Kisan Samman Nidhi : ವಸೂಲಾಗಲಿದೆ 33 ಲಕ್ಷ ರೈತರಿಂದ ಕೃಷಿ ಸಮ್ಮಾನ್ ಹಣ..? ಪಟ್ಟಿಯಲ್ಲಿ ನೀವಿದ್ದೀರಾ..?

ನೀವು ಒಂದು ವೇಳೆ ತಪ್ಪು ಅಥವಾ ಸುಳ್ಳು ಮಾಹಿತಿ ಕೊಟ್ಟು ಕಿಸಾನ್ ಸಮ್ಮಾನ್ ನಿಧಿ ಪಡೆಯುತ್ತಿದ್ದರೆ, ನಿಮಗೆ ಯಾವುದೇ ಹೊತ್ತಿನಲ್ಲಿ ಸರ್ಕಾರದ ನೊಟೀಸ್ ಬರಬಹುದು.

Written by - Ranjitha R K | Last Updated : Feb 8, 2021, 10:56 AM IST
  • ಸುಳ್ಳು ಮಾಹಿತಿ ನೀಡಿ ಕೃಷಿ ಸಮ್ಮಾನ್ ನಿಧಿ ಪಡೆಯುತ್ತಿದ್ದರೆ ನಿಮಗೆ ನೊಟೀಸ್ ಬರಬಹುದು
  • ಇಲ್ಲಿವರೆಗೆ ಪಡೆದ ಎಲ್ಲಾ ದುಡ್ಡನ್ನು ವಾಪಸ್ ಮಾಡಿ ಎಂದು ಸರ್ಕಾರ ಕೇಳಬಹುದು
  • ಕೃಷಿ ಸಮ್ಮಾನ್ ನಿಧಿ ಯಾರಿಗೆ ಸಿಗಲ್ಲ, ಯಾಕೆ ವಾಪಸ್ ಮಾಡಬೇಕು ಎಂಬ ವರದಿ ಇಲ್ಲಿದೆ
Kisan Samman Nidhi : ವಸೂಲಾಗಲಿದೆ 33 ಲಕ್ಷ ರೈತರಿಂದ ಕೃಷಿ ಸಮ್ಮಾನ್ ಹಣ..? ಪಟ್ಟಿಯಲ್ಲಿ ನೀವಿದ್ದೀರಾ..? title=
ಸುಳ್ಳು ಮಾಹಿತಿ ನೀಡಿ ಕೃಷಿ ಸಮ್ಮಾನ್ ನಿಧಿ ಪಡೆಯುತ್ತಿದ್ದರೆ ನೊಟೀಸ್ (file photo)

ನವದಹಲಿ : ನೀವು ಒಂದು ವೇಳೆ ತಪ್ಪು ಅಥವಾ ಸುಳ್ಳು ಮಾಹಿತಿ ಕೊಟ್ಟು ಕಿಸಾನ್ ಸಮ್ಮಾನ್ ನಿಧಿ (Kisan Samman Nidhi) ಪಡೆಯುತ್ತಿದ್ದರೆ, ನಿಮಗೆ ಯಾವುದೇ ಹೊತ್ತಿನಲ್ಲಿ ಸರ್ಕಾರದ ನೊಟೀಸ್ (Govt of India) ಬರಬಹುದು. ಇಲ್ಲಿಯವರೆಗೆ ಪಡೆದ ದುಡ್ಡನ್ನು ವಾಪಾಸ್ ಮಾಡಿ ಎಂದು ಖಂಡಿತ ಕೇಳಬಹುದು. ಕಿಸಾನ್ ಸಮ್ಮಾನ್ ನಿಧಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಪ್ರತಿ ಅರ್ಹ ರೈತರಿಗೆ (Farmers) ವರ್ಷಕ್ಕೆ 6 ಸಾವಿರ ರೂಪಾಯಿ  ನೀಡುತ್ತದೆ. ಅದಕ್ಕೊಂದಷ್ಟು ಗೈಡ್ ಲೈನ್ಸ್ (Guidelines) ನೀಡಲಾಗಿದೆ. ಅದನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ಕಿಸಾನ್ ನಿಧಿ ಯಾರಿಗೆ ಸಿಗಲ್ಲ.? ಕೆಳಗಿದೆ  ಅನರ್ಹರ ಪಟ್ಟಿ
1. ಕೃಷಿ ಕೂಲಿ ಕಾರ್ಮಿಕರಿಗೆ ಈ ಹಣ ಸಿಗಲ್ಲ
2. ಸರ್ಕಾರಿ ನೌಕರರು (Government employees) ಅಥವಾ ನಿವೃತ್ತ ಸರ್ಕಾರಿ ನೌಕರರು
3. ಹಾಲಿ ಅಥವಾ ಮಾಜಿ ಸಂಸದರು, ಶಾಸಕರು, ಸಚಿವರು
4. ನೋಂದಾಯಿತ ವೈದ್ಯರು, ಇಂಜಿನೀಯರ್ಸ್, ವಕೀಲರು, ಚಾರ್ಟಡ್ ಅಕೌಂಟೆಟ್ಸ್
5. ಆದಾಯ ತೆರಿಗೆ ನೀಡುತ್ತಿರುವ ರೈತ ಪರಿವಾರ
6. ಹತ್ತು ಸಾವಿರಕ್ಕೂ ಅಧಿಕ ಪಿಂಚಣಿ ಪಡೆಯುತ್ತಿರುವ ರೈತ ಪರಿವಾರ
7. ತಮ್ಮ ಜಮೀನಿನಲ್ಲಿ ಕೃಷಿ (Agriculture) ಬಿಟ್ಟು ಬೇರೆ ಕೆಲಸ ಮಾಡುತ್ತಿರುವ ರೈತವರ್ಗ

