ನವದೆಹಲಿ: ಕಾರ್ತಿಕ ಶುಕ್ಲ ಪಕ್ಷದ ಎರಡನೇ ದಿನ ಉತ್ತರ ಭಾರತದಾದ್ಯಂತ ಇಂದು ( ನವೆಂಬರ್ 16 ರ ಸೋಮವಾರ) ಸಹೋದರ - ಸಹೋದರಿಯರ ಪವಿತ್ರ ಹಬ್ಬ ಭಾಯ್ ದೂಜ್ ಹಬ್ಬವನ್ನು ಆಚರಿಸಲಾಗುತ್ತಿದೆ. ಭಾಯ್ ದೂಜ್' ಅಥವಾ 'ಯಮ ದ್ವಿತೀಯ' ಎಂದು ಕರೆಯಲ್ಪಡುವ ಈ ಹಬ್ಬವನ್ನು ಪ್ರತಿ ವರ್ಷ ಸಹೋದರ-ಸಹೋದರಿಯರು ಒಟ್ಟಿಗೆ ಆಚರಿಸುತ್ತಾರೆ. ಭಾಯ್ ದೂಜ್ ಹಬ್ಬವನ್ನು ಭಾಯ್ ಬೀಜ್ ಅಥವಾ ಭಾಯ್ ಠೀಕ/ತಿಲಕ್ ಅಥವಾ ಭಾಯ್ ಫ಼ೋಟಾ (ಬೆಂಗಾಲಿಯಲ್ಲಿ) ಎಂದೂ ಕರೆಯುತ್ತಾರೆ. ಈ ಪವಿತ್ರ ದಿನದಂದು ಸಹೋದರಿಯರು ಪೂಜೆ, ಉಪವಾಸ ಮತ್ತು ಕಥಾ ಇತ್ಯಾದಿಗಳ ಮೂಲಕ ತಮ್ಮ ಸಹೋದರನ ದೀರ್ಘಾಯುಷ್ಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಾರೆ ಮತ್ತು ಅವರ ಹಣೆಯ ಮೇಲೆ ತಿಲಕ ಇಟ್ಟು, ಸಿಹಿ ತಿನಿಸುತ್ತಾರೆ. ಪುರಾಣಗಳ ಪ್ರಕಾರ ಯಮರಾಜನು ತನ್ನ ಸಹೋದರಿಯ ಮನೆಗೆ ಇಂದಿನ ದಿನ ಭೇಟಿ ನೀಡಿದ್ದನು. ಹಾಹಾಗಿ ಈ ದಿನವನ್ನು ಯಮ ದ್ವಿತೀಯ ಎಂದೂ ಕರೆಯುತ್ತಾರೆ.
ಭಾಯ್ ದೂಜ್ ಆಚರಣೆಯ ಹಿಂದಿನ ಕಥೆ :-
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಭಗವಾನ್ ಸೂರ್ಯ ಮತ್ತು ಮಾತಾ ಛಾಯಾ ಅವರ ಪುತ್ರ ಯಮ ಮತ್ತು ಪುತ್ರಿ ಯಮುನಾ ಮಾತಾ. ಯಮುನಾ ಮಾತಾ ತನ್ನ ಸಹೋದರ ಯಮನನ್ನು ತುಂಬಾ ಪ್ರೀತಿಸುತ್ತಾಳೆ. ಯಮುನಾ ತನ್ನ ಸಹೋದರ ಯಮರಾಜನನ್ನು ತನ್ನ ಆತ್ಮೀಯ ಗೆಳೆಯರೊಂದಿಗೆ ತನ್ನ ಮನೆಯಲ್ಲಿ ಬಂದು ಊಟ ಮಾಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಳು. ಆದರೆ ಯಮರಾಜ ತನ್ನ ಕೆಲಸದಿಂದಾಗಿ ಯಮುನಾ ಮನೆಗೆ ತೆರಳುತ್ತಿರಲಿಲ್ಲ. ನಂತರ ಒಮ್ಮೆ ಕಾರ್ತಿಕ ಮಾಸದಲ್ಲಿ ಯಮುನಾ ಸಹೋದರ ಯಮರಾಜನನ್ನು ಊಟಕ್ಕೆ ಮನೆಗೆ ಬರುವಂತೆ ಆಹ್ವಾನಿಸಿದಳು. ಈ ಬಾರಿ ಯಮುನಾ ಯಮರಾಜನಿಂದ ಮನೆಗೆ ಊಟಕ್ಕೆ ಬಂದೇ ಬರುವಂತೆ ಮಾತು ತೆಗೆದುಕೊಂಡರು.
