IND vs BAN: ಹಾರ್ದಿಕ್ ಪಾಂಡ್ಯ ಬದಲು ಬಾಂಗ್ಲಾದೇಶದ ವಿರುದ್ಧ ಈ ಆಟಗಾರನಿಗೆ ಪಾದಾರ್ಪಣೆ ಮಾಡುವ ಅವಕಾಶ!

IND vs BAN: ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 6ರಿಂದ ಪ್ರಾರಂಭವಾಗುವ T20 ಸರಣಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಟೀಂ ಇಂಡಿಯಾ ನಾಯಕತ್ವ ಸೂರ್ಯಕುಮಾರ್ ಯಾದವ್ ಕೈಯಲ್ಲಿದೆ.

Written by - Puttaraj K Alur | Last Updated : Sep 29, 2024, 12:33 PM IST
  • ಬಾಂಗ್ಲಾದೇಶ ವಿರುದ್ಧ ಅ.6ರಿಂದ ಪ್ರಾರಂಭವಾಗುವ T20 ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ
  • ಈ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಯುವ ಆಟಗಾರರ ಪ್ರಾಬಲ್ಯ ಕಂಡು ಬಂದಿದೆ
  • ನಿತೀಶ್ ಕುಮಾರ್ ರೆಡ್ಡಿಗೆ ಮೊದಲ ಬಾರಿಗೆ ಟೀಂ ಇಂಡಿಯಾ ತಂಡದಲ್ಲಿ ಅವಕಾಶ ಸಿಕ್ಕಿದೆ
IND vs BAN: ಹಾರ್ದಿಕ್ ಪಾಂಡ್ಯ ಬದಲು ಬಾಂಗ್ಲಾದೇಶದ ವಿರುದ್ಧ ಈ ಆಟಗಾರನಿಗೆ ಪಾದಾರ್ಪಣೆ ಮಾಡುವ ಅವಕಾಶ!   title=
ಯುವ ಆಟಗಾರರ ಪ್ರಾಬಲ್ಯ

India vs Bangladesh T20 series: ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 6ರಿಂದ ಪ್ರಾರಂಭವಾಗುವ T20 ಸರಣಿಗೆ ಟೀಂ ಇಂಡಿಯಾದ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಯುವ ಆಟಗಾರರ ಪ್ರಾಬಲ್ಯ ಕಂಡು ಬಂದಿದೆ. ಏತನ್ಮಧ್ಯೆ ಮುಂಬರುವ ದಿನಗಳಲ್ಲಿ ಹಾರ್ದಿಕ್ ಪಾಂಡ್ಯಗೆ ಪರಿಪೂರ್ಣ ಬದಲಿಯಾಗಬಲ್ಲ ಆಟಗಾರನಿಗೆ ಬಿಸಿಸಿಐ ಅವಕಾಶ ನೀಡಿದೆ. ಈ ವರ್ಷ ಆಡಿದ ಐಪಿಎಲ್‌ನಲ್ಲಿ ಈ ಆಟಗಾರ ಕಮಾಲ್‌ ಮಾಡಿದ್ದ. ಈ ಆಟಗಾರ ಬೇರೆ ಯಾರೂ ಅಲ್ಲ ನಿತೀಶ್ ಕುಮಾರ್ ರೆಡ್ಡಿ. ನಿತೀಶ್ ಕುಮಾರ್ ರೆಡ್ಡಿಗೆ ಮೊದಲ ಬಾರಿಗೆ ಟೀಂ ಇಂಡಿಯಾ ತಂಡದಲ್ಲಿ ಅವಕಾಶ ಸಿಕ್ಕಿದೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅವರು ತಂಡದಲ್ಲಿ ಅವಕಾಶ ಪಡೆದಿದ್ದರೂ, ಗಾಯದ ಕಾರಣ BCCI ಸರಣಿಯ ಆರಂಭದ ಮೊದಲು ತಂಡದಿಂದ ಅವರ ಹೆಸರನ್ನು ಹಿಂತೆಗೆದುಕೊಂಡಿತ್ತು. 

ನಿತೀಶ್‌ಗೆ ಅವಕಾಶ?

