ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್'ಗೆ ಮತ್ತೊಂದು ಜಾಗತಿಕ ಹೆಗ್ಗಳಿಕೆ ಲಭಿಸಿದೆ. ನ್ಯೂಯಾರ್ಕ್ ಮೂಲದ ಇಂಗ್ಲಿಷ್ ದೈನಿಕ 'ದಿ ವಾಲ್ ಸ್ಟ್ರೀಟ್ ಜರ್ನಲ್' ಹೈದರಾಬಾದ್ ಬಿರಿಯಾನಿಯನ್ನು ವಿಶ್ವದ ಅತ್ಯುತ್ತಮ ಬಿರಿಯಾನಿ ಎಂದು ಗುರುತಿಸಿದೆ.
ಶಾಹ್ ಘೌಸ್, ಪ್ಯಾರಡೈಸ್, ಶದಾಬ್, ಕೆಫೆ ಬಹಾರ್, ಅಡಾ (ತಾಜ್ ಫಾಲಕ್ನುಮಾ) ಮತ್ತು ದಿ ಸ್ಪಿಸಿ ವೇನ್ಯೂ ಎಂಬಂತಹ ಹೋಟೆಲ್ಗಳು 'ಬಿರಿಯಾನಿ ರುಚಿಯ ಪ್ರವಾಸ'ವನ್ನು ಆರಂಭಿಸಿದ್ದವು.
"ಎಲ್ಲಾ ಬಿರಿಯಾನಿಗಳಲ್ಲಿ, ಹೈದರಾಬಾದ್ ಬಿರಿಯಾನಿ ಅತ್ಯುತ್ತಮ ಬಿರಿಯಾನಿ" ಎಂದು ವಾಲ್ ಸ್ಟ್ರೀಟ್ ಜರ್ನಲ್ ಉಲ್ಲೇಖಿಸಿದೆ.
ಹೈದರಾಬಾದ್ ಮೂಲದ ಆಹಾರ ವಿಮರ್ಶೆ ಮತ್ತು ಆಹಾರ ಸಲಹೆಗಾರರಾದ ಸಂಕಲ್ಪ ವಿಷ್ಣು ಈ ವೇದಿಕೆಗೆ ಹೈದರಾಬಾದ್ ಹೋಟೆಲ್ಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿಗಾರನನ್ನು ಹೈದರಾಬಾದ್ನಲ್ಲಿ ನಡೆದ ಬಿರಿಯಾನಿ ಪ್ರವಾಸದಲ್ಲಿ ಭಾಗಿಯಾಗುವಂತೆ ಮಾಡಿದ್ದರು.
(Sources: With Telangana today inputs)