ನವದೆಹಲಿ: SBI-IOC Co-Brand RuPay Debit Card - ಇಂಡಿಯನ್ ಆಯಿಲ್ ಕಾರ್ಪೋರೇಶನ್ ಜೊತೆ ಸೇರಿ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂಪರ್ಕ ರಹಿತ co-brand RuPay debit card ಪರಿಚಯಿಸಿದೆ. ದೇಶಾದ್ಯಂತ ಇರುವ ಗ್ರಾಹಕರು ತಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ ಈ ಕಾರ್ಡ್ ಅನ್ನು ಪಡೆಯಬಹುದಾಗಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದೊಂದು ಟಚ್ ಫ್ರೀ ಕಾರ್ಡ್ ಆಗಿದ್ದು, ಕೇವಲ ಟ್ಯಾಪ್ ಮಾಡುವ ಮೂಲಕ ನೀವು ಈ ಕಾರ್ಡ್ ನಿಂದ ರೂ.5000ವರೆಗೆ ಹಣ ಪಾವತಿಸಬಹುದು.
SBI ಚೇರ್ಮನ್ ಹೇಳಿದ್ದೇನು?
ಈ ಕುರಿತು ಹೇಳಿಕೆ ನೀಡಿರುವ SBI ಚೇರ್ಮನ್ ದಿನೇಶ್ ಕುಮಾರ್ ಖಾರಾ, "ಟ್ಯಾಪ್ ಮತ್ತು ಪೇ ತಂತ್ರಜ್ಞಾನ ಹೊಂದಿರುವ ಈ ಕೋ-ಬ್ರಾಂಡ್ ಕಾರ್ಡ್ ಅನೇಕ ಆಕರ್ಷಕ ಪ್ರಯೋಜನಗಳನ್ನು ಮತ್ತು ಕೊಡುಗೆಗಳನ್ನು ನೀಡುತ್ತದೆ. ಕಾರ್ಡ್ ಧಾರಕರು ಇಂಧನ ಖರೀದಿಸುವಾಗಿ ಈ ಕಾರ್ಡ್ ಬಳಲಿ ಉತ್ತಮ ಲಾಭ ಪಡೆಯಬಹುದು. ಸುರಕ್ಷಿತ ಮತ್ತು ಅನುಕೂಲಕರ ಸಂಪರ್ಕವಿಲ್ಲದ ಪಾವತಿಗಳ ಮೂಲಕ, ಈ ಕಾರ್ಡ್ ಗ್ರಾಹಕರ ದೈನಂದಿನ ಖರೀದಿಗೆ ಸಹಕಾರಿಯಾಗಲಿದೆ" ಎಂದು ಹೇಳಿದ್ದಾರೆ. ಈ ಕಾರ್ಡ್ ಬಳಸಿ ಒಂದು ವೇಳೆ ಕಾರ್ಡ ಧಾರಕರು ಇಂಡಿಯನ್ ಆಯಿಲ್ನ ಪೆಟ್ರೋಲ್ ಪಂಪ್ಗಳಿಂದ ಇಂಧನವನ್ನು ಖರೀದಿಸಿದರೆ ಅವರಿಗೆ ಶೇಕಡಾ 0.75 ರಷ್ಟು ಲಾಯಲ್ಟಿ ಪಾಯಿಂಟ್ಗಳು ಸಿಗುತ್ತವೆ. ಕಾರ್ಡ್ ಮೂಲಕ ಮಾಸಿಕ ಇಂಧನವನ್ನು ಖರೀದಿಸಲು ಯಾವುದೇ ಮಿತಿಯಿಲ್ಲ.
