ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಿದ ಎಸ್‍ಐಟಿ

ಸೋಮವಾರ ತಡರಾತ್ರಿ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ತೆರಳಿದ ಎಸ್‍ಐಟಿ  ಮಾಜಿ ಸಚಿವರನ್ನು ವಿಚಾರಣೆಗೆ ಒಳಪಡಿಸಿದೆ.

Written by - Ranjitha R K | Last Updated : Mar 16, 2021, 05:28 PM IST
  • ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ವಿಚಾರಣೆ
  • 4 ಪುಟಗಳ ಹೇಳಿಕೆ ದಾಖಲಿಸಿಕೊಂಡ ಎಸ್‍ಐಟಿ
  • ನೋಟಿಸ್ ಗೆ ಸ್ಪಂದಿಸದ ಸಂತ್ರಸ್ತೆ
ಸಿಡಿ ಪ್ರಕರಣದಲ್ಲಿ  ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಿದ ಎಸ್‍ಐಟಿ title=
ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ವಿಚಾರಣೆ (file photo)

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ (Ramesh Jarakiholi) ಸಿಡಿ ‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಯನ್ನುಎಸ್‍ಐಟಿ (SIT) ವಿಚಾರಣೆಗೆ ಒಳಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಯನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು. 

ಸೋಮವಾರ ತಡರಾತ್ರಿ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ (Ramesh Jarakiholi) ಅವರ ನಿವಾಸಕ್ಕೆ ತೆರಳಿದ ಎಸ್‍ಐಟಿ  ಮಾಜಿ ಸಚಿವರನ್ನು ವಿಚಾರಣೆಗೆ ಒಳಪಡಿಸಿದೆ.  ವಿಚಾರಣೆ ವೇಳೆ  ಎಸ್‍ಐಟಿ (SIT) ಪೊಲೀಸರ ಎದುರು 4 ಪುಟಗಳ ಹೇಳಿಕೆ ದಾಖಲಿಸಿದ್ದಾರೆ‌ ಎನ್ನಲಾಗಿದೆ. ಎಸಿಪಿ ಧರ್ಮೆಂದ್ರ ಎದುರು ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿ ತನ್ನ ವಿರುದ್ದ ನಡೆದಿರುವ ರಾಜಕೀಯ ಷಡ್ಯಂತ್ರ, ಬ್ಲ್ಯಾಕ್‍ಮೇಲ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ : CD case : ಅಪರಾಧಿ ನಾನಲ್ಲ..! ಅಪರಾಧ ಎಸಗಿಲ್ಲ.!ಸ್ಫೋಟಕ ಮಾಹಿತಿ ನೀಡಿದ ಜಾರಕಿಹೊಳಿ

ನನ್ನ ವಿರುದ್ಧ ಕಳೆದ 4 ತಿಂಗಳಿಂದ ಬ್ಲ್ಯಾಕ್‍ಮೇಲ್ ನಡೆಯುತ್ತಿತ್ತು. ರಾಜಕೀಯವಾಗಿ ಮುಗಿಸುವ ಬೆದರಿಕೆ  ಹಾಕಲಾಗುತ್ತಿತ್ತು ಎಂದು ಅವರು ವಿಚಾರಣೆ (Investigation) ವೇಳೆ ಹೇಳಿದ್ದರೆ ಎನ್ನಲಾಗಿದೆ. ಅಲ್ಲದೆ,  ನನ್ನ ಆಪ್ತನ ಮೂಲಕ ಹಣಕ್ಕಾಗಿ ಪದೇ ಪದೇ ಒತ್ತಡ ಹಾಕಲಾಗಿತ್ತು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

ಆದರೆ ಸಿಡಿ (CD) ಬಗ್ಗೆ ಸಂತ್ರಸ್ತೆಗೆ ನೀಡಿರುವ ನೋಟೀಸ್ ಗೆ ಪ್ರತಿಕ್ರಿಯೆ ನೀಡಿಲ್ಲ  ಎನ್ನಲಾಗಿದೆ. 

ಇದನ್ನೂ ಓದಿ : Ramesh Jarakiholi : ರಾಸಲೀಲೆ ಪ್ರಕರಣದಲ್ಲಿ ಮಹತ್ವದ ತಿರುವು, ರಮೇಶ್ ಜಾರಕಿಹೊಳಿ ರಾಜೀನಾಮೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News