Corona Virus : ಬೆಂಗಳೂರಿಗೆ ಈಗ ಬ್ರೆಜಿಲ್, ದಕ್ಷಿಣ ಆಫ್ರಿಕಾ ಭಯ ಯಾಕೆ.?

ರಾಜಧಾನಿ ಬೆಂಗಳೂರು  ಇನ್ನೇನು ಕರೋನಾದಿಂದ  ಸಂಪೂರ್ಣವಾಗಿ ಮುಕ್ತವಾಗಲಿದೆ ಎನ್ನುಷ್ಟವರಲ್ಲಿ ಮತ್ತೊಂದು ಆತಂಕ ಆವರಿಸಿಕೊಂಡಿದೆ.

Written by - Ranjitha R K | Last Updated : Feb 17, 2021, 08:51 AM IST
  • ಬೆಂಗಳೂರಿಗೆ ಈಗ ಬ್ರೆಜಿಲ್ ಮೂಲದ ಕರೋನಾ ವೈರಸ್ ಭಯ
  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ
  • ಕೇರಳದಿಂದ ಬರುವವರಿಗೂ ಕರೋನಾ ಟೆಸ್ಟ್ ಕಡ್ಡಾಯ
Corona Virus : ಬೆಂಗಳೂರಿಗೆ ಈಗ ಬ್ರೆಜಿಲ್, ದಕ್ಷಿಣ ಆಫ್ರಿಕಾ ಭಯ ಯಾಕೆ.? title=
ಬೆಂಗಳೂರಿಗೆ ಈಗ ಬ್ರೆಜಿಲ್ ಮೂಲದ ಕರೋನಾ ವೈರಸ್ ಭಯ (FIle photo)

ಬೆಂಗಳೂರು : ರಾಜಧಾನಿ ಬೆಂಗಳೂರು (Bangaluru) ಇನ್ನೇನು ಕರೋನಾದಿಂದ (Covid-19) ಸಂಪೂರ್ಣವಾಗಿ ಮುಕ್ತವಾಗಲಿದೆ ಎನ್ನುಷ್ಟವರಲ್ಲಿ ಮತ್ತೊಂದು ಆತಂಕ ಆವರಿಸಿಕೊಂಡಿದೆ. ಬ್ರಿಟನ್ ಮೂಲದ ರೂಪಾಂತರಿ ಸೂಪರ್ ಸ್ಪ್ರೆಡರ್ ಕರೋನಾ ವೈರಸ್ ಆತಂಕ ಸೃಷ್ಟಿಸಿದ ಬೆನ್ನಲ್ಲೇ ಈಗ ಅದಕ್ಕಿಂತಲೂ ಸ್ವಲ್ಪ ಉಗ್ರ ಎನಿಸಿರುವ ಮತ್ತೊಂದು ರೂಪಾಂತರಿತ ಕರೋನಾ ವೈರಸ್ (Mutated Virus) ಕಾಣಿಸಿಕೊಂಡಿದೆ.  ಇದು ಬ್ರೆಜಿಲ್ (Brazil)ಮತ್ತು ದಕ್ಷಿಣಾ ಆಫ್ರಿಕಾ (South Africa) ಮೂಲದ ಮ್ಯೂಟೇಟೆಡ್ ಅಂದರೆ ರೂಪಾಂತರಿತ ಕರೋನಾ ಎಂದು ಹೇಳಲಾಗಿದೆ. 

ಬ್ರೆಜಿಲ್ ಮತ್ತು ದಕ್ಷಿಣಾ ಆಫ್ರಿಕಾ ಪ್ರಯಾಣಿಕರ ಮೇಲೆ ಕಣ್ಗಾವಲು:
ಹೊಸ ವೈರಸ್ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Bengaluru Airport) ಕಟ್ಟೆಚ್ಚರ ವಹಿಸಲಾಗಿದೆ. ಬ್ರೆಜಿಲ್ (Brazil) ಮತ್ತು ದಕ್ಷಿಣ ಆಫ್ರಿಕಾ ಪ್ರಯಾಣದ (South Africa) ಹಿನ್ನೆಲೆ ಇರುವವರಿಗೆ ಆರ್ ಟಿಪಿಸಿಆರ್ ಪರೀಕ್ಷೆ (RTPCR Test) ಕಡ್ಡಾಯ ಮಾಡಲಾಗಿದೆ.  ಪಾಸಿಟಿವ್ ಬಂದರೆ, 14 ದಿನಗಳ ಕ್ವಾರಂಟೈನ್ (Quarantin)ಕಡ್ಡಾಯ ಮಾಡಲಾಗಿದೆ.  7 ದಿನಗಳ ನಂತರ ಅವರಿಗೆ ಮತ್ತೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ. 

ಇದನ್ನೂ ಓದಿ : Covid-19 Vaccination Updates: Aarogya Setu App ಸೇರಿದ Co-WIN App

ಕೇರಳದಿಂದ ಬಂದವರಿಗೂ ಕರೋನಾ ಟೆಸ್ಟ್ ಕಡ್ಡಾಯ :
ಇದರ ಜೊತೆಗೆ ಕೇರಳದಿಂದ ಬಂದವರಿಗೂ ಕರೋನಾ (Coronavirus) ಟೆಸ್ಟ್ ಕಡ್ಡಾಯ ಮಾಡಲಾಗಿದೆ.  ಕರೋನಾ ಕಂಡು ಬಂದಲ್ಲಿ ಜಿನೋಮ್ ಸಿಕ್ವೆನ್ಸಿಂಗ್ ಗೆ ಒಳಪಡಿಸಿ, ಕರೋನಾ ವೆರಿಯೆಂಟ್ ನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತದೆ.  ಕೇರಳದಿಂದ (Kerala) ಬರುವವರು 72 ಗಂಟೆಯೊಳಗೆ ಟೆಸ್ಟ್ ಮಾಡಿರುವ ರಿಪೋರ್ಟ್  ನೀಡಬೇಕಾಗುತ್ತದೆ. 

ಇದನ್ನೂ ಓದಿ : ಕರೋನಾ ಪಾಸಿಟಿವ್ ಆದ ಮಹಿಳೆಯ ಎದೆಹಾಲಿನ ಬಣ್ಣದಲ್ಲಿ ಬದಲಾವಣೆ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News