ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ (Coronavirus) ಪ್ರಕೋಪ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಏತನ್ಮಧ್ಯೆ ದೇಶದ ವಿವಿಧ ರಾಜ್ಯಗಳಲ್ಲಿ ವಾಯುಮಾಲಿನ್ಯ ಹರಡಬಾರದು ಮತ್ತು ಮಾಲಿನ್ಯದಿಂದ ಕೊರೊನಾ ಪ್ರಕೋಪ ಮತ್ತೆ ವೇಗ ಪಡೆದುಕೊಳ್ಳಬಾರದು ಎಂಬ ಉದ್ದೇಶದಿಂದ, ದೇಶದ ಹಲವು ರಾಜ್ಯಗಳು ಪಟಾಕಿ ಖರೀದಿ-ಮಾರಾಟ ಹಾಗೂ ಸಿಡಿಸುವುದರ ಮೇಲೆ ನಿಷೇಧ ವಿಧಿಸಿವೆ. ಒಂದೆಡೆ ದೆಹಲಿಯಲ್ಲಿ ಕೊರೊನಾ ಪ್ರಕೋಪ ನಿಲ್ಲುವ ಮಾತೆ ಎತ್ತುತ್ತಿಲ್ಲವಾದರೆ ಇನ್ನೊಂದೆಡೆ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಯುಮಾಲಿನ್ಯದಿಂದ ನ್ಯಾಯಾಲಯ ಹಾಗೂ ರಾಜ್ಯ ಸರ್ಕಾರ ಕೂಡ ಚಿಂತೆಗೋಳಗಾಗಿವೆ. ಈ ನಿಟ್ಟಿನಲ್ಲಿ, ಗುರುವಾರ ಸಂಜೆ ದೆಹಲಿ ಸರ್ಕಾರ ತನ್ನ ಹಲವಾರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದೆ. ದೆಹಲಿಯಲ್ಲಿ ಈಗಾಗಲೇ ಪಟಾಕಿ ನಿಷೇಧಿಸಲಾಗಿದೆ. ಇದೆ ರೀತಿ ಒಂದಾದ ಮೇಲೆ ಮತ್ತೊಂದರಂತೆ ದೇಶದ ಹಲವು ರಾಜ್ಯಗಳು ತಮ್ಮ ರಾಜ್ಯದಲ್ಲಿ ಪಟಾಕಿಗಳ ಮೇಲೆ ನಿಷೇಧ ವಿಧಿಸಲಾರಂಭಿಸಿವೆ.
ಯಾವ ಯಾವ ರಾಜ್ಯಗಳಲ್ಲಿ ಪಟಾಕಿ ಸಿಡಿಸುವುದರ ಮೇಲೆ ನಿಷೇಧ ವಿಧಿಸಲಾಗಿದೆ?
ಮಹಾರಾಷ್ಟ್ರ
ಕೋವಿಡ್ 19 ಪ್ರಕೋಪ ತಡೆಗಟ್ಟಲು ಮಹಾರಾಷ್ಟ್ರ ಸರ್ಕಾರದವತಿನಿಂದ ಶುಕ್ರವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ .ಈ ವೇಳೆ ಮಹಾರಾಷ್ಟ್ರದಲ್ಲಿ ವಾಸಿಸುವ ಜನರಿಗೆ ಪಟಾಕಿ ಸಿಡಿಸಬಾರದು ಎಂದು ಸರ್ಕಾರ ವಿನಂತಿಸಿದೆ. ಆದರೆ ನಾಗರಿಕ ಸಂಸ್ಥೆ, ಬೃಹನ್ ಮುಂಬೈ ನಗರ್ ನಿಗಮ್, ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಅಲ್ಲದೆ, ಆದೇಶಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಬಿಎಂಸಿ ಹೇಳಿದೆ.
ಇದನ್ನು ಓದಿ- ಪಟಾಕಿ ವ್ಯಾಪಾರಿಗಳ ಬೇಡಿಕೆಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್
ಕರ್ನಾಟಕ
ದೀಪಾವಳಿ ಹಬ್ಬ ಮತ್ತು ದೇಶದಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಪಟಾಕಿ ಬಳಕೆಯನ್ನು ನಿಷೇಧಿಸಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಚರ್ಚಿಸಿದ ನಂತರ ದೀಪಾವಳಿಯಲ್ಲಿ ಪಟಾಕಿ ಬಳಕೆಯನ್ನು ನಿಷೇಧಿಸಲಾಗುವುದು ಎಂದು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಕರೋನಾ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳ
ಕೋಲ್ಕತ್ತಾದಲ್ಲಿ ದೀಪಾವಳಿಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ, ಆದರೆ ಈ ಬಾರಿ ನಗರದಲ್ಲಿ ಆಚರಿಸಲಾಗುವ ದೀಪಾವಳಿ ಹಬ್ಬದಲ್ಲಿ ಕ್ರ್ಯಾಕರ್ಸ್ ಗಳ ಬಳಕೆ ಇರುವುದಿಲ್ಲ ಏಕೆಂದರೆ ಕರೋನಾ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ, ಕಾಳಿ ಪೂಜೆ, ಜಗಧಾತ್ರಿ ಪೂಜಾ ಮತ್ತು ಛಟ್ ಪೂಜಾ ಸಂದರ್ಭದಲ್ಲಿ ಪಟಾಕಿ ಮಾರಾಟವನ್ನು ಕೊಲ್ಕತ್ತಾ ಹೈಕೋರ್ಟ್ ನಿಷೇಧಿಸಿದೆ.
ಇದನ್ನು ಓದಿ- ಈ ಬಾರಿಯ ದೀಪಾವಳಿಗೆ ರಾಜ್ಯದಲ್ಲೂ ಪಟಾಕಿ ಬ್ಯಾನ್..!
ರಾಜಸ್ಥಾನ
ಕೊವಿಡ್ 19 ರೋಗಿಗಳ ಆರೋಗ್ಯವನ್ನು ಕಾಪಾಡಲು ಮತ್ತು ಪಟಾಕಿ ಸಿಡಿಸುವವರಿಂದ ಹೊರಹೊಮ್ಮುವ ವಿಷಕಾರಿ ಹೊಗೆಯಿಂದ ಸಾರ್ವಜನಿಕರನ್ನು ರಕ್ಷಿಸಲು ಕ್ರ್ಯಾಕರ್ ಮಾರಾಟ ಮತ್ತು ಸಿಡಿತವನ್ನು ನಿಷೇಧಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಟ್ವೀಟ್ ಮಾಡಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ ವ್ಯಕ್ತಿಯಿಂದ 2000 ರೂ.ವರೆಗೆ ದಂಡವನ್ನು ವಸೂಲಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಿಕ್ಕಿಂ
ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಹಿನ್ನೆಲೆಯಲ್ಲಿ ಸಿಕ್ಕಿಂ ಸರ್ಕಾರ ಕೂಡ ಪಟಾಕಿಗಳ ಖರೀದಿ, ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ.