ಸದ್ಯ ನನಗೆ ಮುಂಬೈಗೆ ಹೋಗುವ ಯಾವುದೇ ಧೈರ್ಯವಿಲ್ಲ-ನಿತಿನ್ ಗಡ್ಕರಿ

ಪ್ರಸ್ತುತ ಮುಂಬೈಗೆ ಹೋಗಲು ಯಾವುದೇ ಧೈರ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ  ಹೇಳಿದ್ದಾರೆ.ಮುಂಬೈನಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿರುವ ಹಿನ್ನಲೆಯಲ್ಲಿ ಈಗ ಅವರ ಹೇಳಿಕೆ ಬಂದಿದೆ.

Last Updated : Jun 16, 2020, 04:31 PM IST
ಸದ್ಯ ನನಗೆ ಮುಂಬೈಗೆ ಹೋಗುವ ಯಾವುದೇ ಧೈರ್ಯವಿಲ್ಲ-ನಿತಿನ್ ಗಡ್ಕರಿ  title=
file photo

ನವದೆಹಲಿ: ಪ್ರಸ್ತುತ ಮುಂಬೈಗೆ ಹೋಗಲು ಯಾವುದೇ ಧೈರ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ  ಹೇಳಿದ್ದಾರೆ.ಮುಂಬೈನಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿರುವ ಹಿನ್ನಲೆಯಲ್ಲಿ ಈಗ ಅವರ ಹೇಳಿಕೆ ಬಂದಿದೆ.

ಕೊರೊನಾವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾದ ಮಹಾರಾಷ್ಟ್ರವು ಸೋಮವಾರ 2,786 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಆ ಮೂಲಕ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 1,10,744 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಮುಂಬೈ ಕಳೆದ 24 ಗಂಟೆಗಳಲ್ಲಿ 1,067 ಹೊಸ ಕರೋನವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ನಗರದ ಕೋವಿಡ್ -19 ಸಕಾರಾತ್ಮಕ ರೋಗಿಗಳ ಸಂಖ್ಯೆ 59,293 ಕ್ಕೆ ತಲುಪಿದೆ.

ಇದನ್ನೂ ಓದಿ: ಕೊರೊನಾ ಪ್ರಕರಣಗಳಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದ ಮಹಾರಾಷ್ಟ್ರ..!

'ಈಗಿನ ಪರಿಸ್ಥಿತಿಯಲ್ಲಿ, ನನಗೆ ಮುಂಬೈಗೆ ಬರಲು ಯಾವುದೇ ಧೈರ್ಯವಿಲ್ಲ, ಸಮಯ ಖಂಡಿತವಾಗಿಯೂ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ, ಎಂದು ಗಡ್ಕರಿ ಹೇಳಿದ್ದಾರೆ.ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆಗಳನ್ನು ಹೊಂದಿರುವ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ನಾಗ್ಪುರದ ಸಂಸತ್ ಸದಸ್ಯರಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಅವಧಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೊರೊನಾ ನಿರ್ವಹಣೆ ಕುರಿತಾದ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
 

Trending News