ಈ 4 ವಸ್ತುಗಳನ್ನು ಬೇರೆಯವರ ಮನೆಯಿಂದ ತಂದ್ರೆ ನಿಮ್ಮ ಮನೆಯ ಸಂತೋಷ, ಸಮೃದ್ಧಿ ನಾಶ.! 

Vastu tips : ಮಾನವನು ಸಾಮಾಜಿಕ ಪ್ರಾಣಿ. ಕೆಲವೊಮ್ಮೆ ಅವನು ಇತರರಿಗೆ ವಸ್ತುಗಳನ್ನು ನೀಡುತ್ತಾನೆ ಮತ್ತು ಕೆಲವೊಮ್ಮೆ ಬೇರೆಯವರಿಂದ ವಸ್ತುಗಳನ್ನು ತೆಗೆದುಕೊಳ್ಳುತ್ತಾನೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ನಾವು ಕೆಲವು ವಸ್ತುಗಳನ್ನು ಬೇರೆಯವರ ಮನೆಯಿಂದ ನಮ್ಮ ಮನೆಗೆ ತಪ್ಪಾಗಿಯೂ ತರಬಾರದು. ಇವು ಕುಟುಂಬದ ಆರ್ಥಿಕ ದಿವಾಳಿತನಕ್ಕೆ ಕಾರಣವಾಗುತ್ತದೆ..

Written by - Krishna N K | Last Updated : Jan 19, 2025, 05:36 PM IST
    • ಮಾನವ ಕೆಲವೊಮ್ಮೆ ಇತರರಿಗೆ ವಸ್ತುಗಳನ್ನು ನೀಡುತ್ತಾನೆ,
    • ಕೆಲವೊಮ್ಮೆ ಬೇರೆಯವರಿಂದ ವಸ್ತುಗಳನ್ನು ತೆಗೆದುಕೊಳ್ಳುತ್ತಾನೆ.
    • ಹೀಗೆ ಮಾಡುವುದು ಸರಿಯಾದ ವಿಧಾನವಲ್ಲ ಎನ್ನುತ್ತೆ ವಾಸ್ತು.
ಈ 4 ವಸ್ತುಗಳನ್ನು ಬೇರೆಯವರ ಮನೆಯಿಂದ ತಂದ್ರೆ ನಿಮ್ಮ ಮನೆಯ ಸಂತೋಷ, ಸಮೃದ್ಧಿ ನಾಶ.!  title=

Borrow vastu tips : ವಾಸ್ತು ಶಾಸ್ತ್ರದ ಪ್ರಕಾರ ಬೇರೆಯವರ ಮನೆಯಿಂದ ಅಪ್ಪಿತಪ್ಪಿಯೂ ಕೆಲವು ವಸ್ತುಗಳನ್ನು ನಮ್ಮ ಮನೆಗೆ ತರಬಾರದು ಎಂದು ಹೇಳಲಾಗುತ್ತದೆ. ಇದನ್ನ ಪಾಲನೆ ಮಾಡದಿದ್ದರೆ ಗಂಭೀರ ತೊಂದರೆಗೆ ಸಿಲುಕಬೇಕಾಗುತ್ತದೆ. ಅಲ್ಲದೆ, ಆರ್ಥಿಕ ನಷ್ಟದ ಜೊತೆಗೆ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ... ಬೇರೆಯವರ ಮನೆಯಿಂದ ಯಾವತ್ತೂ ತರಬಾರದ 4 ವಸ್ತುಗಳು ಯಾವುವು..? ಬನ್ನಿ ತಿಳಿದುಕೊಳ್ಳೋಣ..