ದೀಪಾವಳಿ ಹಬ್ಬದಂದು ಸಂಜೆ ವೇಳೆ ಇವುಗಳನ್ನು ಕಂಡರೆ ಬದಲಾಗುತ್ತೆ ನಿಮ್ಮ ಅದೃಷ್ಟ
ಇದರ ನಂತರ ಯಮರಾಜ ಯೋಚಿಸುತ್ತಾ ನಾನೂ ಎಲ್ಲರ ಜೀವನವನ್ನು ಸೋಲಿಸುತ್ತೇನೆ ಅಂದರೆ ನಾನೂ ಮೃತ್ಯುಕಾರಕ, ಅದಕ್ಕಾಗಿಯೇ ಯಾರೂ ಕೂಡ ನನ್ನನ್ನು ಅವರ ಮನೆಗೆ ಕರೆಯುವುದಿಲ್ಲ. ಆದರೆ ನನ್ನ ಸಹೋದರಿ ಯಮುನಾ ನನ್ನನ್ನು ಪ್ರೀತಿಯಿಂದ ಕರೆಯುವಾಗ ನಾನು ಹೋಗಿ ಆಕೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಭಾವಿಸುತ್ತಾನೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಎರಡನೇ ದಿನ ಯಮರಾಜ ತನ್ನ ಸಹೋದರಿ ಯಮುನಾ ಅವರ ಮನೆಗೆ ತೆರಳುತ್ತಾನೆ. ಸಹೋದರ ಯಮರಾಜನನ್ನು ಅವರ ಮನೆಯಲ್ಲಿ ನೋಡಿದ ಯಮುನಾ ಸಂತೋಷಕ್ಕೆ ಪಾರವೇ ಇರಲಿಲ್ಲ. ನಂತರ ಯಮುನಾ ಸ್ನಾನ ಮಾಡಿ, ಸಹೋದರ ಯಮನಿಗಾಗಿ ಧ್ಯಾನ ಮಾಡಿ ಸಹೋದರನ ಶ್ರೇಯಸ್ಸಿಗಾಗಿ ಆತನ ಹಣೆಗೆ ತಿಲಕವಿಟ್ಟಳು. ಬಳಿಕ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿ ಪ್ರೀತಿ, ಮಮತೆಯಿಂದ ಸಹೋದರನಿಗೆ ಊಟ ಬಡಿಸಿದಳು. ಇದರಿಂದ ಸಂತಸಗೊಂಡ ಯಮರಾಜ ಯಮುನಾ ಮಾತಾಗೆ ನಿನಗೆ ಬೇಕಾದ ವರವನ್ನು ಕೇಳು ಕರುಣಿಸುವೆ ಎಂದರು.
Video: ಭಾಯ್ ದೂಜ್ ಪ್ರಯುಕ್ತ ಮೇಲ್ಚಾವಣಿ ಕ್ರಿಕೆಟ್ ಆಡಿದ ಶಿಖರ್ ಧವನ್...!
