ನವದೆಹಲಿ: ಹೊಸವರ್ಷದ ವೇಳೆಯಲ್ಲೇ ಇಪಿಎಫ್ಒ ಚಂದಾದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. 6 ಕೋಟಿ ಸದಸ್ಯರಿಗೆ ನೌಕರರ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ 2019 -20 ನೇ ಸಾಲಿನ ನೌಕರರ ಭವಿಷ್ಯ ನಿಧಿ ಶೇಕಡ 8.5 ರಷ್ಟು ಬಡ್ಡಿದರವನ್ನು ಜಮಾ ಮಾಡಲು ಆರಂಭಿಸಿದೆ.
ಹೊಸವರ್ಷದ ವೇಳೆಯಲ್ಲಿಯೇ ಇಪಿಎಫ್ಒ ತನ್ನ ಆರು ಕೋಟಿ ಸದಸ್ಯರಿಗೆ ಬಡ್ಡಿ ದರ ನೀಡುತ್ತಿದೆ. ಕಾರ್ಮಿಕ ಸಚಿವಾಲಯ ಈಗಾಗಲೇ 2019 - 20 ನೇ ಸಾಲಿನ ಇಪಿಎಫ್(EPFO) ಮೇಲಿನ ಶೇಕಡ 8.5 ರಷ್ಟು ಬಡ್ಡಿಯನ್ನು ಜಮಾ ಮಾಡಲು ನಿರ್ದೇಶನ ನೀಡಿದೆ.
ವಿದ್ಯಾರ್ಥಿಗಳಿಗೊಂದು ‘ಸಿಹಿ ಸುದ್ದಿ’ : CBSC ಪರೀಕ್ಷಾ ವೇಳಾಪಟ್ಟಿ ಪ್ರಕಟ!
ಗುರುವಾರದಿಂದ ಚಂದಾದಾರರ ಖಾತೆಗೆ ಬಡ್ಡಿದರ ಪಾವತಿಗೆ ಚಾಲನೆ ನೀಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಮಾಹಿತಿ ನೀಡಿದ್ದು, ಡಿಸೆಂಬರ್ 31 ರಂದು ನಿವೃತ್ತಿ ಹೊಂದುತ್ತಿರುವ ಎಲ್ಲಾ ಸದಸ್ಯರು ಶೇಕಡ 8.5 ರಷ್ಟು ಬಡ್ಡಿದರವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಹೇಳಿದ್ದಾರೆ.
FASTag ಇನ್ನೂ ಅಳವಡಿಸಿಕೊಂಡಿಲ್ಲವೇ.. ಟೆನ್ಶನ್ ಬೇಡ.. ಇನ್ನೂ ಟೈಂ ಇದೆ
ಮಾರ್ಚ್ನಲ್ಲಿ, ಗಂಗ್ವಾರ್ ನೇತೃತ್ವದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2019-20ನೇ ಸಾಲಿನ ಇಪಿಎಫ್ಗೆ ಶೇ .8.5 ರಷ್ಟು ಬಡ್ಡಿದರವನ್ನು ಅನುಮೋದಿಸಿತ್ತು. ಸೆಪ್ಟೆಂಬರ್ನಲ್ಲಿ, ಇಪಿಎಫ್ಒ ಟ್ರಸ್ಟಿಗಳ ಸಭೆಯಲ್ಲಿ ಶೇ .8.5 ರಷ್ಟು ಬಡ್ಡಿಯನ್ನು ಎರಡು ಕಂತುಗಳಾಗಿ ಶೇ 8.15 ಮತ್ತು ಶೇ 0.35 ರಂತೆ ವಿಂಗಡಿಸಲು ನಿರ್ಧರಿಸಿತ್ತು. ಆದರೆ, ನಂತರ ಸಚಿವಾಲಯವು ಒಂದೇ ಕಂತಿನಲ್ಲಿ ಚಂದಾದಾರರ ಖಾತೆಗಳಿಗೆ ಜಮಾ ಮಾಡಲು ನಿರ್ಧರಿಸಿದ್ದು, ಇಂದಿನಿಂದಲೇ ಜಮಾ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
PM Modi: ಹೊಸ ವರ್ಷದ ಹೊಸ್ತಿಲಲ್ಲಿರುವ ಜನರಿಗೆ 'ಗುಡ್ ನ್ಯೂಸ್' ನೀಡಿದ ಪ್ರಧಾನಿ ಮೋದಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.