ಬಿಜೆಪಿ ಹೊಡೆತಕ್ಕೆ ತಪ್ಪಿದ ಹೈದರಾಬಾದ್ ಮಹಾನಗರ ಪಾಲಿಕೆ ಲೆಕ್ಕಾಚಾರ, ಮುಂದೇನು ಎನ್ನುವುದೇ ಕುತೂಹಲ

ತೆಲಂಗಾಣ ರಾಷ್ಟ್ರೀಯ ಸಮಿತಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮೇಯರ್ ಹುದ್ದೆಗೇರಲು ಅಸದುದ್ದೀನ್ ಒವೈಸಿ ಅವರ ಎಐಎಂಐಎಂ (AIMIM) ಪಕ್ಷದ ಬೆಂಬಲ ಪಡೆಯಲೇಬೇಕಾಗಿದೆ. ತೆಲಂಗಾಣ ರಾಷ್ಟ್ರೀಯ ಸಮಿತಿಗೆ ಎಐಎಂಐಎಂ ಬೆಂಬಲ ನೀಡದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ‌.

Last Updated : Dec 5, 2020, 12:52 PM IST
  • TRS ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮೇಯರ್ ಹುದ್ದೆಗೇರಲು AIMIM ಪಕ್ಷದ ಬೆಂಬಲ ಪಡೆಯಲೇಬೇಕಾಗಿದೆ.
  • ತೆಲಂಗಾಣ ರಾಷ್ಟ್ರೀಯ ಸಮಿತಿ ಈ ಭಾರೀ ಗೆದ್ದಿರುವುದು 56 ಸ್ಥಾನಗಳನ್ನು ಮಾತ್ರ.
  • 2016ರ ಚುನಾವಣೆಯಲ್ಲಿ ಅದು 99 ಸ್ಥಾನ ಗೆದ್ದಿತ್ತು.
ಬಿಜೆಪಿ ಹೊಡೆತಕ್ಕೆ ತಪ್ಪಿದ ಹೈದರಾಬಾದ್ ಮಹಾನಗರ ಪಾಲಿಕೆ ಲೆಕ್ಕಾಚಾರ, ಮುಂದೇನು ಎನ್ನುವುದೇ ಕುತೂಹಲ title=
Image courtesy: PTI

ಹೈದರಾಬಾದ್: ಬಿಜೆಪಿ ನೀಡಿದ ಭಾರೀ ಪೆಟ್ಟಿನ ನಡುವೆಯೂ ತೆಲಂಗಾಣ ರಾಷ್ಟ್ರೀಯ ಸಮಿತಿ (TRS) ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMP) ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮೇಯರ್ ಹುದ್ದೆಗೇರಲು ಅಸದುದ್ದೀನ್ ಒವೈಸಿ ಅವರ ಎಐಎಂಐಎಂ (AIMIM) ಪಕ್ಷದ ಬೆಂಬಲ ಪಡೆಯಲೇಬೇಕಾಗಿದೆ. ತೆಲಂಗಾಣ ರಾಷ್ಟ್ರೀಯ ಸಮಿತಿಗೆ ಎಐಎಂಐಎಂ ಬೆಂಬಲ ನೀಡದೆ ಇದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ‌.

ಗ್ರೇಟರ್ ಹೈದರಾಬಾದ್ (Hyderabad) ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಏಕೆಂದರೆ 2016ರ ಚುನಾವಣೆಯಲ್ಲಿ ಅದು ಕೇವಲ 4 ಸ್ಥಾನಗಳನ್ನು ಗೆದ್ದಿತ್ತು. ಒವೈಸಿ ಅವರ ಪಕ್ಷದ ಎಐಐಎಂಐಎಂ 44 ಸ್ಥಾನಗಳನ್ನು ಗೆದ್ದಿದೆ. 2016ರ ಚುನಾವಣೆಯಲ್ಲೂ ಅದು 44 ಸ್ಥಾನವನ್ನೇ ಗೆದ್ದಿತ್ತು. ಆದರೆ ಭಾರೀ ನಷ್ಟ ಆಗಿರುವುದು ತೆಲಂಗಾಣ ರಾಷ್ಟ್ರ ಸಮಿತಿಗೆ. ಏಕೆಂದರೆ ತೆಲಂಗಾಣ ರಾಷ್ಟ್ರೀಯ ಸಮಿತಿ (TRS) ಈ ಭಾರೀ ಗೆದ್ದಿರುವುದು 56 ಸ್ಥಾನಗಳನ್ನು ಮಾತ್ರ. 2016ರ ಚುನಾವಣೆಯಲ್ಲಿ ಅದು 99 ಸ್ಥಾನ ಗೆದ್ದಿತ್ತು. ಉಳಿದಂತೆ ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆದ್ದಿದೆ. 2016ರ ಚುನಾವಣೆಯಲ್ಲಿ ಅದು 2 ಸ್ಥಾನಗಳಲ್ಲಿ ಗೆದ್ದಿತ್ತು.