ಯಮುನಾ ಮಾತಾ ಸಹೋದರ ನೀವು ಪ್ರತಿ ವರ್ಷ ಈ ದಿನ ನನ್ನ ಮನೆಗೆ ಬರುತ್ತೀರಿ ಎಂದು ವರ ನೀಡಿ ಎಂದಳು. ಕಾರ್ತಿಕ ಮಾಸದ ಶುಕ್ಲ ಪಕ್ಷದ ಈ ದಿನ ನನ್ನಂತೆ ತನ್ನ ಸಹೋದರನನ್ನು ಗೌರವಿಸುವ ಯಾವುದೇ ಸಹೋದರಿಯ ಮನೆಗೆ ಹೋಗಲು ಅಣ್ಣ-ತಮ್ಮಂದಿರು ಭಯಪಡಬಾರದು ಎಂಬ ವರ ಬೇಡಿದಳು. ಯಮರಾಜ ಅಸ್ತು ಎಂದನು. ಸಹೋದರಿಯರ ಮುತ್ತೈದೆ ಭಾಗ್ಯ ಚಿರಕಾಲ ಉಳಿಯಲಿ ಎಂದು ಆಶೀರ್ವದಿಸಿ ತೆರಳಿದನು. ಈ ಹಿನ್ನಲೆಯಲ್ಲಿ ಈ ದಿನದಿಂದು ಭಾಯ್ ದೂಜ್ (Bhai Dooj) ಹಬ್ಬವನ್ನು ಆಚರಿಸಲು ಪ್ರಾರಂಭಿಸಲಾಯಿತು ಎಂಬುದು ನಂಬಿಕೆಯಾಗಿದೆ.
ಭಾಯ್ ದೂಜ್ ಪೂಜಾ ವಿಧಾನ:
ಭಾಯ್ ದೂಜ್ ದಿನದಂದು ಬೆಳಿಗ್ಗೆ, ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸ್ನಾನ ಮಾಡಿ ಸಿದ್ಧರಾಗಿ. ಇದರ ನಂತರ ಸಹೋದರ ಸಹೋದರಿಯರಿಬ್ಬರೂ ಯಮರಾಜ, ಯಮನ ಸಂದೇಶವಾಹಕರು ಮತ್ತು ಚಿತ್ರಗುಪ್ತನನ್ನು ಪೂಜಿಸಬೇಕು. ನಂತರ ಎಲ್ಲರಿಗೂ ಅರ್ಘ್ಯವನ್ನು ನೀಡಿ. ಇದರ ನಂತರ ನಿಮ್ಮ ಸಹೋದರನಿಗೆ ಸಹೋದರಿ ಅಕ್ಕಿ ಮತ್ತು ತುಪ್ಪದ ಟೀಕ ಎಂದರೆ ತುಪ್ಪದಿಂದ ತಯಾರಿಸಿದ ಅಕ್ಷತೆಯನ್ನು ಸಹೋದರನ ಹಣೆಗೆ ತಿಲಿಕವಾಗಿ ಹಚ್ಚಿ. ನಂತರ ನಿಮ್ಮ ಸಹೋದರನ ಅಂಗೈ ಮೇಲೆ ವಿಳ್ಳೆದೆಲೆ, ಅಡಿಕೆ, ಸಿಂಧೂರ ಮತ್ತುಕೊಬ್ಬರಿ ಇರಿಸಿ. ಇದರ ನಂತರ, ಸಹೋದರನ ಬಾಯಿಯನ್ನು ಸಿಹಿಗೊಳಿಸಿ ಮತ್ತು ಸಹೋದರಿ ತನ್ನ ಸಹೋದರನ ದೀರ್ಘ ಜೀವನಕ್ಕಾಗಿ ಪ್ರಾರ್ಥಿಸಿ. ಅಂತಿಮವಾಗಿ ಸಹೋದರನು ತನ್ನ ಸಹೋದರಿಯನ್ನು ಆಶೀರ್ವದಿಸಿ ಅವಳಿಗೆ ಉಡುಗೊರೆ ನೀಡಬೇಕು.
ಈ ವರ್ಷ ಭಾಯ್ ದೂಜ್ ಶುಭ ಸಮಯ :-
ಈ ವರ್ಷ ಭಾಯ್ ದೂಜ್ನಲ್ಲಿ ಸಹೋದರನ ಹಣೆಗೆ ತಿಲಕವಿಡಳು ಶುಭ ಸಮಯ ಸೋಮವಾರ ಮಧ್ಯಾಹ್ನ 12:56 ರಿಂದ 03:06 ರವರೆಗೆ.