ದೆಹಲಿ: ಬಾಬಾ ಕಾ ಡಾಬಾ ಖ್ಯಾತಿಯ ತಾತ ಕಾಂತ ಪ್ರಸಾದ್ ಇದೀಗ ಸ್ವಂತ ರೆಸ್ಟೋರೆಂಟ್ ಮಾಲಿಕ. ಹೊಸ ಸೋಷಿಯಲ್ ಮೀಡಿಯಾದಇತ್ತೀಚಿನ ಸೆನ್ಸೇಶನ್ ಕಾಂತಾ ಪ್ರಸಾದ್ ತನ್ನ ಹಳೇ ಡಾಬಾದ ಪಕ್ಕದಲ್ಲಿ ನೂತನ ರೆಸ್ಟೊರೆಂಟನ್ನು ತೆರೆದಿದ್ದಾರೆ.
ತನ್ನಹೊಸ ರೆಸ್ಟೊರೆಂಟ್ ನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಇತ್ತೀಚೆಗೆ ತಮಗೆ ಪ್ರಾಣಭಯ ಇದೆ ಎಂದು ಹೇಳಿಕೊಳ್ಳುತ್ತಿರುವ ಕಾಂತಾಪ್ರಸಾದ್ ತನ್ನ ರೆಸ್ಟೊರೆಂಟ್(Restaurants) ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.
ಹೊಸ ರೆಸ್ಟೊರೆಂಟಲ್ಲಿ ತನಗಾಗಿ ಪ್ರತ್ಯೇಕ ಕ್ಯಾಬಿನ್ ಹೊಂದಿರುವ ಕಾಂತಪ್ರಸಾದ್ ರೆಸ್ಟೊರೆಂಟ್ ವ್ಯವಹಾರವನ್ನು ತಾನೇ ನೋಡಿಕೊಳ್ಳುತ್ತಿದ್ದಾರೆ.
'#BabaKaDhaba' owner Kanta Prasad opens new restaurant | #InPicshttps://t.co/8jYcFIg3Ih
— Zee News English (@ZeeNewsEnglish) December 21, 2020
ಅನ್ನದಾತರಿಗೊಂದು ‘ಸಿಹಿ ಸುದ್ದಿ’: ರೈತರಿಗೆ ₹ 2 ಲಕ್ಷ ಕೋಟಿ ಸಾಲ..!
ಸುಸಜ್ಜಿತ ಅಡುಗೆ ಕೋಣೆಯನ್ನು ಹೊಂದಿರುವ ರೆಸ್ಟೊರೆಂಟಲ್ಲಿ ಬಾಬಾ ಅಡುಗೆ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದಾರೆ.ಆದರೆ ತನಗೆ ಸಹಾಯಕರಗಿ ಕೆಲವರನ್ನು ಇರಿಸಿಕೊಂಡಿದ್ದಾರೆ.
ಡಾಬಾಕ್ಕೆ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದಾರೆ. ಕಾಂತಪ್ರಸಾದ್ ಹೊಸ ರೆಸ್ಟೊರೆಂಟ್ ತೆರೆದಿದ್ದರೂ ಊಟತಿಮಡಿಯ ಹಣ ಮಾತ್ರ ರಿಕೆ ಮಾಡಿಲ್ಲ. ಈಗಲೂ ಹಳೆ ದರದಲ್ಲೇ ಊಟ ತಿಂಡಿ ಸಿಗುತ್ತಿದೆ.