ಪ್ಲಾನ್ ನಲ್ಲಿ  ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ :  BSNL 4G ಸೇವೆ ಯಾವಾಗ ಆರಂಭವಾಗಲಿದೆ? ಸಂಸತ್ತಿನಲ್ಲಿ ಸರ್ಕಾರ ಹೇಳಿದ್ದೇನು

ಅಗ್ಗದ ರೀಚಾರ್ಜ್ ಪ್ಲಾನ್ ನ ಪ್ರಯೋಜನಗಳು : 
Keralatelecom ಪ್ರಕಾರ, ಈ ಯೋಜನೆಯಡಿ ಗ್ರಾಹಕರಿಗೆ ಅನಿಯಮಿತ ಕರೆ (Unlimited calls) ಸೌಲಭ್ಯವನ್ನು ನೀಡಲಾಗುತ್ತಿದೆ. ಇದಲ್ಲದೆ ಬಳಕೆದಾರರಿಗೆ ಪ್ರತಿದಿನ 100 ಎಸ್‌ಎಂಎಸ್‌ಗಳನ್ನು (SMS) ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೆ ಇದರೊಂದಿಗೆ ನ್ಯಾಷನಲ್  ರೋಮಿಂಗ್ (National roaming) ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.

ಸಿಗಲಿದೆ 14 ಜಿಬಿ ಡೇಟಾ : 
ಈ 47 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನಲ್ಲಿ  14 ಜಿಬಿ ಡೇಟಾವನ್ನು ಸಹಾ ಗ್ರಾಹಕರಿಗೆ ನೀಡಲಾಗುತ್ತಿದೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಯ ವ್ಯಾಲಿಡಿಟಿ (Validity) ೨೮ ದಿನಗಳವರೆಗೆ ಇರುತ್ತದೆ. 

ಇದನ್ನೂ ಓದಿ :  Back-Up Of Brain: ಕಂಪ್ಯೂಟರ್ ನಂತೆ ಮಾನವನ ಮೆದುಳಿನ ಬ್ಯಾಕ್ ಅಪ್ ಕೂಡ ಪಡೆಯಬಹುದು ನಿಮಗೆ ಗೊತ್ತಾ?

ಯೋಜನೆಯಡಿಯಲ್ಲಿ ಸಿಗಲಿದೆ ಉಚಿತ ಸಿಮ್ :
ಮಾಹಿತಿಯ ಪ್ರಕಾರ, ಈ ಅಗ್ಗದ ರೀಚಾರ್ಜ್ ಪ್ಲಾನ್ ನಲ್ಲಿ  ಉಚಿತ ಸಿಮ್ (Free SIM)  ನೀಡಲಾಗುತ್ತಿದೆ. ಆದರೆ ಈ ಉಚಿತ ಸಿಮ್ ಹೊಸ ಗ್ರಾಹಕರಿಗೆ ಮಾತ್ರ ಎಂದು ಕಂಪನಿ ಸ್ಪಷ್ಟಪಡಿಸಿದೆ. BSNL ಈ ವಿಶೇಷ ಯೋಜನೆಯನ್ನು ಕೇರಳ ಟೆಲಿಕಾಂ ಸರ್ಕಲ್ ಗಾಗಿ ಮಾತ್ರ ಆರಂಭಿಸಲಾಗಿದೆ. ಈ ಪ್ಲಾನ್ ನ ಲಾಭವನ್ನು ಮಾರ್ಚ್ 31 ರವರೆಗೆ ಪಡೆಯಬಹುದು. ಗ್ರಾಹಕರು ಈ ಪ್ಲಾನ್ ಬಗ್ಗೆ ತಮ್ಮ ಹತ್ತಿರದ ಬಿಎಸ್‌ಎನ್‌ಎಲ್ ಕಚೇರಿಯಿಂದ ಮಾಹಿತಿ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News