Vistadome Coach : ಇನ್ನು ಸಂಪೂರ್ಣ ಗಾಜಿನ ಬೋಗಿಯಲ್ಲಿ ಕುಳಿತು ಸಹ್ಯಾದ್ರಿಯ ದರ್ಶನ ಮಾಡಿ..!

ಸಹ್ಯಾದ್ರಿಯ ಒಡಲು ರುದ್ರ ರಮಣೀಯ ಪ್ರಕೃತಿಯ ಮಡಿಲು. ಪಶ್ಚಿಮ ಘಟ್ಟಗಳ ಹಸಿರಿನ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು. ಕಣ್ಣೆತ್ತಿದ್ದಷ್ಟೂ ದೂರಕ್ಕೆ ಕಾಣುವುದು ಬರೀ ಹಸಿರು.

Written by - Ranjitha R K | Last Updated : Feb 12, 2021, 11:00 AM IST
  • ಬೆಂಗಳೂರು-ಮಂಗಳೂರು ಹಗಲು ರೈಲಿಗೆ ವಿಸ್ಟಾಡೋಮ್ ಕೋಚ್
  • ಸಂಪೂರ್ಣ ಗಾಜಿನಿಂದಲೇ ಮಾಡಲಾದ ಕೋಚ್ ವಿಸ್ಟಾಡೋಮ್
  • ಶಿರಾಡಿ ಘಾಟಿನ ಚೆಲುವನ್ನು ಪನೊರಮಿಕ್ ನೋಟದಲ್ಲಿ ಸವಿಯಿರಿ
Vistadome Coach : ಇನ್ನು ಸಂಪೂರ್ಣ ಗಾಜಿನ ಬೋಗಿಯಲ್ಲಿ ಕುಳಿತು ಸಹ್ಯಾದ್ರಿಯ ದರ್ಶನ ಮಾಡಿ..! title=
ಬೆಂಗಳೂರು-ಮಂಗಳೂರು ಹಗಲು ರೈಲಿಗೆ ವಿಸ್ಟಾಡೋಮ್ ಕೋಚ್ (photo twitter)

ಬೆಂಗಳೂರು : ಸಹ್ಯಾದ್ರಿಯ (Sahyadri) ಒಡಲು ರುದ್ರ ರಮಣೀಯ ಪ್ರಕೃತಿಯ ಮಡಿಲು. ಪಶ್ಚಿಮ ಘಟ್ಟಗಳ ಹಸಿರಿನ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು. ಕಣ್ಣೆತ್ತಿದ್ದಷ್ಟೂ ದೂರಕ್ಕೆ ಕಾಣುವುದು ಬರೀ ಹಸಿರು. ಈ ಹಸಿರನ್ನು ಬಗೆದು, ಮೊಗೆದು ಕಣ್ತುಂಬಿಕೊಳ್ಳಲು ಕೆಲವರು ಚಾರಣಕ್ಕೆ (Trekking) ಹೋಗುತ್ತಾರೆ. ಇನ್ನು ಕೆಲವರು ಘಾಟಿಯಲ್ಲಿ ಜಾಲಿ ರೈಡ್ ಹೋಗುತ್ತಾರೆ. ಸಹ್ಯಾದ್ರಿಯನ್ನು ಪ್ರೀತಿಸುವವರಿಗೆ ಭಾರತೀಯ ರೈಲು (Indian Rail) ಒಂದು ಖುಷಿಯ ಸುದ್ದಿ ತಂದಿದೆ. 

ಬೆಂಗಳೂರು-ಮಂಗಳೂರು ರೈಲಿನಲ್ಲಿ `ವಿಸ್ಟಾಡೋಮ್' ಕೋಚ್.!
ಏನಿದು ವಿಸ್ಟಾಡೋಮ್ ಕೋಚ್ (Vistadome Coach).? ಇದೊಂದು ಪಾರದರ್ಶಕ ಕೋಚ್. ಬಹುತೇಕ ಪಾರದರ್ಶಕ ಗಾಜಿನಿಂದಲೇ (Glass Coach) ಮಾಡಲಾದ ಬೋಗಿ ಇದು. ಇದರ ಛಾವಣಿ, ಆವರಣ, ಕಿಟಕಿ ಎಲ್ಲವೂ ಗಾಜಿನಿಂದಲೇ ರೂಪಿತವಾಗಿರುತ್ತದೆ. ಪ್ರಯಾಣಿಕರಿಗೆ ಹೊರಗಿನ ಎಲ್ಲಾ ದೃಶ್ಯಗಳೂ ಸ್ಪಷ್ಟವಾಗಿ ಕಾಣುತ್ತದೆ. ದಕ್ಷಿಣ ಪಶ್ಚಿಮ ರೈಲ್ವೆಗೆ (Railway) ಇಂಥ ಕೋಚ್ ಗಳು ಮಂಜೂರಾಗಿವೆ. ಅಂದರೆ ಈ  ಕೋಚ್ ಗಳು ಶೀಘ್ರದಲ್ಲೇ ಬೆಂಗಳೂರು-ಮಂಗಳೂರು ಹಗಲು ರೈಲಿಗೆ (Bangaluru - Mangaluru day train) ಅಳವಡಿಕೆಯಾಗಲಿವೆ.

