ನವದೆಹಲಿ: WhatsApp Updates - ವಾಟ್ಸಾಪ್ (WhatsApp) ತನ್ನ ಹೊಸ ಅಪ್ಡೇಟ್ ಗಳಲ್ಲಿ ಹಲವು ವಿಶೇಷ ವೈಶಿಷ್ಟ್ಯಗಳನ್ನು ಜೋಡಿಸಿದೆ. WhatsApp ನ ಡೆಸ್ಕ್ ಟಾಪ್ ಆವೃತ್ತಿಯಾಗಿರುವ WhatsApp Web ಕುರಿತು ನಿಮೆಲ್ಲರಿಗೂ ತಿಳಿದೇ ಇದೆ. ಇದೀಗ ವಾಟ್ಸ್ ಆಪ್ ನ ಈ ವೇದಿಕೆಯ ಮೇಲೂ ಕೂಡ ಬಳಕೆದಾರರು ಆಡಿಯೋ ಹಾಗೂ ವಿಡಿಯೋ ಕರೆಗಳನ್ನು (Audio-Video Support In WhatsApp Web) ಮಾಡಬಹುದಾಗಿದೆ. ಇದಲ್ಲದೆ iOSನಲ್ಲಿ ವಾಯ್ಸ್ ಎನಿಮೇಶನ್ಮ್ ವಾಯ್ಸ್ ಮೆಸೇಜ್ ಸ್ವೀಕರಿಸುವ ಹಾಗೂ ತಿರಸ್ಕರಿಸುವ ಸೌಲಭ್ಯ ಕಲ್ಪಿಸಿದೆ. ಇದಲ್ಲದೆ ಇನ್ಸ್ಟಾಗ್ರಾಮ್ ಮದರಿಯಲ್ಲಿ ಸ್ವಯಂಚಾಲಿತ ಮೆಸೇಜ್ ಡಿಲೀಟ್ ಅಥವಾ ಇಮೇಜ್ ಡಿಲೀಟ್ ಆಪ್ಶನ್ ಒದಗಿಸಲಿದೆ. ಪ್ರಸ್ತುತ ವಾಟ್ಸ್ ಆಪ್ ನ ಈ ಅಪ್ಡೇಟ್ ಗಳನ್ನು ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಸುತ್ತಿದೆ. ಅತಿ ಶೀಘ್ರದಲ್ಲಿಯೇ ಈ ವಿಶೇಷ ವೈಶಿಷ್ಟ್ಯಗಳು ಬಳಕೆದಾರರನ್ನು ತಲುಪಲಿವೆ. ಹಾಗಾದರೆ ಬನ್ನಿ ವಾಟ್ಸ್ ಆಪ್ ಈ ವಿಶೇಷ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
ಟ್ವೀಟ್ ಮೂಲಕ ಮಾಹಿತಿ ನೀಡಿದ Wabetainfo
ವಾಟ್ಸ್ ಆಪ್ (WhatsApp) ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡುವ Wabetainfo ವಾಟ್ಸ್ ಆಪ್ ತನ್ನ ವೆಬ್ ಆವೃತ್ತಿಯನ್ನು ನವೀಕರಣಗೋಳಿಸುತ್ತಿದೆ ಎಂದು ಹೇಳಿದೆ. ತನ್ನ ಡೆಸ್ಕ್ ಟಾಪ್ ವರ್ಶನ್ 2.2104.10ನಲ್ಲಿ ವಾಟ್ಸ್ ಆಪ್ ವೆಬ್ ಬಳಕೆದಾರರಿಗೆ ಆಡಿಯೋ-ವಿಡಿಯೋ ಸೌಲಭ್ಯ ಕಲ್ಪಿಸಿದೆ ಹಾಗೂ ಇದರ ಬೀಟಾ ಟೆಸ್ಟಿಂಗ್ ಕೂಡ ತನ್ನ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಬಳಕೆದಾರರಿಗೆ ಇದರ ಬಳಕೆಗೆ ಅನುವುಮಾಡಿಕೊಡಲಿದೆ ಎಂದು ಹೇಳಿದೆ.
ಫೀಚರ್ ಟ್ರ್ಯಾಕರ್ Wabetainfo ನ ಬ್ಲಾಗ್ ಪ್ರಕಾರ ವಾಟ್ಸ್ ಆಪ್ ನ ವೆಬ್ ವರ್ಶನ್ ನಲ್ಲಿ ನೀವು ಕಾಲ್ ಗುಡಿಯನ್ನು ಒತ್ತಿದಾಗ, ವಾಟ್ಸ್ ಆಪ್ ನಮ್ಮನ್ನು ಬೇರೆ ವಿಂಡೋಗೆ ರೀಡೈರೆಕ್ಟ್ ಮಾಡಲಿದೆ. ಈ ವಿಂಡೋನಲ್ಲಿ ನಿಮಗೆ ನಿಮ್ಮ ಕಾಲ್ ಸ್ಟೇಟಸ್ ಹಾಗೂ ವಿಡಿಯೋ ಸಪೋರ್ಟ್ ಸಿಗಲಿದೆ. ಇದಲ್ಲದೆ ವಾಟ್ಸ್ ಆಪ್ ಸ್ವಯಂಚಾಲಿತವಾಗಿ ಸಂದೇಶ ಅಥವಾ ಪಿಕ್ಚರ್ ಡಿಲೀಟ್ ಮಾಡುವ ಉಪ್ದತ್ ಕೂಡ ಜೋಡಿಸುತ್ತಿದೆ. ಸ್ವಯಂಚಾಲಿತವಾಗಿ ಡಿಲೀಟ್ ಆಗುವ ಸಂದೇಶ ಅಥವಾ ಪಿಕ್ಚರ್ ನ ಸ್ಕ್ರೀನ್ ಶಾಟ್ ಅನ್ನು ನೀವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ವಾಟ್ಸ್ ಆಪ್, ಇನ್ಸ್ಟಾಗ್ರಾಮ್ ಡೈರೆಕ್ಟ್ ನಿಂದ ಪಡೆದುಕೊಳ್ಳುತ್ತಿದೆ.
