ನವದೆಹಲಿ : ಆರೋಗ್ಯಕರವಾಗಿರಬೇಕಾದರೆ ಚೆನ್ನಾಗಿ ನಿದ್ರಿಸುವುದು ಬಹಳ ಮುಖ್ಯ. ಆರೋಗ್ಯವಂತ ಮನ್ಯಷ್ಯನಿಗೆ ದಿನಕ್ಕೆ 8 ಗಂಟೆಗಳ ನಿದ್ದೆಯ ಅವಶ್ಯಕತೆಯಿದೆ. ಆರೋಗ್ಯವಂತರಾಗಿರಲು ನಿದ್ದೆ ಮಾಡುವುದು ಮಾತ್ರ ಮುಖ್ಯವಲ್ಲ. ಸರಿಯಾದ ಭಂಗಿಯಲ್ಲಿನಿದ್ರಿಸುವುದು (Sleeping Position)ಕೂಡಾ ಮುಖ್ಯ. ನಮ್ಮಲ್ಲಿಅನೇಕರಿಗೆ ಬೋರಲು ಮಲಗುವ ಅಭ್ಯಾಸವಿದೆ. ಅಂದರೆ ಹೊಟ್ಟೆ ಅಡಿಗೆ ಹಾಕಿಕೊಂಡುಮಲಗುವುದು. ಈ ರೀತಿ ಮಲಗಿದರೆ ಆರಾಮದಾಯವಾಗಿರುತ್ತದೆ ಎಂದು ಹೇಳಬಹುದು. ಆದರೆ ಈ ರೀತಿ ಮಲಗುವುದು ಒಳ್ಳೆಯದಲ್ಲ..
ಬೋರಲು ಮಲಗುವುದರಿಂದ ಉಂಟಾಗುವ ತೊಂದರೆಗಳು :
ಬೋರಲು ಮಲಗುವುದರಿಂದ ಆರೋಗ್ಯದ (Health) ಮೇಲೆ ತುಂಬಾ ಕೆಟ್ಟ ಪರಿಣಾಮ (Side Effects) ಬೀರುತ್ತದೆ. ನಿಮಗೂ ಹೊಟ್ಟೆ ಅಡಿಗೆ ಹಾಕಿಕೊಂಡು ಮಲಗುವ ಅಭ್ಯಾಸವಿದ್ದರೆ, ಈ ಅಭ್ಯಾಸವನ್ನು ಬಿಟ್ಟು ಬಿಡಿ. ಈ ರೀತಿ ಮಲಗುವುದರಿಂದ ಉಂಟಾಗುವ ತೊಂದರೆಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.
ಇದನ್ನೂ ಓದಿ : Fruit lables : ಹಣ್ಣಿನಲ್ಲಿ ಸ್ಟಿಕರ್ ಯಾಕೆ ಹಾಕಿರುತ್ತಾರೆ ಗೊತ್ತಾ ? ಲೇಬಲ್ ಕೋಡ್ ಏನು ಹೇಳುತ್ತೆ..?
ಕೀಲುಗಳು ಮತ್ತು ಬೆನ್ನಿನ ಮೇಲೆ ಪರಿಣಾಮ :
ಹೊಟ್ಟೆ ಅಡಿಗೆ ಹಾಕಿಕೊಂಡು ಮಲಗುವುದರಿಂದ ನಿಧಾನವಾಗಿ ಕೀಲುಗಳಲ್ಲಿ ನೋವು ಪ್ರಾರಂಭವಾಗುತ್ತದೆ, ಕುತ್ತಿಗೆ ನೋವು (Neck Pain) ಮತ್ತು ಬೆನ್ನು ನೋವು (Back Pain) ಕಾಣಿಸಿಕೊಳ್ಳಬಹುದು. ಈ ನೋವಿನಿಂದಾಗಿ, ರಾತ್ರಿಯ ನಿದ್ರೆ ಪೂರ್ಣವಾಗುವುದಿಲ್ಲ. ನಿದ್ದೆ ಪೂರ್ತಿಯಾಗದಿದ್ದರೆ, ಮರುದಿನ ದಣಿವು ಕಾಣಿಸಿಕೊಳ್ಳುತ್ತದೆ.
ಕುತ್ತಿಗೆ ನೋವು ಕಾಣಿಸಿಕೊಳ್ಳಬಹುದು :
ಬೋರಲು ಮಲಗುವುದರಿಂದ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಈ ಭಂಗಿಯಲ್ಲಿ ನಿದ್ರಿಸುವುದರಿಂದ ತಲೆ ಮತ್ತು ಬೆನ್ನುಮೂಳೆಗೆ ಆರಾಮದಾಯಕವಾಗಿರುವುದಿಲ್ಲ. ಇದರಿಂದ ಮತ್ತೆ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ : Hot Water : ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಯಾಗುತ್ತದೆ ಗೊತ್ತಾ?
ತೀವ್ರ ತಲೆ ನೋವಿಗೆ ಕಾರಣವಾಗಬಹುದು :
ಬೋರಲು ಮಲಗುವುದರಿಂದ ಕತ್ತಿನ ಭಂಗಿಯೂ ಸರಿಯಿರುವುದಿಲ್ಲ. ಹೀಗಾಗಿ ತಲೆಗೆ ರಕ್ತ ಸಂಚಲನ (Blood Circulation) ಸರಿಯಾಗಿ ಆಗುವುದಿಲ್ಲ. ಪರಿಣಾಮ ತೀವ್ರ ತಲೆ ನೋವು ಕಾಣಿಸಿಕೊಳ್ಳುತ್ತದೆ.
ಜೀರ್ಣಕ್ರಿಯೆಗೂ ತೊಂದರೆಯಾಗುತ್ತದೆ :
ಬೋರಲು ಮಲಗುವುದರಿಂದ ಜೀರ್ಣಕ್ರಿಯೆಯ (Digestion Process)ಮೇಲೂ ದುಷ್ಪರಿಣಾಮ ಬೀರುತ್ತದೆ. ಹೊಟ್ಟೆ ಅಡಿಗೆ ಹಾಕಿಕೊಂಡು ಮಲಗುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಹೊಟ್ಟೆನೋವಿಗೂ ಕಾರಣವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.