ಈ ಏಳು ಕೆಟಗರಿಯಲ್ಲಿ ಬರುವ ರೈತರು ಕೃಷಿ ಸಮ್ಮಾನ್ ಹಣ (Kisan Samman Nidhi ) ಪಡೆಯಲು ಅರ್ಹತೆ ಇರುವುದಿಲ್ಲ

ಇದನ್ನೂ ಓದಿ : Fact Check: 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಯೋಜನೆಯಡಿ ಪ್ರತಿಯೊಬ್ಬರ ಖಾತೆಗೆ 1 ಲಕ್ಷ ರೂ.! ನಿಜಾನಾ?

ಸಂಸತ್ತಿನಲ್ಲಿ ಕೃಷಿ ಸಚಿವರು ಹೇಳಿದ್ದೇನು.?
ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar), ಕೃಷಿಕರಲ್ಲದವರೂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನ ಪಡೆಯುತ್ತಿದ್ದಾರೆ. ಆದಾಯ ತೆರಿಗೆ (Income Tax) ಪಾವತಿ ಮಾಡುವವರಿಗೂ ಕಿಸಾನ್ ಸಮ್ಮಾನ್ ನಿಧ ಸಿಗುತ್ತಿದೆ. ಇವರಿಗೆಲ್ಲಾ ರೈತರ (Farmers) ಹಣ ಪಡೆಯಲು ಅರ್ಹತೆ ಇಲ್ಲ. ಅಂಥಹ 32.91 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಇವರ ಖಾತೆಗೆ ಈಗಾಗಲೇ 2326 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ. ಅಂಥವರನ್ನು ಪತ್ತೆ ಹಚ್ಚಿ ಶಿಕ್ಷಿಸುವ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದ್ದಾರೆ. 

ನಿಮ್ಮ ಮಾಹಿತಿ ಸರಿಯಾಗಿದ್ದರೆ ಹೆದರಬೇಕಿಲ್ಲ:
ಕಿಸಾನ್ ಸಮ್ಮಾನ್ ನಿಧಿಯ ಅಕ್ರಮ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ತಮಿಳುನಾಡು (Tamil Nadu) ಸರ್ಕಾರ ಶುರುಮಾಡಿದೆ. ನಿಮ್ಮ ದಾಖಲೆಗಳೆಲ್ಲಾ ಸರಿಯಾಗಿದ್ದರೆ ಹೆದರುವ ಅಗತ್ಯವಿಲ್ಲ. ನಿಮ್ಮಿಂದ  ಹಣ ವಸೂಲಾತಿಗೆ ಸರ್ಕಾರ ಮುಂದಾಗುವುದಿಲ್ಲ.

ಇದನ್ನೂ ಓದಿ : PM Kisan Update: ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News