ಇದನ್ನೂ ಓದಿ : Women Saftey in Train: ಮಹಿಳಾ ಸುರಕ್ಷೆಗಾಗಿ ಹೈಟೆಕ್ಕಾಗುತ್ತಿದೆ ನಮ್ಮ ರೈಲು.! ಈ ಕಾರಣಕ್ಕೆ ನೀವಿನ್ನು ಸೇಫ್

ಗಾಜಿನ ಕೋಚಿನಲ್ಲಿ ಕುಳಿತು ಸಹ್ಯಾದ್ರಿಯ ದರ್ಶನ ಮಾಡಿ..!
ಬೆಂಗಳೂರು - ಮಂಗಳೂರು ರೈಲು ಶಿರಾಡಿಘಾಟಿಯನ್ನು (Shiradi Ghat) ಕ್ರಾಸ್ ಮಾಡಿಕೊಂಡು ಸಾಗುತ್ತದೆ. ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ (Subramanya – Sakaleshpura)ಸುಮಾರು 50 ಕಿ. ಮಿ. ಮಾರ್ಗದ ಸೊಬಗನ್ನು ನೀವು ಮಿಸ್ ಮಾಡುವಂತಿಲ್ಲ. ಇಲ್ಲಿ ಎಡಕುಮೇರಿ (Edakumeri) ಬಳಿ ಸಿಗೋ ರೈಲ್ವೆ ಸೇತುವೆ, ಅಲ್ಲಿಯ ಪ್ರಕೃತಿಯ ಸೊಬಗನ್ನು ವರ್ಣಿಸಲು ಸಾಧ್ಯವಿಲ್ಲ.  ವಿಸ್ಟಾಡೋಮ್ ಕೋಚಿನಲ್ಲಿ ಕುಳಿತು ಪಯಣಿಸಿದರೆ, ಕೋಚ್ನೊಳಗೆ ಕುಳಿತು ಸಹ್ಯಾದ್ರಿಯ ಎಲ್ಲಾ ರುದ್ರ, ರಮಣೀಯ ಸೊಬಗನ್ನು 360 ಡಿಗ್ರಿಕೋನದಲ್ಲಿ ಕಣ್ತುಂಬಿಸಿಕೊಳ್ಳಬಹುದು. ನಿಮ್ಮ ಸೀಟ್ ಕೂಡಾ 360ಡಿಗ್ರಿ ಪನೋರಮಿಕ್ ಕೋನದಲ್ಲಿ ತಿರುಗುತ್ತದೆ.  ಬಹುದಿನಗಳಿಂದ ಕಾತರಿಸುತ್ತಿದ್ದ ವಿಸ್ಟಾಡೋಮ್ ಕೋಚ್ ದಕ್ಷಿಣ ಮಧ್ಯೆ ರೈಲ್ವೆಗೆ ಮಂಜೂರಾಗಿದೆಯೆಂದು ಸಂಸದ ಪಿಸಿ ಮೋಹನ್ (PC Mohan) ಟ್ವೀಟ್ ಮಾಡಿದ್ದಾರೆ.

 

ಗಾಜಿನ ಕೋಚಿನಲ್ಲಿ ಇನ್ನೂ ಏನೇನಿದೆ..?
ಗಾಜಿನ ಕೋಚಿನೊಳಗೆ ಕುಳಿತು ನೀವು ನಿಸರ್ಗ ಸಿರಿಯನ್ನು (Greenery) ಸವಿಯಬಹುದು. ಈ ಕೋಚಿನೊಳಗೆ 40 ಸೀಟುಗಳಿರುತ್ತವೆ. ಎಲ್ಲಾ ಸೀಟು 360 ಡಿಗ್ರಿ ಸುತ್ತುತ್ತದೆ. ಸಂಪೂರ್ಣ ಎಸಿ ಕೋಚ್ ಇದು. ಜಿಪಿಎಸ್ (GPS) ಕನೆಕ್ಟ್ ಆಗಿರುತ್ತದೆ. ಓವೆನ್, ಫ್ರಿಜ್ ಎಲ್ಲಾ ಸೌಲಭ್ಯವಿರುತ್ತದೆ.

ಇದನ್ನೂ ಓದಿ : IRCTC : ಇನ್ಮೇಲೆ ರೈಲಿನಲ್ಲಿ ಸಿಗುತ್ತೆ ಊಟ ತಿಂಡಿ, ಆದರೆ ಇದೆ ಕೆಲವು ಕಂಡೀಷನ್ಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News