Bank privatization : 4 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ : ಶೀಘ್ರವೇ ಫೋಷಣೆ ಸಾಧ್ಯತೆ

ಶೀಘ್ರವೇ ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕುಗಳು ಖಾಸಗೀಕರಣಗೊಳ್ಳಲಿವೆ. ಸರ್ಕಾರ  ಬಗ್ಗೆ ಫೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ಸಂಸ್ಥೆಗಳನ್ನು ಉಳಿಸಬೇಕಾದರೆ ಖಾಸಗೀಕರಣ ಅನಿವಾರ್ಯ ಎಂದಿದೆ ಸರ್ಕಾರ..  

Written by - Ranjitha R K | Last Updated : Feb 16, 2021, 09:11 AM IST
  • ಶೀಘ್ರದಲ್ಲೇ ಖಾಸಗೀಕರಣಗೊಳ್ಳಲಿರುವ ನಾಲ್ಕು ಬ್ಯಾಂಕುಗಳು
  • ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ 12 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು
  • ಖಾಸಗೀಕರಣಗೊಳಿಸದಿದ್ದರೆ ಸಂಸ್ಥೆ ನಡೆಸುವುದು ಕಷ್ಟ
Bank privatization : 4 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ : ಶೀಘ್ರವೇ ಫೋಷಣೆ ಸಾಧ್ಯತೆ title=
ಶೀಘ್ರದಲ್ಲೇ ಖಾಸಗೀಕರಣಗೊಳ್ಳಲಿರುವ ನಾಲ್ಕು ಬ್ಯಾಂಕುಗಳು (file photo)

ದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು (Privatization) ಸರ್ಕಾರ ಮುಂದಾಗಿದೆ. ಮೂಲಗಳ ಪ್ರಕಾರ  ಶೀಘ್ರದಲ್ಲೇ 4 ಬ್ಯಾಂಕುಗಳ (Bank) ಖಾಸಗೀಕರಣವನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ.  ಬಜೆಟ್‌ನಲ್ಲಿ ಹಣಕಾಸು ಸಚಿವರು ಕೇವಲ 2 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣದ ಬಗ್ಗೆ ಹೇಳಿದ್ದರು.  ಆದರೆ ಇದೀಗ, ನಾಲ್ಕು ಬ್ಯಾಂಕುಗಳ ಖಾಸಗೀಕರಣದ ಬಗ್ಗೆ ಸುದ್ದಿ ಕೇಳಿಬರುತ್ತದೆ. 

ಯಾವ 4 ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಬಹುದು : 
ವರದಿಗಳ ಪ್ರಕಾರ, ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharastra), ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (India overseas bank )ಮತ್ತು ಸೆಂಟ್ರಲ್ ಬ್ಯಾಂಕ್ (central bank) ಖಾಸಗೀಕರಣಗೊಳಿಸುವ ಸಾಧ್ಯತೆಯಿದೆ.  ಇದಲ್ಲದೆ  ಬ್ಯಾಂಕ್ ಆಫ್ ಇಂಡಿಯಾದ  (Bank of India) ಖಾಸಗೀಕರಣವನ್ನೂ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.  ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ : Good Return : ಎಸ್ ಬಿಐ ಅನ್ವುಟಿ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ, ಪಡೆಯಿರಿ ಅಧಿಕ ಲಾಭ

ಬ್ಯಾಂಕುಗಳ ವಿಲೀನ ಮತ್ತು ಖಾಸಗೀಕರಣ :
ದೊಡ್ಡ ಬ್ಯಾಂಕುಗಳನ್ನು ಮಾತ್ರ ಉಳಿಸಿಕೊಳ್ಳಲು ಸರ್ಕಾರ ಪ್ರಯತ್ನ ನಡೆಸುತ್ತಿದೆ.   ಈ ಬ್ಯಾಂಕುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (Bank of Baroda) ಮತ್ತು ಕೆನರಾ ಬ್ಯಾಂಕ್ (Canara Bank) ಸೇರಿವೆ. ಕಳೆದ ವರ್ಷ ಬ್ಯಾಂಕುಗಳು ವಿಲೀನಗೊಳ್ಳುವ (Merge) ಮೊದಲು, ದೇಶದಲ್ಲಿ ಒಟ್ಟು 23 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಇದ್ದವು.  ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಇದೀಗ ದೇಶದಲ್ಲಿ ಕೇವಲ 12 ಸರ್ಕಾರಿ ಬ್ಯಾಂಕುಗಳು ಮಾತ್ರ ಉಳಿದಿವೆ.

ಸಾರ್ವಜನಿಕ ವಲಯದ ಬ್ಯಾಂಕುಗಳು ಯಾವುವೆಂದರೆ :
1. ಬ್ಯಾಂಕ್ ಆಫ್ ಬರೋಡಾ
2. ಬ್ಯಾಂಕ್ ಆಫ್ ಇಂಡಿಯಾ
3. ಬ್ಯಾಂಕ್ ಆಫ್ ಮಹಾರಾಷ್ಟ್ರ
4. ಕೆನರಾ ಬ್ಯಾಂಕ್
5. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
6. ಇಂಡಿಯನ್ ಬ್ಯಾಂಕ್
7. ಇಂಡಿಯನ್ ಓವರ್ ಸೀಸ್ ಬ್ಯಾಂಕ್
8. ಪಂಜಾಬ್ ನ್ಯಾಷನಲ್ ಬ್ಯಾಂಕ್
9. ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್
10. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
11. ಯುಕೋ ಬ್ಯಾಂಕ್
12. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಇದನ್ನೂ ಓದಿ : LPG Cylinder Price: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ದರ ಏರಿಕೆ, ಜನಸಾಮಾನ್ಯರಿಗೆ ಮತ್ತೆ ಶಾಕ್

ಖಾತೆದಾರರಿಗೆ ಯಾವುದೇ ನಷ್ಟವಿಲ್ಲ : 
ಬ್ಯಾಂಕುಗಳ ವಿಲೀನ ಅಥವಾ ಖಾಸಗೀಕರಣದಿಂದ  ಖಾತೆದಾರರಿಗೆ ಯಾವುದೇ ನಷ್ಟವಿಲ್ಲ. ಖಾತೆದಾರರ ಸಂಪೂರ್ಣ ಮೊತ್ತವನ್ನು ವಿಲೀನಗೊಂಡ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತದೆ.  ಖಾತೆದಾರರ ಪಾಸ್‌ಬುಕ್ (Passbook), ಚೆಕ್‌ಬುಕ್ (cheque book), ಬ್ಯಾಂಕ್ ಅಪ್ಲಿಕೇಶನ್, ಐಎಫ್‌ಎಸ್‌ಸಿ ಕೋಡ್ (IFSC code) ಅನ್ನು ಮಾತ್ರ ಬದಲಾಯಿಸಲಾಗುತ್ತದೆ. ಗ್ರಾಹಕರ ಠೇವಣಿಯ ಮೇಲೆ ಯಾವುದೇ ಪರಿಣಾಮವಿಲ್ಲ. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು (Bank) ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮಗಳು ವಿಭಿನ್ನವಾಗಿವೆ. 

ಕೆಲವು ಸರ್ಕಾರಿ ಸಂಸ್ಥೆಗಳನ್ನು ನಡೆಸಲು, ಅವುಗಳನ್ನು ಖಾಸಗೀಕರಣಗೊಳಿಸುವುದು ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸದಿದ್ದರೆ,  ನೌಕರರಿಗೆ ವೇತನ (Salary)ನೀಡುವುದು ಕೂಡಾ ಕಷ್ಟವಾಗಲಿದೆ.  ಇಂಥಹ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದರೆ ಕಡೇ ಪಕ್ಷ ಸಂಸ್ಥೆಯ ನೌಕರರ  ಕೆಲಸಕ್ಕೆ ಯಾವುದೇ ರೀತಿಯ ತೊಂದರೆ ಯಾಗುವುದಿಲ್ಲ.  ಈಗ ಖಾಸಗೀಕರಣದ ಮಾತು ಕೇಳಿ ಬರುತ್ತಿರುವ 4 ಬ್ಯಾಂಕುಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.  ಆದರೆ ಬ್ಯಾಂಕುಗಳ ಖಾಸಗೀಕರಣದಿಂದ ನೌಕರರ (Employees) ಉದ್ಯೋಗಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. 

ಇದನ್ನೂ ಓದಿ : Jandhan ಖಾತೆದಾರರಿಗೆ ಸಿಗುತ್ತಿರುವ ಈ ಲಾಭ ನಿಮ್ಮದಾಗಿಸಲು ಈ ಕೆಲಸ ತಪ್ಪದೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News