ತನ್ನ 14ನೆ ವಯಸ್ಸಿನಲ್ಲಿ Degree ಪೂರ್ಣಗೊಳಿಸಿ ಇತಿಹಾಸ ಬರೆದ Hyderabad ಪೋರ

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತಕ್ಕೆ 75 ಸ್ಥಾನಗಳು ಬೇಕಾಗಿದ್ದವು. ಆದರೆ ಯಾವುದೇ ಪಕ್ಷವು ಈ ಅಂಕಿ ಅಂಶವನ್ನು ಮುಟ್ಟಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು‌ ಎಐಐಎಂಐಎಂ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಬಹುದು ಎಂದು ಹೇಳಲಾಗುತ್ತಿದೆ.  ತೆಲಂಗಾಣ ರಾಷ್ಟ್ರ ಸಮಿತಿ ಮತ್ತು‌ ಎಐಐಎಂಐಎಂ ಪಕ್ಷಗಳೆರಡು ಸೇರಿದರೆ 100 ಸದಸ್ಯ ಬಲವಾಗಲಿದ್ದು ಸುಲಭವಾಗಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMP) ಗದ್ದುಗೆ ಹಿಡಿಯಬಹುದಾಗಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಶುಕ್ರವಾರ ಮಾತನಾಡಿರುವ ಅಸದುದ್ದೀನ್ ಒವೈಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) ಹಾಗೂ ಇನ್ನಿತರ ಬಿಜೆಪಿ ನಾಯಕರ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ. ಈಗ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMP) ಚುನಾವಣೆಯಲ್ಲಿ ಬಿಜೆಪಿ ಗೆದ್ದಿರಬಹುದು.‌ ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಂತಹ ಯಶಸ್ಸು ಸಿಗುವುದಿಲ್ಲ. ಸರ್ಜಿಕಲ್ ಸ್ಟ್ರೈಕ್ ಏನಾಯಿತು? ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಯೋಗಿ ಎಲ್ಲಿಗೆ ಹೋಗಿ ಪ್ರಚಾರ ಮಾಡಿದ್ದರೋ ಅಲ್ಲಿ ನಾವೇ ಗೆದ್ದಿದ್ದೇವೆ ಎಂದಿದ್ದಾರೆ.

Video: ಆಂಬ್ಯುಲೆನ್ಸ್ ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ಪೊಲೀಸ್ ಪೇದೆ..!

ಎಐಐಎಂಐಎಂನ ವಿಜಯದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಅಸದುದ್ದೀನ್ ಒವೈಸಿ, 'ಕೋವಿಡ್ -19 ಇದ್ದರೂ ಮನೆಯಿಂದ ಹೊರಬಂದು ಮತ ಚಲಾಯಿಸಿದವರನ್ನು ನಾನು ಅಭಿನಂದಿಸುತ್ತೇನೆ. ಜನರ ನಡುವೆ ಬದುಕುವುದು ನಮ್ಮ ಯಶಸ್ಸಿಗೆ ಒಂದು ದೊಡ್ಡ ಕಾರಣವಾಗಿದೆ. ನಮ್ಮ ಹೊಸ ಕಾರ್ಪೊರೇಟರ್‌ಗಳು ನಾಳೆಯಿಂದಲೇ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಕಾರ್ಪೊರೇಟರ್‌ಗಳೊಂದಿಗೆ ಮಾತನಾಡುವ ಮೂಲಕ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ವಿಷಯವನ್ನು ನಿರ್ಧರಿಸಲಾಗುವುದು ಎಂದಿದ್ದಾರೆ.

ತಮ್ಮ ಪಕ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಅಸದುದ್ದೀನ್ ಒವೈಸಿ, ಇದಲ್ಲದೆ ತಮಿಳುನಾಡಿನಲ್ಲೂ ನಮ್ಮ ಪಕ್ಷ ಸ್ಪರ್ಧಿಸಲಿದೆ. ಆದರೆ ಕೇರಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದಿದ್ದಾರೆ.

Trending News