ನವದೆಹಲಿ: ಭಾರತದಲ್ಲಿ ನಿಷೇಧಗೊಂಡ ಬಳಿಕ ಇದೀಗ ಅಮೆರಿಕದಲ್ಲೂ ಟಿಕ್ಟಾಕ್ ಅನ್ನು ನಿಷೇಧಿಸುವ ಬೇಡಿಕೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಟೈಟಾಕ್ನ ಮೂಲ ಕಂಪನಿ ಬೈಟ್ಡ್ಯಾನ್ಸ್ ಕಂಪನಿಯ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ಚಿಂತನೆ ನಡೆಸಿದೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಬೈಟ್ಡ್ಯಾನ್ಸ್ ಮ್ಯಾನೇಜ್ಮೆಂಟ್ ಟಿಕ್ಟಾಕ್ಗಾಗಿ ಪ್ರತ್ಯೇಕ ನಿರ್ವಹಣಾ ಮಂಡಳಿಯನ್ನು ರಚಿಸಿ ಅದರ ಪ್ರಧಾನ ಕಛೇರಿಯನ್ನು ಚೀನಾದಿಂದ ಹೊರಗೆ ಸ್ಥಾಪಿಸಲು ಚಿಂತನೆ ನಡೆಸಿದೆ.
ಬಳಕೆದಾರರ ಗೌಪ್ಯತೆ ಕಾರಣ ಬ್ಯಾನ್ ನಿರ್ಧಾರ
ಇತೀಚೆಗಷ್ಟೇ ಟಿಕ್ ಟಾಕ್ ಸೇರಿದಂತೆ ಒಟ್ಟು 59 ಚೈನಾ ಮೂಲದ ಆಪ್ ಗಳನ್ನೂ ನಿಷೇಧಿಸಲು ಭಾರತ ಸರ್ಕಾರ ನಿರ್ಧರಿಸಿದ್ದ ವೇಳೆ, ಬಳಕೆದಾರರ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು. ಅಂದರೆ, ಈ ಆಪ್ ಗಳ ಮೇಲೆ ಭಾಳದೆದಾರರ ವೈಯಕ್ತಿಕ ಮಾಹಿತಿ ಹಂಚಿಕೆಯ ಕುರಿತು ಆರೋಪ ಮಾಡಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಟಿಕ್ ಟಾಕ್ ನಿರಂತರವಾಗಿ ಸ್ಪಷ್ಟನೆ ನೀಡುತ್ತಿದ್ದು, ಬಳಕೆದಾರರ ಡೇಟಾ ಸಂಗ್ರಹಣೆ ಸಿಂಗಾಪುರ್ ನಲ್ಲಿ ನಡೆಯುತ್ತಿದ್ದು, ಚೀನಾ ಸರ್ಕಾರ ಎಂದಿಗೂ ಕೂಡ ಡೇಟಾ ಹಂಚಿಕೆ ಕುರಿತು ಮಾತನಾಡಿಲ್ಲ ಹಾಗೂ ಕಂಪನಿ ಕೂಡ ಸರ್ಕಾರಕ್ಕೆ ಬಳಕೆದಾರರ ಯಾವುದೇ ಮಾಹಿತಿ ಒದಗಿಸಿಲ್ಲ ಎಂದು ಹೇಳುತ್ತಿದೆ.
ಬಳಕೆದಾರರ ಡೇಟಾ ಸಂರಕ್ಷಣೆ ಮೊದಲ ಆದ್ಯತೆ
ಇತ್ತ ಈ ಕುರಿತು ಹೇಳಿಕೆ ನೀಡಿರುವ ಬೈಟ್ ಡಾನ್ಸ್ ಆಡಳಿತ "ಬಳಕೆದಾರರ ಮಾಹಿತಿ ಜೊತೆ ಯಾವುದೇ ರೀತಿಯ ಧಕ್ಕೆ ಉಂಟು ಮಾಡುವುದಿಲ್ಲ ಹಾಗೂ ಡೇಟಾ ಪ್ರೈವೆಸಿ ಹಾಗೂ ಸಿಕ್ಯೂರಿಟಿ ಇದು ನಮ್ಮ ಪ್ರಾಥಮಿಕ ಆದ್ಯತೆ ಆಗಿದೆ" ಎಂದು ಹೇಳಿದೆ.
20 ಕೋಟಿ ನೊಂದಾಯಿತ ಬಳಕೆದಾರರು
ಭಾರತದಲ್ಲಿ ಟಿಕ್ ಟಾಕ್ ಸುಮಾರು 20 ಕೋಟಿ ಅಧಿಕೃತ ಬಳಕೆದಾರರನ್ನು ಹೊಂದಿದೆ. ತಿಂಗಳಿಗೆ ಒಟ್ಟು 12 ಕೋಟಿ ಸಕ್ರೀಯ ಬಳಕೆದಾರರಿದ್ದಾರೆ. ಭಾರತದಲ್ಲಿ ಬಿಡುಗಡೆಯಾದ ಬಳಿಕ ಇದುವರೆಗೆ ಈ ಆಪ್ 66 ಕೋಟಿಗೂ ಅಧಿಕ ಬಾರಿಗೆ ಡೌನ್ಲೋಡ್ ಮಾಡಲಾಗಿದೆ. ಭಾರತದಲ್ಲಿ ಬೈಟ್ ಡಾನ್ಸ್ 200೦ ಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿದೆ.
ಕೋಟ್ಯಾಂತರ ರೂಪಾಯಿ ನಷ್ಟ
ಭಾರತದಲ್ಲಿ ಬ್ಯಾನ್ ಆದ ಬಳಿಕ ಈ ಆಪ್ ಗೆ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ವರದಿಯೊಂದರ ಪ್ರಕಾರ ಈ ಆಪ್ ಮೇಲೆ ಬ್ಯಾನ್ ವಿಧಿಸಿರುವ ಕಾರಣ ಈ ಆಪ್ ಗೆ ಸುಮಾರು 6 ಬಿಲಿಯನ್ ಡಾಲರ್ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಡೇಟಾ ಪ್ರೈವೆಸಿ ಹಾಗೂ ಡೇಟಾ ಸೆಕ್ಯೋರಿಟಿಯ ಕಾರಣ ಮುಂಬರುವ ದಿನಗಳಲ್ಲಿ ಬೇರೆ ದೇಶಗಳಲ್ಲಿಯೂ ಕೂಡ ಆಪ್ ಗೆ ಇದೆ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಸಮಯ ಇರುವಂತೆ ಕಂಪನಿ ತನಗಾಗಿ ಹೊಸದೊಂದು ಸ್ಥಳದ ವಿಕಲ್ಪ ಶೋಧಿಸುವತ್ತ ತನ್ನ ಗಮನ ಕೇಂದ್ರೀಕರಿಸಿದೆ.