ಹಫೀಜ್‌ ಸಯೀದ್‌, ಒಸಾಮಾ ಬಿನ್ ಲಾಡನ್'ಗೆ ರಕ್ಷಣೆ ನೀಡಿದ ಪಾಕಿಸ್ತಾನ ಒಂದು ವಿಫಲ ದೇಶ: ಭಾರತ

 ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕಗಳ ಉಲ್ಲಂಘನೆ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ದೂರು ನೀಡುವ ಯಾವುದೇ ನೈತಿಕ ಹಕ್ಕು ಪಾಕಿಸ್ತಾನಕ್ಕಿಲ್ಲ.

Last Updated : Mar 10, 2018, 12:50 PM IST
ಹಫೀಜ್‌ ಸಯೀದ್‌, ಒಸಾಮಾ ಬಿನ್ ಲಾಡನ್'ಗೆ ರಕ್ಷಣೆ ನೀಡಿದ ಪಾಕಿಸ್ತಾನ ಒಂದು ವಿಫಲ ದೇಶ: ಭಾರತ  title=

ಜಿನೀವಾ (ಸ್ವಿಟ್ಜರ್ಲ್ಯಾಂಡ್): 9/11 ದಾಳಿಯ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ ಮತ್ತು ವಿಶ್ವಸಂಸ್ಥೆಯಿಂದ ಉಗ್ರನೆಂದು ಘೋಷಿಸಲ್ಪಟ್ಟಿಟರುವ ಹಫೀಜ್‌ ಸಯೀದ್‌ ಗೆ ರಕ್ಷಣೆ ನೀಡಿರುವ  ಪಾಕಿಸ್ತಾನ ಒಂದು ವಿಫಲ ದೇಶ ಎಂದು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ. 

"ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಒಮರ್ ಅಂತಹ ಭಯೋತ್ಪಾದಕರಿಗೆ ರಕ್ಷಣೆ ನೀಡಿದ ಪಾಕಿಸ್ತಾನಕ್ಕೆ, ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕಗಳ ಉಲ್ಲಂಘನೆ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ದೂರು ನೀಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಯುಎನ್ ಮಾನವ ಹಕ್ಕುಗಳ ಮಂಡಳಿಯ 37 ನೇ ಅಧಿವೇಶನದಲ್ಲಿ ಪಾಕಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಕ್ಕೆ ಭಾರತದ ಎರಡನೇ ಕಾರ್ಯದರ್ಶಿ ಮಿನಿ ದೇವಿ ಕುಮಾಮ್ ಪ್ರತಿಕ್ರಿಯಿಸಿದರು. 

"ಯುಎನ್ ಭದ್ರತಾ ಮಂಡಳಿಯ ನಿರ್ಣಯ 1267 ರ ಉಲ್ಲಂಘನೆಯಲ್ಲಿ, ವಿಶ್ವಸಂಸ್ಥೆ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಹಫೀಜ್ ಮೊಹಮ್ಮದ್ ಸಯೀದ್ ಮುಕ್ತವಾಗಿ ರಾಜ್ಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಯುಎನ್ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳು ಇಂದಿಗೂ ಪಾಕಿಸ್ತಾನದಲ್ಲಿ  ಮುಖ್ಯವಾಹಿನಿಯಲ್ಲಿವೆ" ಎಂದು ಕುಮಾಮ್ ಹೇಳಿದ್ದಾರೆ.

2008 ರ ಮುಂಬಯಿ ದಾಳಿ ಮುಖ್ಯಸ್ಥ ಸಯೀದ್, ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ ಮತ್ತು ಜಮಾತ್-ಉದ್-ದವಾ ಸಂಸ್ಥಾಪಕ. ಕಳೆದ ವರ್ಷ ಪಾಕಿಸ್ತಾನದ ನ್ಯಾಯಾಲಯದ ಗೃಹ ಬಂಧನದಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಜಾಗತಿಕ ಪ್ರತಿಭಟನೆ ವ್ಯಕ್ತವಾಗಿತ್ತು. ಅಲ್ಲದೆ, ಸಯೀದ್ ತಮ್ಮ ರಾಜಕೀಯ ಪಕ್ಷವನ್ನು ಆರಂಭಿಸಿ ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಘೋಷಿಸಿದ್ದರು.

ಪಾಕಿಸ್ತಾನವು ಭಾರತದಲ್ಲಿ ಗಡಿ ಭಯೋತ್ಪಾದನೆಯನ್ನು ಬೆಂಬಲಿಸುವ ಕೆಲಸ ಮುಂದುವರಿಸುತ್ತಿದೆ ಎಂದು ಹೇಳಿದ ಅವರು, "ಭಯೋತ್ಪಾದಕರು ಪಾಕಿಸ್ತಾನದಲ್ಲಿ ಹುಟ್ಟಿಕೊಂಡು, ಅಲ್ಲಿನ ಬೀದಿಗಳಲ್ಲಿ ನಿರ್ಭಯವಾಗಿ ಸಂಚರಿಸುತ್ತಿದ್ದರೂ, ಮಾನವ ಹಕ್ಕುಗಳ ರಕ್ಷಣೆ ಭಾರತಕ್ಕೆ ಉಪನ್ಯಾಸ ನಿಡುವ ಯಾವುದೇ ನೈತಿಕತೆ ಪಾಕಿಸ್ತಾನಕ್ಕಿಲ್ಲ ಎಂಡು ಅವರು ಹೇಳಿದ್ದಾರೆ.  

Trending News