Air travel new guidelines: ವಾಯುಯಾನ ನಿಯಮಗಳಲ್ಲಿ ಭಾರೀ ಬದಲಾವಣೆ

Air Travel new guidelines: ಹೊಸ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಪ್ರಯಾಣದ ಸಮಯದಲ್ಲಿ ನಿಮ್ಮನ್ನು ತಡೆಹಿಡಿಯಬಹುದು. ಆದ್ದರಿಂದ, ನಿಮ್ಮ ಕೋವಿಡ್ -19 (Covid-19) ಪ್ರಮಾಣಪತ್ರವನ್ನು ಸಮಯಕ್ಕೆ ಸಿದ್ಧವಾಗಿಡಿ.  

Written by - Yashaswini V | Last Updated : Feb 22, 2021, 01:24 PM IST
  • ನೀವು ವಾಯುಯಾನ ಮಾಡಲು ಹೊರಟಿದ್ದರೆ, ನೀವು ಕೆಲವು ವಿಶೇಷ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ
  • ಅನೇಕ ರಾಜ್ಯ ಸರ್ಕಾರಗಳು ಈ ಮಟ್ಟದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಿವೆ
  • ಈ ಹಿನ್ನಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಸಲಹೆಗಳನ್ನು ಸಹ ನೀಡಿವೆ
Air travel new guidelines: ವಾಯುಯಾನ ನಿಯಮಗಳಲ್ಲಿ ಭಾರೀ ಬದಲಾವಣೆ title=
Procedure for flight journey

ನವದೆಹಲಿ : Air Travel new guidelines: ಮುಂದಿನ ದಿನಗಳಲ್ಲಿ ನೀವು ವಾಯುಯಾನ ಮಾಡಲು ಹೊರಟಿದ್ದರೆ, ನೀವು ಕೆಲವು ವಿಶೇಷ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಇವುಗಳನ್ನು ನೀವು ನಿರ್ಲಕ್ಷ್ಯ ವಹಿಸಿದರೆ, ನೀವು ತೊಂದರೆ ಎದುರಿಸಬೇಕಾಗಬಹುದು. ಕೆಲವು ರಾಜ್ಯಗಳಲ್ಲಿ ಮತ್ತೆ ಕೋವಿಡ್ -19 (Covid-19) ಸೋಂಕು ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. 

ಅನೇಕ ರಾಜ್ಯ ಸರ್ಕಾರಗಳು ಈ ಮಟ್ಟದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಿವೆ. ಇದರ ಪರಿಣಾಮ ಏರ್‌ಲೈನ್ಸ್ ಕಂಪನಿಗಳು ಇದನ್ನು ಅನುಸರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಸಲಹೆಗಳನ್ನು ಸಹ ನೀಡಿವೆ.

ನೀವು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಹೋಗುತ್ತಿದ್ದರೆ, ನಿಯಮಗಳನ್ನು ಗಮನಿಸಿ (If you are going to Bengaluru from Maharashtra, note the rules)
ನೀವು ಮಹಾರಾಷ್ಟ್ರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದರೆ, ನೀವು ಕೋವಿಡ್ ಪರೀಕ್ಷೆಯ ಋಣಾತ್ಮಕ ಆರ್‌ಟಿ-ಪಿಸಿಆರ್ (RT-PCR) ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಏರ್ ಏಷ್ಯಾ ಇಂಡಿಯಾ (Air Asia India) ತನ್ನ ಪ್ರಯಾಣಿಕರಿಗೆ ನೀಡಿದ ಸಲಹೆಯಲ್ಲಿ ತಿಳಿಸಿದೆ. ಅಲ್ಲದೆ, ಈ ಪ್ರಮಾಣಪತ್ರವು 72 ಗಂಟೆಗಳಿಗಿಂತ ಹೆಚ್ಚು ಹಳೆಯದಾಗಿರಬಾರದು ಎಂದು ಸೂಚನೆ ನೀಡಿದೆ. ವಾಸ್ತವವಾಗಿ, ಕರ್ನಾಟಕ ರಾಜ್ಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ - ಕೊರೊನಾ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಈ ರಾಜ್ಯದಲ್ಲಿ 1 ವಾರಗಳ ಕಾಲ ಲಾಕ್ ಡೌನ್

ಗೋಏರ್ ಸಹ ಸಲಹೆಯನ್ನು ನೀಡಿತು (GoAir also issued advisory) ;
ಅದೇ ರೀತಿ ದೆಹಲಿ-ಎನ್‌ಸಿಆರ್, ಗೋವಾ, ಗುಜರಾತ್, ಕೇರಳ, ಮತ್ತು ರಾಜಸ್ಥಾನದಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಕೋವಿಡ್ -19 ನೆಗೆಟಿವ್ ಆರ್‌ಟಿ-ಪಿಸಿಆರ್ ಪ್ರಮಾಣ ಪತ್ರ ಕಡ್ಡಾಯ ಎಂದು ಮತ್ತೊಂದು ದೇಶೀಯ ವಿಮಾನಯಾನ ಕಂಪನಿ ಗೋಏರ್  (GoAir) ಸಲಹೆಯಲ್ಲಿ ತಿಳಿಸಿದೆ. ಒಂದೊಮ್ಮೆ ಪ್ರಯಾಣಿಕರ ಬಳಿ ಆರ್‌ಟಿ-ಪಿಸಿಆರ್ ಪ್ರಮಾಣ ಪತ್ರ ಇಲ್ಲದಿದ್ದರೆ ನಿಮ್ಮ ಪ್ರಯಾಣವನ್ನು ತಡೆಹಿಡಿಯಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಆದ್ದರಿಂದ, ನಿಮ್ಮ ಕೋವಿಡ್ -19 ಪ್ರಮಾಣಪತ್ರವನ್ನು ಸಮಯಕ್ಕೆ ಸಿದ್ಧವಾಗಿಡಿ.

ಇದನ್ನೂ ಓದಿ - ಶೀಘ್ರದಲ್ಲಿಯೇ ಶ್ರೀಸಾಮಾನ್ಯರ Vaccination ಅಭಿಯಾನ, ಈ ದಿನ ಶುರು ಆಗುವ ಸಾಧ್ಯತೆ

ವಿದೇಶಿ ಪ್ರಯಾಣಿಕರಿಗೆ ನಾಳೆಯಿಂದ ಹೊಸ ನಿಯಮ (travelling to India from abroad, then the new rule from tomorrow) :
ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ -19 (Covid 19) ನೆಗೆಟಿವ್ ಆರ್ಟಿ-ಪಿಸಿಆರ್ ಪ್ರಮಾಣಪತ್ರವೂ ಅಗತ್ಯವಾಗಿರುತ್ತದೆ ಎಂದು  ಸ್ಪೈಸ್‌ಜೆಟ್ ಸಲಹೆ ನೀಡಿದೆ.

ವಿಮಾನ ಸಮಯದ ಕನಿಷ್ಠ 72 ಗಂಟೆಗಳ ಒಳಗೆ ವರದಿಯು ಮುಖ್ಯವಾಗಿರುತ್ತದೆ. ಮೂಲ ಪ್ರಮಾಣಪತ್ರವನ್ನು ಸಹ ಒಟ್ಟಿಗೆ ಇಡಬೇಕಾಗುತ್ತದೆ. ಅಲ್ಲದೆ, ಆರೋಗ್ಯ ಸೇತು ಆ್ಯಪ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿಯೂ ಸ್ಥಾಪಿಸಬೇಕು. ಈ ಹೊಸ ನಿಯಮ 22 ಫೆಬ್ರವರಿ 2021 ರಿಂದ ಜಾರಿಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News