ನವದೆಹಲಿ: ನವೆಂಬರ್ 26 ರಂದು ಕೇಂದ್ರ ಕಾರ್ಮಿಕ ಸಂಘಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು ದೇಶಾದ್ಯಂತ ಲಕ್ಷಾಂತರ ಬ್ಯಾಂಕ್ ಉದ್ಯೋಗಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ಕಾರ್ಯಾಚರಣೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಎಲ್ಲಾ ಪ್ರಮುಖ ಬ್ಯಾಂಕಿಂಗ್ ಕಾರ್ಯಗಳನ್ನು ಇಂದೇ ಪೂರ್ಣಗೊಳಿಸಿಕೊಳ್ಳುವುದರಿಂದ ನಿಮ್ಮ ಯಾವುದೇ ಕೆಲಸ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬಹುದು.
ಕೇಂದ್ರ ಸರ್ಕಾರದ (Central Government) ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಗಳು ಮುಷ್ಕರಕ್ಕೆ ಕರೆ ನೀಡಿವೆ. ಸರ್ಕಾರ ಇತ್ತೀಚೆಗೆ 27 ಹಳೆಯ ಕಾನೂನುಗಳನ್ನು ರದ್ದುಗೊಳಿಸಿ, ಮೂರು ಹೊಸ ಕಾರ್ಮಿಕ ಕಾನೂನುಗಳನ್ನು ಅಂಗೀಕರಿಸಿದೆ. ಇದರ ವಿರುದ್ಧ ಈ ಮುಷ್ಕರ ನಡೆಯುತ್ತಿದೆ. ಭಾರತೀಯ ಮಜ್ದೂರ್ ಸಂಘವನ್ನು ಹೊರತುಪಡಿಸಿ 10 ಕೇಂದ್ರ ಕಾರ್ಮಿಕ ಸಂಘಗಳು ನವೆಂಬರ್ 26 ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಘೋಷಿಸಿವೆ.
ವಾಟ್ಸಾಪ್ನಲ್ಲಿಯೇ ತೆರೆಯಿರಿ Fixed Deposit, ಇಲ್ಲಿದೆ ಅದನ್ನು ಬಳಸುವ ಸುಲಭ ವಿಧಾನ
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಹೊರತುಪಡಿಸಿ ಹೆಚ್ಚಿನ ಬ್ಯಾಂಕುಗಳನ್ನು ಪ್ರತಿನಿಧಿಸುತ್ತದೆ. ಇದರ ಸದಸ್ಯರಲ್ಲಿ ವಿವಿಧ ಸಾರ್ವಜನಿಕ ಮತ್ತು ಹಳೆಯ ಖಾಸಗಿ ವಲಯದ ಬ್ಯಾಂಕುಗಳು ಮತ್ತು ಕೆಲವು ವಿದೇಶಿ ಬ್ಯಾಂಕುಗಳ ನಾಲ್ಕು ಲಕ್ಷ ಉದ್ಯೋಗಿಗಳು ಸೇರಿದ್ದಾರೆ. ಮಹಾರಾಷ್ಟ್ರದ ಸಾರ್ವಜನಿಕ ವಲಯದ ಬ್ಯಾಂಕುಗಳು, ಹಳೆಯ ತಲೆಮಾರಿನ ಖಾಸಗಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳ 10,000 ಶಾಖೆಗಳ ಸುಮಾರು 30,000 ಉದ್ಯೋಗಿಗಳು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ಮುಂದೆ ದೇಶದ ಈ ಅತಿ ದೊಡ್ಡ ಬ್ಯಾಂಕ್ ನಲ್ಲಿ ಹಣ ನೀಡಿ ವಹಿವಾಟು ನಡೆಸಿದರೆ ಶುಲ್ಕ ಪಾವತಿಸಬೇಕು!
ಬ್ಯಾಂಕ್ ಕಾರ್ಮಿಕರು ಮುಷ್ಕರಕ್ಕೆ ಕಾರಣ:-
ಬ್ಯಾಂಕ್ (Bank) ಖಾಸಗೀಕರಣಕ್ಕೆ ವಿರೋಧ, ಹೊರಗುತ್ತಿಗೆ ಮತ್ತು ಗುತ್ತಿಗೆ ವ್ಯವಸ್ಥೆಗಳ ವಿರೋಧ, ಸಮರ್ಪಕ ನೇಮಕಾತಿಗಳು, ದೊಡ್ಡ ಕಾರ್ಪೊರೇಟ್ ಡೀಫಾಲ್ಟರ್ಗಳ ವಿರುದ್ಧ ಕಠಿಣ ಕ್ರಮ ಬ್ಯಾಂಕ್ ಠೇವಣಿಗಳ ಬಡ್ಡಿದರ ಹೆಚ್ಚಳ ಮತ್ತು ಬ್ಯಾಂಕ್ ಸಿಬ್ಬಂದಿಗಳ ಪರವಾಗಿ ಸೇವಾ ಶುಲ್ಕ ಕಡಿತ ಮುಂತಾದ ಬೇಡಿಕೆಗಳು. ಇದಲ್ಲದೆ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಅಭಿಯಾನವನ್ನೂ ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ.