Corona Vaccination : ಹೃದಯಾಘಾತದಿಂದ ಇನ್ನೊಬ್ಬ ಆರೋಗ್ಯ ಕಾರ್ಯಕರ್ತ ಸಾವು

ಕರ್ನಾಟಕದಲ್ಲಿ ಕೋವಿಡ್ -19 ಲಸಿಕೆ ಹಾಕಿಸಿಕೊಂಡ ಎರಡು ದಿನಗಳ ನಂತರ ಆರೋಗ್ಯ ಕಾರ್ಯಕರ್ತರ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಆರೋಗ್ಯ ಇಲಾಖೆಯು ಆರೋಗ್ಯ ಕಾರ್ಯಕರ್ತನ ಸಾವಿಗೂ ವ್ಯಾಕ್ಸಿನೇಷನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

Written by - Yashaswini V | Last Updated : Jan 19, 2021, 09:50 AM IST
  • ಕರ್ನಾಟಕದಲ್ಲಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತನ ಸಾವು
  • ಕೋವಿಡ್ -19 ಲಸಿಕೆ ಪಡೆದ ಆರೋಗ್ಯ ಇಲಾಖೆಯ 43 ವರ್ಷದ ಉದ್ಯೋಗಿ ಎರಡು ದಿನಗಳ ಹಿಂದೆ ನಿಧನ
  • ಕಾರ್ಯಕರ್ತನ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಹೇಳಿದ್ದೇನು?
Corona Vaccination : ಹೃದಯಾಘಾತದಿಂದ ಇನ್ನೊಬ್ಬ ಆರೋಗ್ಯ ಕಾರ್ಯಕರ್ತ ಸಾವು title=
Corona vaccine

ಬೆಂಗಳೂರು : ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಒಂದು ದೊಡ್ಡ ಭರವಸೆ. ಏತನ್ಮಧ್ಯೆ ಕರ್ನಾಟಕದಲ್ಲಿ ಲಸಿಕೆ ಹಾಕಿದ ನಂತರ ಆರೋಗ್ಯ ಕಾರ್ಯಕರ್ತರ ಸಾವಿನ ಸುದ್ದಿ ಹರಡಿದ್ದು ಹಲವರಿಗೆ ಲಸಿಕೆ ಬಗ್ಗೆ ಪ್ರಶ್ನೆಗಳು ಮೂಡಿವೆ.  ಆದರೆ ತಜ್ಞರು ಭಾರತೀಯ ಕರೋನಾ ಲಸಿಕೆ  (Corona Vaccine India) ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಸಂಭವಿಸಿರುವ ಆರೋಗ್ಯ ಕಾರ್ಯಕರ್ತನ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಲಾಗಿದೆ.

'ಸಾವಿಗೆ ಕಾರಣ ಲಸಿಕೆಯ ಅಡ್ಡ ಪರಿಣಾಮವಲ್ಲ' :
ವಾಸ್ತವವಾಗಿ ಕೋವಿಡ್ -19 ಲಸಿಕೆ (Covid 19 Vaccine) ಪಡೆದ ಆರೋಗ್ಯ ಇಲಾಖೆಯ 43 ವರ್ಷದ ಉದ್ಯೋಗಿ ಎರಡು ದಿನಗಳ ಹಿಂದೆ ಕರ್ನಾಟಕದಲ್ಲಿ ನಿಧನರಾದರು. ಇದರ ನಂತರ ಲಸಿಕೆ ಬಗ್ಗೆ ಪ್ರಶ್ನೆಗಳು ಉದ್ಭವವಾದವು. ಜನವರಿ 16 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಳ್ಳಾರಿ ಜಿಲ್ಲೆಯ ಆರೋಗ್ಯ ವಿಭಾಗದ ಉದ್ಯೋಗಿ ನಾಗರಾಜು ಅವರಿಗೆ ಲಸಿಕೆ ಹಾಕಿಸಲಾಗಿದೆ ಎಂದು ಕರ್ನಾಟಕದ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಅವರು ಸಾವನ್ನಪ್ಪಿರುವುದು ಲಸಿಕೆಯ ಅಡ್ಡ ಪರಿಣಾಮದಿಂದಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ - COVID-19 Vaccine : ಪ್ರಪಂಚವು ನೈತಿಕ ವೈಫಲ್ಯದಿಂದ ದುರಂತದ ಅಂಚಿನಲ್ಲಿದೆ - WHO

ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿರುವ ಜಯದೇವ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, "ಆರೋಗ್ಯ ಕಾರ್ಯಕರ್ತರ (Health Worker) ಸಾವು ಕಾಕತಾಳೀಯ ಮತ್ತು ವ್ಯಾಕ್ಸಿನೇಷನ್‌ಗೂ ಆರೋಗ್ಯ ಕಾರ್ಯಕರ್ತನ ಸಾವಿಗೂ ಯಾವುದೇ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಗಮನಾರ್ಹವಾಗಿ ಮಂಜುನಾಥ್ ಕರ್ನಾಟಕ ಸರ್ಕಾರದ ಕೋವಿಡ್ 19 (Covid 19) ರಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಆಗಿದ್ದಾರೆ.

ಕರ್ನಾಟಕದ ಹೊರತಾಗಿ ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ನೇಮಕಗೊಂಡಿದ್ದ ವಾರ್ಡ್ ಬಾಯ್ ಮಹಿಪಾಲ್ ಸಿಂಗ್ ಕೂಡ ಹೃದಯಾಘಾತ ಮತ್ತು ಸೆಪ್ಟಿಸೆಮಿಕ್ ಆಘಾತದಿಂದ ಸಾವನ್ನಪ್ಪಿದರು. ಸೋಮವಾರ ಪಡೆದ ಮರಣೋತ್ತರ ವರದಿಯಲ್ಲಿ ಇವರ ಸಾವು ಕರೋನಾ ಲಸಿಕೆಯ (Corona Vaccine) ಅಡ್ಡಪರಿಣಾಮಗಳಿಂದ ಸಂಭವಿಸಿಲ್ಲ ಎಂಬ ವಿಷಯ ಬಹಿರಂಗವಾಗಿದೆ.

ಇದನ್ನೂ ಓದಿ - ವಿದೇಶಗಳಿಗೂ Corona Vaccine ನೀಡಲು ನಿರ್ಧಾರ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News