Sovereign Gold Bond:ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಮತ್ತೆ ಸಿಗಲಿದೆ ಅವಕಾಶ

ವರ್ಷಾಂತ್ಯದಲ್ಲಿ ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ರಿಸರ್ವ್ ಬ್ಯಾಂಕ್ 9 ನೇ ಸರಣಿಯ Sovereign Gold Bond ಯೋಜನೆಯನ್ನು ಬಿಡುಗಡೆ ಮಾಡಲಿದೆ. ಡಿಸೆಂಬರ್ 28 ರಂದು ನೀವೂ ಕೂಡ ಈ ಯೋಜನೆಯನ್ನು ಹಣ ಹೂಡಿಕೆ ಮಾಡಬಹುದು.

ನವದೆಹಲಿ: Sovereign Gold Bond - ಒಂದು ವೇಳೆ ನೀವೂ ಕೂಡ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಚಿನ್ನವನ್ನು ಖರೀದಿಸಲು ಬಯಸುತ್ತಿದ್ದರೆ, ರಿಸರ್ವ್ ಬ್ಯಾಂಕ್ (RBI) ನಿಮಗೆ ಅವಕಾಶ ನೀಡಲಿದೆ. Sovereign Gold Bondನ 9 ನೇ ಸರಣಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ.

 

ಇದನ್ನು ಓದಿ- Gold Reserve Detected: ತುರ್ಕಿಯಲ್ಲಿ ಪತ್ತೆಯಾದ ಚಿನ್ನದ ಬೆಟ್ಟ, ಬೆಲೆ ಹಲವು ದೇಶಗಳ GDPಗಿಂತಲೂ ಹೆಚ್ಚು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /8

Sovereign Gold Bond ಯೋಜನೆ 2020-21ರ ಒಂಬತ್ತನೇ ಸರಣಿಯು 2020 ರ ಡಿಸೆಂಬರ್ 28 ರಿಂದ ಚಂದಾದಾರಿಕೆಗಾಗಿ ತೆರೆದುಕೊಳ್ಳಲಿದೆ. 1 ಜನವರಿ 2021 ರೊಳಗೆ ನೀವೂ ಕೂಡ ಇದರಲ್ಲಿ ಹೂಡಿಕೆ ಮಾಡಬಹುದು. ಈ ಬಾರಿ ಆರ್‌ಬಿಐ ಇಶ್ಯೂ ಪ್ರೈಸ್ ಅನ್ನು ಪ್ರತಿ ಗ್ರಾಂಗೆ 5,000 ರೂ. ಅಂದರೆ, 10 ಗ್ರಾಂ ಬೆಲೆ 50,000 ರೂ. ನಿಗದಿಪಡಿಸಿದೆ. ಇದು ಮಾರುಕಟ್ಟೆಯ ದರಕ್ಕಿಂತ ಕಮ್ಮಿಯಾಗಿದೆ.

2 /8

ಡಿಜಿಟಲ್ಮಾಧ್ಯಮದ ಮೂಲಕ ನೀವು ಅದರಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಪ್ರತಿ ಗ್ರಾಂಗೆ 50 ರೂ. ಅಂದರೆ, 10 ಗ್ರಾಂ ಖರೀದಿಸಿದಾಗ 500 ರೂ. ರಿಯಾಯಿತಿ ಸಿಗಲಿದೆ. ಕಳೆದ ಬಾರಿ ಅಂದರೆ ನವೆಂಬರ್ 8 ರಂದು ಆರಂಭಗೊಂಡಿದ್ದ ಗೋಲ್ಡ್ ಬಾಂಡ್ ಯೋಜನೆಯ 8 ನೇ ಆವೃತ್ತಿಯಲ್ಲಿ ಇಶ್ಯೂ ಪ್ರೈಸ್ ಅನ್ನು 5177 ಪ್ರತಿ ಗ್ರಾಂ ನಿಗದಿಪದಿಸಲಾಗಿತ್ತು.