ತಂತ್ರಜ್ಞಾನದ ಸುದ್ದಿಗಳನ್ನು ಬಿತ್ತರಿಸುವ Mashabale ಪ್ರಕಟಿಸುವ ಒಂದು ವರದಿಯ ಪ್ರಕಾರ, ವಾಟ್ಸ್ iOS ನಲ್ಲಿಯೂ ಕೂಡ ಹೊಸ ವೈಶಿಷ್ಟ್ಯವೊಂದನ್ನು ಜೋಡಿಸುತ್ತಿದೆ ಎನ್ನಲಾಗಿದೆ. ಇದರಲ್ಲಿ ಹೊಸ ವಾಯ್ಸ್ ಮೆಸೇಜ್ ಎನಿಮೇಶನ್ ಶಾಮೀಲುಗೊಳಿಸುತ್ತಿದ್ದು, ನೀವು ಇದರ ರಿಸಿವ್ ರಿಸಿಪ್ಟ್ ಸಕ್ರೀಯ ಅಥವಾ ನಿಷ್ಕ್ರೀಯಗೊಳಿಸಬಹುದು. ವರದಿಯ ಪ್ರಕಾರ ಈ ನೂತನ ವಾಟ್ಸ್ ಆಪ್ ವೈಶಿಷ್ಟ್ಯ ಆಪಲ್ ಆಪ್ ಸ್ಟೋರ್ ನಲ್ಲಿ ಕೆಲ ಬದಲಾವಣೆಗಳೊಂದಿಗೆ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ-WhatsApp Feature - ಟೈಪ್ ಮಾಡದೆಯೇ WhatsApp ಮೂಲಕ Text ಸಂದೇಶ ಕಳುಹಿಸುವುದು ಹೇಗೆ?
ಹೇಗೆ ಕಾರ್ಯನಿರ್ವಹಿಸಲಿದೆ?
ವಾಟ್ಸ್ ಆಪ್ ತನ್ನ ವೆಬ್ ಆವೃತ್ತಿಯಲ್ಲಿ ಒಂದು ಅನಿಮೇಶನ್ ಪ್ರೋಗ್ರಸ್ ಬಾರ್ ಅನ್ನು ಜೋಡಿಸಿದೆ ಎನ್ನಲಾಗಿದೆ. ನೀವು ಕಳುಹಿಸಿರುವ ಆಡಿಯೋ ಸಂದೇಶ ಒಂದೊಮ್ಮೆ ರಿಸೀವ್ ಆದ ಮೇಲೆ ಸಂದೇಶ ಸ್ವಯಂಚಾಲಿತವಾಗಿ ಸ್ಟಾರ್ಟ್ ಆಗಲಿದೆ. ಆದರೆ ಈ ವೈಶಿಷ್ಟ್ಯ ಪ್ರಸ್ತುತ ಕೇವಲ iOS ವರ್ಶನ್ 13 ಹಾಗೂ ಅದರ ಮೇಲಿನ ಮಾಡೆಲ್ ಗಳಿಗೆ ಮಾತ್ರ ಸೀಮಿತವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ-WhatsApp ವಿಶಿಷ್ಟ features ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಇದಲ್ಲದೆ ಇದರಲ್ಲಿ ಮತ್ತೊಂದು ವೈಶಿಷ್ಟ್ಯ ಜೋಡಿಸಲಾಗಿದ್ದು, ಇದರಲ್ಲಿ ನೀವು ಕಳುಹಿಸಿರುವ ಸಂದೇಶದ ರಿಸಿಪ್ಟ್ ಅನ್ನು ಸ್ವಿಚ್ ಆಫ್ ಮಾಡಬಹುದು. ಇದರಿಂದ ಸಂದೇಶ ಕಳುಹಿಸಿದವರಿಗೆ ನೀವು ಸಂದೇಶ ಕೇಳಿರುವಿರೋ ಅಥವಾ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ವಾಟ್ಸ್ ಆಪ್ ಖಾತೆಯ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ Account and Privacy ಯ Read Receipts ಆಪ್ಶನ್ ನಲ್ಲಿ ಬದಲಾವಣೆ ಮಾಡಬೇಕು. ಇದಲ್ಲದೆ ವಾಟ್ಸ್ ಆಪ್ ಕಸ್ಟಮ್ ಥರ್ಡ್ ಪಾರ್ಟಿ ಅನಿಮೇಟೆಡ್ ಸ್ಟಿಕರ್ ಗಳನ್ನು ಕೂಡ ತನ್ನ ವೈಶಿಷ್ಟ್ಯಗಳಲ್ಲಿ ಜೋಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.