ನವದೆಹಲಿ : ಕರೋನವೈರಸ್ ಸೋಂಕಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಸಮಿತಿ ದೊಡ್ಡ ಹೇಳಿಕೆ ನೀಡಿದೆ. ಫೆಬ್ರವರಿ 2021ರ ವೇಳೆಗೆ ಭಾರತದಲ್ಲಿ ಸಾಂಕ್ರಾಮಿಕ ರೋಗ ಕೊನೆಗೊಳ್ಳಬಹುದು ಎಂದು ಸಮಿತಿ ಹೇಳಿದೆ. ಅಷ್ಟೇ ಅಲ್ಲ ಭಾರತದಲ್ಲಿ ಕರೋನದ ಕೆಟ್ಟ ಹಂತ ಕಳೆದಿದೆ ಎಂದು ಸಮಿತಿ ಹೇಳಿಕೊಂಡಿದೆ.
ಫೆಬ್ರವರಿ 2021ರ ವೇಳೆಗೆ ಕರೋನಾ ಭಾರತದಲ್ಲಿ ಕೊನೆಗೊಳ್ಳುತ್ತದೆ ಎಂದು ಸರ್ಕಾರದ ಕರೋನಾ ಸಮಿತಿಯಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ಹೇಳುತ್ತಾರೆ. ಜೊತೆಗೆ ಕರೋನದ ಪ್ರಕರಣಗಳು ವೇಗವಾಗಿ ಕ್ಷೀಣಿಸುತ್ತಿವೆ ಎಂದವರು ತಿಳಿಸಿದ್ದಾರೆ.
ದೇಶದಲ್ಲಿ ಕರೋನಾ ಸೋಂಕಿತರ ಬಗ್ಗೆ ಸಮಿತಿಯ ಮಹತ್ವದ ಹೇಳಿಕೆ:
ಭಾರತದಲ್ಲಿ ಒಂದು ಕೋಟಿ 6 ಲಕ್ಷಕ್ಕಿಂತ ಹೆಚ್ಚು ಕರೋನಾವೈರಸ್ (Coronavirus) ಪ್ರಕರಣಗಳು ಬರುವುದಿಲ್ಲ ಎಂದು ಸರ್ಕಾರಿ ಸಮಿತಿ ಹೇಳಿಕೊಂಡಿದೆ. ಪ್ರಸ್ತುತ ಸೋಂಕಿತರ ಸಂಖ್ಯೆಯಲ್ಲಿ ದೇಶ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಕರೋನಾ ಸೋಂಕಿನ ಸಂಖ್ಯೆ 7.5 ದಶಲಕ್ಷಕ್ಕೆ ತಲುಪಿದೆ, ಆದರೆ ವಿಶ್ವದಲ್ಲೇ ಕರೋನಾದಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯಲ್ಲಿ ಭಾರತ ಮುಂದಿದೆ.
2022ರ ಮೊದಲು ಯುವ, ಆರೋಗ್ಯವಂತ ಜನರಿಗೆ ಸಿಗಲ್ಲವಂತೆ ಕರೋನಾ ಲಸಿಕೆ: WHO ಹೇಳಿದ್ದೇನು?
ದೇಶದಲ್ಲಿ ಚಿಕಿತ್ಸೆಯಿಂದ ಚೇತರಿಸಿಕೊಳ್ಳುವವರ ಪ್ರಮಾಣವು ಶೇಕಡಾ 88.03ಕ್ಕೆ ತಲುಪಿದೆ. ಇದರೊಂದಿಗೆ ದೇಶಕ್ಕೆ ಕರೋನಾಗೆ ಸಂಬಂಧಿಸಿದ ಮತ್ತೊಂದು ಒಳ್ಳೆಯ ಸುದ್ದಿ ಏನೆಂದರೆ, ದೇಶಾದ್ಯಂತ ಸಾಧ್ಯವಾದಷ್ಟು ಬೇಗ ಕರೋನಾ ಲಸಿಕೆ (Corona Vaccine) ಯನ್ನು ತಲುಪಿಸಲು ಸಿದ್ಧತೆಗಳು ನಡೆಯುತ್ತಿವೆ. ಮೂರು ಸ್ಥಳೀಯ ಕರೋನಾ ಲಸಿಕೆಗಳ ಪ್ರಯೋಗವು ಮುಂದುವರೆದಿದೆ, ಅದರಲ್ಲಿ ಎರಡು ಕರೋನಾ ಲಸಿಕೆ ಪ್ರಯೋಗಗಳು ಹಂತ -2 ಕ್ಕೆ ತಲುಪಿವೆ.
ಇನ್ನು ಮುಂದೆ ಲಾಕ್ಡೌನ್ ಅಗತ್ಯವಿಲ್ಲ:
ಕೇಂದ್ರ ಸರ್ಕಾರ ನೇಮಿಸಿದ ಸಮಿತಿ ತನ್ನ ವರದಿಯಲ್ಲಿ ದೇಶದಲ್ಲಿ ಇನ್ನುಮುಂದೆ ಲಾಕ್ಡೌನ್ (Lockdown) ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವರದಿಯ ಪ್ರಕಾರ ಕರೋನಾ ಮಾರ್ಗಸೂಚಿಯನ್ನು ಅನುಸರಿಸಿದರೆ ಲಾಕ್ಡೌನ್ ಹೇರುವ ಅಗತ್ಯವಿರುವುದಿಲ್ಲ. ಆದ್ದರಿಂದ ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣವನ್ನು ಮುಂದಿನ ವರ್ಷದ ಆರಂಭದ ವೇಳೆಗೆ ನಿಯಂತ್ರಿಸಬಹುದು ಎಂದು ಹೇಳಲಾಗಿದೆ.
ಸಿಹಿ ಸುದ್ದಿ! ಕರೋನಾದ ಎರಡನೇ ಲಸಿಕೆಯನ್ನು ಅನುಮೋದಿಸಿದೆ ಈ ದೇಶ
24 ಗಂಟೆಗಳಲ್ಲಿ ಕಡಿಮೆಯಾಗಿದೆ ಕರೋನಾ ಪ್ರಕರಣ:
ಕರೋನಾದ ಹಾನಿ ದೇಶದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಭಾರತದಲ್ಲಿ 7.5 ದಶಲಕ್ಷಕ್ಕೂ ಹೆಚ್ಚು ಜನರು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಅದೇ ಸಮಯದಲ್ಲಿ, ಇದುವರೆಗೆ 1 ಲಕ್ಷ 14 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆರೋಗ್ಯ ಸಚಿವಾಲಯ ಸೋಮವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 55 ಸಾವಿರ 722 ಹೊಸ ಕರೋನಾ ಪ್ರಕರಣಗಳು ಸಂಭವಿಸಿವೆ ಮತ್ತು ಈ ಸಮಯದಲ್ಲಿ 579 ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ ಒಂದು ದಿನದ ಹಿಂದೆ 61 ಸಾವಿರ 871 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ಈ ಸಮಯದಲ್ಲಿ 1033 ಜನರು ಈ ಮಾರಕ ವೈರಸ್ಗೆ ಬಲಿಯಾಗಿದ್ದರು. ಭಾರತದಲ್ಲಿ ಪ್ರಸ್ತುತ 7,72,055 ಸಕ್ರಿಯ ಪ್ರಕರಣಗಳಿವೆ. ಚಿಕಿತ್ಸೆಯ ನಂತರ 66,63,608 ಜನರು ಗುಣಮುಖರಾಗಿದ್ದಾರೆ.