3 /8

ನವೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದ ಸಾವೆರಿನ್ ಗೋಲ್ಡ್ ಬಾಂಡ್ ಯೋಜನೆಯ ಮೊದಲ ಸಂಚಿಕೆಯಲ್ಲಿ ಹೂಡಿಕೆ ಮಾಡಿದ್ದ ಚಂದಾದಾರರು ಕಳೆದ ಐದು ವರ್ಷಗಳಲ್ಲಿ ಶೇ.93ರಷ್ಟು ಹೆಚ್ಚುವರಿ ಆದಾಯ ಪಡೆದಿದ್ದಾರೆ.  ಈ ಬಾಂಡ್ ಗಳು 8 ವರ್ಷಗಳ ಮ್ಯಾಚ್ಯುರಿಟಿ ಅವಧಿಯನ್ನು ಹೊಂದಿರುತ್ತವೆ. ಆದರೆ, ಹೂಡಿಕೆದಾರರು ಐದುವರ್ಷಗಳ ಬಳಿಕ ಈ ಯೋಜನೆಯಿಂದ ನಿರ್ಗಮಿಸಬಹುದು.

4 /8

ಗೋಲ್ಡ್ ಬಾಂಡ್ ನ ಮಾರಾಟ ಬ್ಯಾಂಕ್, ಭಾರತೀಯ ಸ್ಟಾಕ್ ಹೋಲ್ಡಿಂಗ್ ನಿಗಮ ಲಿಮಿಟೆಡ್ (SHCIL) ಹಾಗೂ ಕೆಲ ಆಯ್ದ ಅಂಚೆ ಕಚೇರಿ ಮತ್ತು ಮಾನ್ಯತೆ ಪಡೆದ ಷೇರು ಮಾರುಕಟ್ಟೆಗಳಾಗಿರುವ ರಾಷ್ಟ್ರೀಯ ಷೇರು ಮಾರುಕಟ್ಟೆ ಹಾಗೂ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ಗಳ ಮೂಲಕ ನಡೆಸಲಾಗುತ್ತಿದೆ.

5 /8

ಸಾರ್ವಭೌಮ ಗೋಲ್ಡ್ ಬಾಂಡ್ ಯೋಜನೆಯಡಿ ಹೂಡಿಕೆದಾರರು ಒಂದು ವರ್ಷದಲ್ಲಿ ಗರಿಷ್ಠ 400 ಗ್ರಾಂ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು.  ನೀವು ಸಾರ್ವಭೌಮ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ ನೀವು ಪ್ಯಾನ್ ಹೊಂದಿರಬೇಕು. ನೀವು ಇದನ್ನು ಎಲ್ಲಾ ವಾಣಿಜ್ಯ ಬ್ಯಾಂಕುಗಳಲ್ಲಿ (ಆರ್‌ಆರ್‌ಬಿ, ಸ್ಮಾಲ್ ಫೈನಾನ್ಸ್ ಬ್ಯಾಂಕ್, ಪಾವತಿ ಬ್ಯಾಂಕ್ ಹೊರತುಪಡಿಸಿ), ಪೋಸ್ಟ್ ಆಫೀಸ್, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್‌ಎಸ್‌ಇ), ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಅಥವಾ ನೇರವಾಗಿ ಏಜೆಂಟರ ಮೂಲಕ ಖರೀದಿಸಬಹುದು. ನೀವು ಎಸ್‌ಬಿಐನಿಂದ ಚಿನ್ನದ ಬಾಂಡ್‌ಗಳನ್ನು ಖರೀದಿಸಲು ಬಯಸಿದರೆ, ಬ್ಯಾಂಕ್ ವೆಬ್‌ಸೈಟ್ https://sbi.co.in/web/personal-banking/investments-deposits/govt-schemes/gold-banking/sovereign-gold-bond-scheme-sgb ಗೆ ಭೇಟಿ ನೀಡಿ ಪರಿಶೀಲಿಸಬಹುದು.

6 /8

ಸಾವೆರಿನ್ ಗೋಲ್ಡ್ ಬೋನ್ಬ್ದ್  ಸ್ಕೀಮ್ ಅಡಿಯಲ್ಲಿ ಚಿನ್ನ ಖರೀದಿಸಲು ಕೆಲ ನಿಯಮಗಳನ್ನು ವಿಧಿಸಲಾಗಿದೆ. ಈ ಸ್ಕೀಮ್ ಅಡಿಯಲ್ಲಿ ಯಾವುದೇ ವ್ಯಕ್ತಿ ಅಥವಾ ವ್ಯಾಪಾರಿ ವರ್ಷದಲ್ಲಿ ಅತ್ಯಧಿಕ ಅಂದರೆ 500 ಗ್ರಾಂ ಮೌಲ್ಯದ ಚಿನ್ನದ ಬಾಂಡ್ ಖರೀದಿಸಬಹುದಾಗಿದೆ. ಇನ್ನೊಂದೆಡೆ ಕನಿಷ್ಠ ಚಿನ್ನ ಖರೀದಿಯ ಲಿಮಿಟ್ 1 ಗ್ರಾಂ ಇದೆ. ಈ ಯೋಜನೆಯ ಇನ್ನೊಂದು ವಿಶೇಷತೆ ಎಂದರೆ, ಈ ಯೋಜನೆಯಡಿ ನೀವು ಚಿನ್ನ ಖರೀದಿಸಿದರೆ ನಿಮಗೆ ವಾರ್ಷಿಕವಾಗಿ ಶೇ.2.5ರಷ್ಟು ಬಡ್ಡಿ ಕೂಡ ಸಿಗುತ್ತದೆ. ಲೋಹ ರೂಪದ ಚಿನ್ನದ ಬೇಡಿಕೆಯನ್ನು ಇಳಿಕೆ ಮಾಡಲು ಭಾರತ ಸರ್ಕಾರ 2015ರಲ್ಲಿ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ ಬಿಡುಗಡೆ ಮಾಡಿದೆ.

7 /8

ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆದಾರರು ಭೌತಿಕ ರೂಪದಲ್ಲಿ ಚಿನ್ನವನ್ನು ಪಡೆಯುವುದಿಲ್ಲ. ಇದು ಭೌತಿಕ ಚಿನ್ನಕ್ಕಿಂತ ಸುರಕ್ಷಿತವಾಗಿದೆ. ಅದರಲ್ಲಿ ಹೂಡಿಕೆ ಮಾಡುವವರಿಗೆ ಗೋಲ್ಡ್ ಬಾಂಡ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಬಾಂಡ್ ಮೆಚೂರಿಟಿ ಆದ ಬಳಿಕ ಹೂಡಿಕೆದಾರರು ಅದನ್ನು ಪುನಃ ಪಡೆದುಕೊಳ್ಳಲು ಹೋದಾಗ, ಆ ಸಮಯದ ಚಿನ್ನದ ಮೌಲ್ಯಕ್ಕೆ ಸಮನಾದ ಹಣವನ್ನು ಪಡೆಯುತ್ತಾರೆ. ಇದರ ದರವನ್ನು ಕಳೆದ ಮೂರು ದಿನಗಳ ಸರಾಸರಿ ಮುಕ್ತಾಯದ ಬೆಲೆಯಲ್ಲಿ ನಿಗದಿಪಡಿಸಲಾಗಿದೆ. ಹೂಡಿಕೆದಾರರಿಗೆ ಬಾಂಡ್ ಅವಧಿಯಲ್ಲಿ ಮೊದಲೇ ನಿರ್ಧರಿಸಿದ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ.  

8 /8

ಚಿನ್ನದ ಪರಿಶುದ್ಧತೆ ಕುರಿತು ಹೇಳುವುದಾದರೆ, ಎಲೆಕ್ಟ್ರಾನಿಕ್ ರೂಪದಲ್ಲಿ ಇಲ್ಲಿ ಚಿನ್ನ ಸಿಗುವ ಕಾರಣ ಚಿನ್ನದ ನಿಖರತೆ ಮೇಲೆ ಯಾವುದೇ ರೀತಿಯ ಅನುಮಾನ ಇದರಲ್ಲಿಲ್ಲ. ಮೂರು ವರ್ಷಗಳ ನಂತರ ಈ ಯೋಜನೆ ದೀರ್ಘ ಕಾಲದ ಬಂಡವಾಳ ಲಾಭ ತೆರಿಗೆ ಆಕರ್ಷಿಸುತ್ತದೆ. ಮ್ಯಾಚುರಿಟಿವರೆಗೆ ಒಂದು ವೇಳೆ ನೀವು ಹಣ ಹೂಡಿಕೆ ಮಾಡಿದರೆ ನಿಮಗೆ ಕ್ಯಾಪಿಟಲ್ ಗೆನ್ ಟ್ಯಾಕ್ಸ್ ವಿಧಿಸಲಾಗುವುದಿಲ್ಲ. ಈ ಬಾಂಡ್ ಗಳನ್ನು ನೀವು ಸಾಲ ಪಡೆಯಲು ಕೂಡ ಉಪಯೋಗಿಸಬಹುದು. ರಿಡಂಪ್ಶನ್ ಕುರಿತು ಹೇಳುವುದಾದರೆ, ಐದು ವರ್ಷಗಳ ಬಳಿಕ ನೀವು ಯಾವಾಗ ಬೇಕಾದರೂ ಕೂಡ ನಿಮ್ಮ ಹಣ ಮರುಪಡೆಯಬಹುದು.