ಪಾಟ್ನಾ: ಬಿಹಾರ ಪ್ರವಾಹ (Bihar Flood) ಮಂಗಳವಾರ (ಜುಲೈ 28, 2020) ಸಂಜೆ 12 ಜಿಲ್ಲೆಗಳಲ್ಲಿ 29.62 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಮತ್ತು ಪ್ರವಾಹ (Flood) ಸಂಬಂಧಿತ ಘಟನೆಗಳಲ್ಲಿ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಗೆ ಬಿಡುಗಡೆಯಾದ ಬಿಹಾರ (Bihar) ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಬುಲೆಟಿನ್ ಪ್ರಕಾರ 12 ಜಿಲ್ಲೆಗಳ 101 ಬ್ಲಾಕ್ಗಳಲ್ಲಿ 29,62,653 ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.
ಸೀತಾಮರ್ಹಿ, ಶಿಯೋಹರ್, ಸುಪಾಲ್, ಕಿಶಂಗಂಜ್, ದರ್ಭಂಗಾ, ಮುಜಾಫರ್ಪುರ್, ಗೋಪಾಲಗಂಜ್, ಪಶ್ಚಿಮ ಚಂಪಾರನ್, ಪೂರ್ವ ಚಂಪಾರನ್, ಖಗರಿಯಾ, ಸರನ್ ಮತ್ತು ಸಮಸ್ತಿಪುರ ಪ್ರವಾಹ ಪೀಡಿತ ಜಿಲ್ಲೆಗಳು.
ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆ ದರ್ಬಂಗಾ, ಅಲ್ಲಿ 11 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ಹಿಡಿತದಲ್ಲಿ ಸಿಲುಕಿದ್ದಾರೆ. ನಂತರ ಪೂರ್ವ ಚಂಪಾರನ್ ಜಿಲ್ಲೆಯಲ್ಲಿ ಸುಮಾರು 7 ಲಕ್ಷ ಜನರು ಪ್ರವಾಹದಿಂದ ಹಾನಿಗೊಳಗಾಗಿದ್ದಾರೆ.
ಈ ಜಿಲ್ಲೆಗಳಲ್ಲಿ ಒಟ್ಟು 26 ಎನ್ಡಿಆರ್ಎಫ್ (16) ಮತ್ತು ಎಸ್ಡಿಆರ್ಎಫ್ (9) ತಂಡಗಳನ್ನು ನಿಯೋಜಿಸಲಾಗಿದ್ದು ಇಲ್ಲಿಯವರೆಗೆ 2,62,837 ಜನರನ್ನು ಸ್ಥಳಾಂತರಿಸಿ ರಕ್ಷಿಸಲಾಗಿದೆ.
T3️⃣ #BiharFloods Updates
28/07/2020@NDRFHQ in Action
➡️ 𝔼𝕧𝕒𝕔𝕦𝕒𝕥𝕚𝕟𝕘 People while Sanitising & providing mask
Taraiya Block, Saran-Chhapra#EveryLifeMatters @HMOIndia @PMOIndia @BhallaAjay26 @PIBHomeAffairs @ANI @PIB_Patna @DDNewslive @DDNewsHindi pic.twitter.com/F9jBdHI65m— ѕαtчα prαdhαnसत्य नारायण प्रधान ସତ୍ଯପ୍ରଧାନ-DG NDRF (@satyaprad1) July 28, 2020
ಮಂಗಳವಾರ ಸಂಜೆ ವೇಳೆಗೆ 26 ಪರಿಹಾರ ಶಿಬಿರಗಳಲ್ಲಿ 22,997 ಜನರು ತಂಗಿದ್ದಾರೆ ಮತ್ತು 808 ಸಮುದಾಯ ಅಡಿಗೆಮನೆಗಳಲ್ಲಿ 4.2 ಲಕ್ಷ ಜನರಿಗೆ ಆಹಾರ ನೀಡಲಾಗಿದೆ ಎಂದು ರಾಜ್ಯ ಬುಲೆಟಿನ್ ತಿಳಿಸಿದೆ.
ಇದಲ್ಲದೆ ರಾಜ್ಯದಲ್ಲಿ ಬಾಗ್ಮತಿ, ಬುರ್ಹಿ ಗಂಡಕ್, ಕಮಲಾಬಾಲನ್, ಅಧ್ವಾರ ಮತ್ತು ಖಿರೊಯ್ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಭಾಗಲ್ಪುರ್ ಮತ್ತು ಕಹಲ್ಗಾಂವ್ನಲ್ಲಿ ಗಂಗಾ ನೀರಿನ ಮಟ್ಟ ಹೆಚ್ಚಾಗುತ್ತಿದ್ದರೆ ಬಕ್ಸಾರ್, ಹತಿದಾ, ಮುಂಗರ್, ದಿಘಾ ಮತ್ತು ಗಾಂಧಿ ಘಾಟ್ನಲ್ಲಿ ಇದು ಕ್ಷೀಣಿಸುತ್ತಿದೆ ಎಂದು ವರದಿಯಾಗಿದೆ.
ಹಿಂದಿನ ದಿನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಮಂಗಳವಾರ ನಡೆದ ಸಭೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಪರಿಹಾರ ಶಿಬಿರಗಳು ಮತ್ತು ಸಮುದಾಯ ಅಡಿಗೆಮನೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
COVID-19 ಸೋಂಕುಗಳ ಉಲ್ಬಣಕ್ಕೆ ರಾಜ್ಯವು ಸಾಕ್ಷಿಯಾಗುತ್ತಿರುವುದರಿಂದ ಪರಿಹಾರ ಶಿಬಿರಗಳು ಮತ್ತು ಸಮುದಾಯ ಅಡಿಗೆಮನೆಗಳಲ್ಲಿ ಸಾಮಾಜಿಕ ದೂರವನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಏತನ್ಮಧ್ಯೆ ಬಿಹಾರದಾದ್ಯಂತ ಕರೋನವೈರಸ್ (Coronavirus) ಹಾವಳಿಯಿಂದಾಗಿ 43,591 ಪ್ರಕರಣಗಳು ದಾಖಲಾಗಿದ್ದು 269 ಜನರು ಸಾವನ್ನಪ್ಪಿದ್ದಾರೆ.