ಹುಬ್ಬಳ್ಳಿ: ಬಸ್ ಪ್ರಯಾಣ ದರ ಏರಿಕೆಯ ಪ್ರಸ್ತಾವವನ್ನು ಮಾರ್ಚ್ನಲ್ಲಿ ಜರುಗುವ ಅಂತರ್ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಲಾಗುವುದು. ಆನಂತರ ಸರ್ಕಾರದ ನಿರ್ದೇಶನ ಆಧರಿಸಿ ಪ್ರಯಾಣದರ ಹೆಚ್ಚಳ ಮಾಡಲಾಗುವುದು ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹೇಳಿದರು.
32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ವೇಳೆ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ನಿರ್ದೇಶಕ ಕೃಷ್ಣ ಬಾಜಪೇಯಿ, ಡೀಸೆಲ್ ಬೆಲೆ(Diesel Rate) ಏರಿಕೆ ಆಧರಿಸಿ ಪ್ರಯಾಣದ ದರವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಳ ಮಾಡಬೇಕು. ಈಗ ಕೆಎಸ್ಆರ್ಟಿಸಿ ನಿಯಮದಂತೆ ಮೂರು ವರ್ಷಗಳಿಗೆ ಒಮ್ಮೆ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಒಮ್ಮೆಲೆ ಹೆಚ್ಚಿನ ದರ ಏರಿಕೆಯಾದಂತೆ ಸಾರ್ವಜನಿಕರಿಗೆ ಗೋಚರವಾಗುತ್ತದೆ. ಕೋವಿಡ್ ಲಾಕ್ಡೌನ್ನಿಂದ ಸಂಸ್ಥೆ ನಷ್ಟದಲ್ಲಿ ಇದೆ ಎಂದರು.
'ಒಂಟಿ ಸಲಗ ನಾನು ಯಾರಿಗೂ ಹೆದರುವುದಿಲ್ಲ'– ಯತ್ನಾಳ್
ಸಂಸ್ಥೆಯ 30 ನೌಕರರು ಕೋವಿಡ್(Covid)ನಿಂದ ಮೃತರಾಗಿದ್ದಾರೆ. ಅವರ ವಿವರಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕೆಎಸ್ಆರ್ಟಿಸಿಯಿಂದ ಶೀಘ್ರವಾಗಿ ಪರಿಹಾರ ನೀಡಲು ಅನುಮತಿ ಆದೇಶ ದೊರೆಯಲಿದೆ ಎಂದರು.
PUC Exam 2021: ದ್ವಿತೀಯ PUC ವೇಳಾಪಟ್ಟಿ ರಿಲೀಸ್: ಮೇ.24ರಿಂದ ಜೂ.16ರವರೆಗೆ ಎಕ್ಸಾಮ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.