ಜಾರಿಗೆ ಬಂದಾಯ್ತು ಹೊಸ ರಜಾ ನಿಯಮ ! ವಾರಕ್ಕೆ ನಾಲ್ಕೇ ದಿನ ಕೆಲಸ, ಮೂರು ದಿನ ವಾರದ ರಜೆ !

4 Days working Rules :ಕಂಪನಿಗಳಲ್ಲಿ ಕೆಲಸದ ಅವಧಿ ಹೆಚ್ಚಾಗಬೇಕು ಎನ್ನುವ ವಾದ ವಿವಾದಗಳ ಮಧ್ಯೆಯೇ ವಾರದಲ್ಲಿ 4 ದಿನ ಕೆಲಸ 3 ದಿನ ರಜೆ ಎನ್ನುವ ನಿಯಮಕ್ಕೆ ಒಪ್ಪಿಗೆ ಸಿಕ್ಕಿದೆ. 

Written by - Ranjitha R K | Last Updated : Jan 28, 2025, 03:11 PM IST
  • ಕೆಲಸದ ಸಮಯದ ಬಗ್ಗೆ ಈ ಹಿಂದೆ ಭಾರತದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.
  • ದಿನಕ್ಕೆ 15 ರಿಂದ 17 ಗಂಟೆಗಳ ಕಾಲ ಕೆಲಸ ಮಾಡುವಂತಹ ವಿಷಯಗಳನ್ನುಕೂಡಾ ಪ್ರಸ್ತಾಪ
  • ವಾರದಲ್ಲಿ 4 ದಿನ ಕೆಲಸ 3 ದಿನ ರಜೆ ಎನ್ನುವ ನಿಯಮಕ್ಕೆ ಒಪ್ಪಿಗೆ
ಜಾರಿಗೆ ಬಂದಾಯ್ತು ಹೊಸ ರಜಾ ನಿಯಮ ! ವಾರಕ್ಕೆ ನಾಲ್ಕೇ ದಿನ ಕೆಲಸ, ಮೂರು  ದಿನ ವಾರದ ರಜೆ ! title=

4 Days working Rules : ಕೆಲಸದ ಸಮಯದ ಬಗ್ಗೆ ಈ ಹಿಂದೆ ಭಾರತದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಉದ್ಯೋಗಿಗಳನ್ನು ಸಾಧ್ಯವಾದಷ್ಟು ಗಂಟೆ ಕೆಲಸ ಮಾಡುವಂತೆ ಕೆಲವು ಕಂಪನಿಗಳ ಉನ್ನತ ಆಡಳಿತದ ಹೇಳಿಕೆಗಳು ಈ ಚರ್ಚೆಯ ಹಿಂದಿನ ಕಾರಣವಾಗಿದೆ. ಇದರಲ್ಲಿ ದಿನಕ್ಕೆ 15 ರಿಂದ 17 ಗಂಟೆಗಳ ಕಾಲ ಕೆಲಸ ಮಾಡುವಂತಹ ವಿಷಯಗಳನ್ನುಕೂಡಾ ಪ್ರಸ್ತಾಪಿಸಲಾಗಿತ್ತು. ಆದ್ರೆ ಇವೆಲ್ಲದರ ಮಧ್ಯೆಯೇ ವಾರದಲ್ಲಿ 4 ದಿನ ಕೆಲಸ 3 ದಿನ ರಜೆ ಎನ್ನುವ ನಿಯಮಕ್ಕೆ ಒಪ್ಪಿಗೆ ಸಿಕ್ಕಿದೆ. 

ತುಂಬಾ ನಿರಾಳವಾದ ಭಾವನೆ :
ವಾರದಲ್ಲಿ ಕಡಿಮೆ ಕೆಲಸದ ಸಮಯ ಅಥವಾ ದಿನಗಳನ್ನು ಹೊಂದಿರುವುದು ಉತ್ತಮ ಪರಿಹಾರ. ಜನರು ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಸಮಯವನ್ನು ಕಂಡುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಜೀವನದ ಒತ್ತಡದ ವೇಗದಿಂದ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಯುಕೆ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಉತ್ತಮ ಜೀವನಕ್ಕಾಗಿ ವಾರದಲ್ಲಿ 4 ದಿನ ಮಾತ್ರ ಕೆಲಸ ಮಾಡಿಸಲು  ನಿರ್ಧರಿಸಿವೆ.

ಇದನ್ನೂ ಓದಿ : ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಟ್ಟರೂ ಕಟ್ಟಬೇಕಾಗುತ್ತೆ ತೆರಿಗೆ! ಎಷ್ಟು ಹಣ ಇದ್ರೆ TAX ಇರಲ್ಲ ಗೊತ್ತಾ..!

ವೇತನದಲ್ಲಿಯೂ ಕಡಿತ ಇಲ್ಲ : 
ಈ 200 UK ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪ್ರತಿ ವಾರ 3 ದಿನಗಳ ರಜೆ ನೀಡುತ್ತವೆ. ಹಾಗಂತ ಇಲ್ಲಿ ವೇತನದಲ್ಲಿಯೂ ಕಡಿತ ಮಾಡಿಲ್ಲ. ಈ 200 ಕಂಪನಿಗಳಲ್ಲಿ ಒಟ್ಟು 5,000ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಹೇಳಿದೆ. ಈ ಕಂಪನಿಗಳಲ್ಲಿ ಹೆಚ್ಚಿನವು ಚಾರಿಟಿ, ಮಾರ್ಕೆಟಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಗಳಾಗಿವೆ.

ಕೆಲಸದ ದಕ್ಷತೆ ಹೆಚ್ಚಾಗುತ್ತದೆ : 
 ವಾರಕ್ಕೆ 5 ದಿನಗಳ ಕೆಲಸದ ಮಾದರಿಯು ಹಳೆಯ ಪದ್ದತಿಯಾಗಿದೆ.  ಆ ಸಮಯದಲ್ಲಿ ಜನರು ಕೆಲಸದ ಸ್ಥಳವನ್ನು ತಲುಪಲು ದೂರದ ಪ್ರಯಾಣ ಮಾಡಬೇಕಾಗಿರಲಿಲ್ಲ ಅಥವಾ ಹೆಚ್ಚಿನ ಒತ್ತಡವೂ ಇರಲಿಲ್ಲ. ಆದರೆ ಈಗಿನ ಒತ್ತಡದ ಯುಗದಲ್ಲಿ ಹಾಗಲ್ಲ. ನೌಕರರು ವಾರದಲ್ಲಿ 4 ದಿನ ಕೆಲಸ ಮಾಡುವ ಮೂಲಕ ಸಂತೋಷವಾಗಿರುತ್ತಾರೆ. ಅವರ ಕೌಟುಂಬಿಕ ಜೀವನ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಹೀಗಾದಾಗ ಉದ್ಯೋಗಿಗಳು  ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇದರಿಂದ ಅವರ ಉತ್ಪಾದಕತೆಯೂ ಹೆಚ್ಚುತ್ತದೆ ಎನ್ನುವುದು ಈ ಕಂಪನಿಗಳ ವಾದ. 

ಇದನ್ನೂ ಓದಿ : ಸಾರ್ವಕಾಲಿಕ ಏರಿಕೆ ಬಳಿಕ ಭಾರೀ ಕುಸಿತ ಕಂಡ ಚಿನ್ನದ ಬೆಲೆ ! ಬಂಗಾರ ಖರೀದಿ ಯೋಚನೆ ಇದ್ದರೆ ಇದೇ ಸುವರ್ಣ ಕಾಲ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - httpsa://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News