ಇದನ್ನು ಓದಿ- ಎಸ್ಬಿಐ ಸೇರಿದಂತೆ ಈ 4 ದೊಡ್ಡ ಬ್ಯಾಂಕ್ಗಳ ಗ್ರಾಹಕರಿಗೆ Whatsapp ನೀಡುತ್ತಿದೆ ಈ ಸೌಲಭ್ಯ
ಸಿಗಲಿದೆ ಕ್ಯಾಶ್ಲೆಸ್ ಪೇಮೆಂಟ್ ಲಾಭ
SBI ಜೋತೆಗಿನ ಒಡಂಬಡಿಕೆ ಕುರಿತು ಮಾತನಾಡಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ, " ನಮ್ಮ ದೇಶದ ಸಹ ನಾಗರಿಕರಿಗೆ ವಿಶಿಷ್ಟ ಸೌಲಭ್ಯಗಳನ್ನು ನೀಡಲು ಎಸ್ಬಿಐ ಜೊತೆಗಿಂದ ನಮ್ಮ ಪಾಲುದಾರಿಕೆ ಹೆಮ್ಮೆ ತಂದಿದೆ. ಈ ಪವರ್-ಪ್ಯಾಕ್ಡ್ ಕಾರ್ಡ್ ದೇಶಾದ್ಯಂತ ಇರುವ ಇಂಡಿಯನ್ ಆಯಿಲ್ ಹಾಗೂ ಎಸ್ಬಿಐನ ವಿಶಿಷ್ಟ ವ್ಯಾಪ್ತಿಯನ್ನು ಬೆಂಬಲಿಸುತ್ತದೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ, ಗ್ರಾಹಕರು ಹಣವಿಲ್ಲದ ಮತ್ತು ತೊಂದರೆಯಿಲ್ಲದ ಹಣ ಪಾವತಿ ಮಾಡಲು ಈ ಪೇಮೆಂಟ್ ವ್ಯವಸ್ಥೆ ಒಂದು ಸೂಕ್ತ ವಿಧಾನವಾಗಿದೆ" ಎಂದು ಹೇಳಿದ್ದಾರೆ.
ಇದನ್ನು ಓದಿ- SBI ಗ್ರಾಹಕರಿಗೆ ಒಳ್ಳೆಯ ಸುದ್ದಿ, Bank ಸೌಲಭ್ಯಗಳನ್ನು ಈಗ ಮನೆಯಿಂದಲೇ ಪಡೆಯಿರಿ
30,000 ಪೆಟ್ರೋಲ್ ಪಂಪ್ ಗಳ ಮೇಲೆ ಈ ಸೌಲಭ್ಯ
ದೇಶಾದ್ಯಂತ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸುಮಾರು 30,000 ಪೆಟ್ರೋಲ್ ಪಂಪ್ಗಳ ದೊಡ್ಡ ಜಾಲವನ್ನು ಹೊಂದಿದ್ದು, ಕ್ರೆಡಿಟ್ / ಡೆಬಿಟ್ ಕಾರ್ಡ್ / ವ್ಯಾಲೆಟ್ ಪಾವತಿ ಪಾವತಿಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ. ಈ ಉಪಕ್ರಮವು ಡಿಜಿಟಲ್ ಪಾವತಿಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಮತ್ತು ಸರ್ಕಾರದ ಡಿಜಿಟಲ್ ಇಂಡಿಯಾ ವಿಶನ್ ಗೆ ಮತ್ತಷ್ಟು ಬಲ ನೀಡಲಿದೆ ಎಂದು ವೈದ್ಯ ಹೇಳಿದ್ದಾರೆ.
ಇದನ್ನು ಓದಿ- SBI SO Recruitment 2021: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಲು ಸುವರ್ಣಾವಕಾಶ
ಇನ್ನೊಂದೆಡೆ "ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಕಾಂಟ್ಯಾಕ್ಟ್ ಲೆಸ್ ರೂಪೇ ಡೆಬಿಟ್ ಕಾರ್ಡ್ ಪರಿಚಯಿಸಲು ನಮಗೆ ಅತೀವ ಸಂತಸವಾಗಿದೆ. 'ಟ್ಯಾಪ್ ಅಂಡ್ ಪೆ' ತಂತ್ರಜ್ಞಾನ ಹೊಂದಿರುವ ಈ ಕೋ-ಬ್ರಾಂಡ್ ಕಾರ್ಡ್ ಇಂಧನ ಖರೀದಿಸುವ ಸಂದರ್ಭಗಳಲ್ಲಿ ಗ್ರಾಹಕರಿಗೆ ವಿಶಿಷ್ಠ ಅನುಭವ ನೀಡಲಿದೆ." ಎಂದು ಖಾರಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.