ಭಾರತ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ನಿತೀಶ್ ಕುಮಾರ್ ರೆಡ್ಡಿಯನ್ನು ಬಾಂಗ್ಲಾದೇಶ ವಿರುದ್ಧ ಆಡಲಿರುವ ಮೂರು ಪಂದ್ಯಗಳ ತಂಡದಲ್ಲಿ ಸೇರಿಸಿಕೊಳ್ಳಬಹುದು. ಟೀಂ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರಿಲ್ಲದ ಸಮಯವಿತ್ತು. ಆದರೆ ಈ ಬಾರಿ ನಾವು ತಂಡದತ್ತ ಗಮನ ಹರಿಸಿದರೆ ನಿತೀಶ್ ರೆಡ್ಡಿ ಮತ್ತು ಶಿವಂ ದುಬೆ ಅಂತಹ ಇಬ್ಬರು ಆಟಗಾರರು ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯನ್ನು ಭಂಗಗೊಳಿಸುವುದಿಲ್ಲ. ಇದು ಹಾರ್ದಿಕ್ ಪಾಂಡ್ಯಗೆ ತೀವ್ರ ಆತಂಕ ತಂದಿದೆ. ಬಿಸಿಸಿಐ ಈ ಹಿಂದೆ ಹಲವು ಬಾರಿ ಇಂತಹ ಆಟಗಾರರನ್ನು ಪ್ರಯತ್ನಿಸಿದ್ದರೂ ಹಾರ್ದಿಕ್ ಪಾಂಡ್ಯ ತಂಡಕ್ಕಾಗಿ ನೀಡಿದ ಪ್ರದರ್ಶನವನ್ನು ಯಾರೂ ನೀಡಲಿಲ್ಲ. ಆದರೆ ಐಪಿಎಲ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರ ಪ್ರದರ್ಶನ ನೋಡಿದರೆ ಅವರು ಉತ್ತಮ ಪ್ರದರ್ಶನ ನೀಡಬಲ್ಲರು ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ 3 ಬ್ಯಾಟ್ಸ್‌ಮನ್‌ಗಳಿವರು! ಇದರಲ್ಲಿರೋದು ಒಬ್ಬ ಭಾರತೀಯ ಮಾತ್ರ!!

ಐಪಿಎಲ್‌ನಲ್ಲಿನ ನಿತೀಶ್ ಪ್ರದರ್ಶನ 

ನಿತೀಶ್ ಕುಮಾರ್ ರೆಡ್ಡಿ ಟೀಂ ಇಂಡಿಯಾಗೆ ಪರಿಪೂರ್ಣ ಆಟಗಾರನಾಗಬಹುದು. ಈ ಆಟಗಾರ ಐಪಿಎಲ್ 2024ರಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ನಿತೀಶ್‌ 13 ಪಂದ್ಯಗಳಲ್ಲಿ 33.67 ಸರಾಸರಿ ಮತ್ತು 142.92 ಸ್ಟ್ರೈಕ್ ರೇಟ್‌ನಲ್ಲಿ 303 ರನ್ ಗಳಿಸಿದರು. ಅವರು ಬೌಲಿಂಗ್‌ನಲ್ಲಿ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ, ಆದರೆ ತಮ್ಮ ಬೌಲಿಂಗ್ ಅನ್ನು ಸುಧಾರಿಸುತ್ತಾರೆಂದು ನಿರೀಕ್ಷಿಸಲಾಗಿದೆ. ಟೀಂ ಇಂಡಿಯಾದಲ್ಲಿ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿತೀಶ್ ಬಯಸುತ್ತಾರೆ. ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾದ ವೇಳಾಪಟ್ಟಿಯನ್ನು ಗಮನಿಸಿದರೆ, ಅಕ್ಟೋಬರ್ 6ರಂದು ಗ್ವಾಲಿಯರ್‌ನಲ್ಲಿ ಮೊದಲ ಟಿ-20, ಅಕ್ಟೋಬರ್ 9ರಂದು ದೆಹಲಿಯಲ್ಲಿ 2ನೇ ಟಿ-20 ಮತ್ತು ಅಕ್ಟೋಬರ್ 12ರಂದು ಹೈದರಾಬಾದ್‌ನಲ್ಲಿ ಕೊನೆಯ ಪಂದ್ಯ ನಡೆಯಲಿದೆ.

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಮಯಾಂಕ್ ಯಾದವ್.

ಇದನ್ನೂ ಓದಿ: 9 ಗಂಟೆ ಬ್ಯಾಟಿಂಗ್‌, 335 ರನ್‌ ಕೊಡುಗೆ... ಸುದೀರ್ಘ ಇನ್ನಿಂಗ್ಸ್‌ ಆಡಿ ಕ್ರಿಕೆಟ್‌ ಲೋಕವನ್ನೇ ಬೆರಗಾಗಿಸಿ ಕ್ರಿಕೆಟಿಗ! ಈತ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಏಕೈಕ ದಾಂಡಿಗನೂ ಹೌದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News