ವಾಸ್ತು ಶಾಸ್ತ್ರದ ಪ್ರಕಾರ ನಾವು ಅಪ್ಪಿತಪ್ಪಿಯೂ ಬೇರೆಯವರ ಮನೆಯಿಂದ ಕೊಡೆ ತರಬಾರದು. ಈ ರೀತಿ ಮಾಡುವುದರಿಂದ ವ್ಯಕ್ತಿಯ ಜಾತಕದಲ್ಲಿ ಇರುವ ಗ್ರಹಗಳ ಸ್ಥಾನ ಬದಲಾಗಬಹುದು ಎಂದು ಹೇಳಲಾಗುತ್ತದೆ. ಆದಕಾರಣ ಒತ್ತಾಯಿಸಿದರೂ ಛತ್ರಿ ತೆಗೆದುಕೊಂಡು ಮನೆಗೆ ಬರಬೇಡಿ.. ತಂದರೂ ಸಾಧ್ಯವಾದಷ್ಟು ಬೇಗ ಹಿಂದಿರುಗಿಸಿ..

ಇದನ್ನೂ ಓದಿ:ಮಹಿಳೆಯರಲ್ಲಿ ಹೃದಯಾಘಾತಕ್ಕೂ ಮುನ್ನ ಕಂಡುಬರುವ ಲಕ್ಷಣಗಳು ಇವು

ಎಷ್ಟೋ ಸಲ ಬೇರೆಯವರ ಮನೆಗೆ ಹೋದಾಗ ಅವರ ಶೂ, ಚಪ್ಪಲಿ ಬಳಸುತ್ತೇವೆ. ಹಾಗೆ ಮಾಡುವುದರಿಂದ ಯಾವುದೇ ಹಾನಿ ಇಲ್ಲ.. ಆದರೆ ನಾವು ಅವರ ಶೂ ಮತ್ತು ಚಪ್ಪಲಿಗಳನ್ನು ನಮ್ಮ ಮನೆಗೆ ತರಬಾರದು. ಹೀಗೆ ಮಾಡುವುದರಿಂದ ಇತರರ ಋಣಾತ್ಮಕ ಶಕ್ತಿಯೂ ನಮ್ಮ ಮನೆಯೊಳಗೆ ಪ್ರವೇಶಿಸುತ್ತದೆ ಎನ್ನಲಾಗುತ್ತದೆ.. 

ಜನರು ಸಾಮಾನ್ಯವಾಗಿ ಹಳೆಯ ಪೀಠೋಪಕರಣಗಳನ್ನು ಇತರರ ಮನೆಗಳಿಂದ ಖರೀದಿಸುತ್ತಾರೆ. ಹಾಗೆ ಮಾಡುವುದು ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವುದರಿಂದ ಕೆಲವೊಮ್ಮೆ ನಕಾರಾತ್ಮಕ ಶಕ್ತಿಯೂ ಬರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನೀವು ಹಳೆಯ ಪೀಠೋಪಕರಣಗಳನ್ನು ತರುತ್ತಿದ್ದರೂ ಸಹ ಅದನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ..

ಇದನ್ನೂ ಓದಿ:ದಿಂಬಿನ ಅಡಿಗೆ ಈ ಪುಟ್ಟ ಬೀಜ ಇಟ್ಟು ಮಲಗಿ.. ನಿದ್ರಾ ಹೀನತೆ ಸಮಸ್ಯೆಗೆ ಸಿಗುತ್ತೆ ಪರಿಹಾರ! 10 ನಿಮಿ

ಇತರರ ಹಳೆಯ ಅಥವಾ ಹರಿದ ಬಟ್ಟೆಗಳನ್ನು ಎಂದಿಗೂ ನಿಮ್ಮ ಮನೆಗೆ ತರಬಾರದು. ಅವು ಎಷ್ಟೇ ಸುಂದರವಾಗಿ ಬ್ರಾಂಡೆಂಡ್‌ ಆಗಿದ್ದರೂ ಸಹ ಮುಟ್ಟಬೇಡಿ.. ಆ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ, ವೈರಸ್ ಅಥವಾ ಇತರ ರೋಗ ಹರಡುವ ಜೀವಿಗಳಿರಬಹುದು. ಇವು ನಿಮ್ಮ ದೇಹವನ್ನು ಅಸ್ವಸ್ಥಗೊಳಿಸಬಹುದು. ಅಲ್ಲದೆ, ನಕಾರಾತ್ಮಕ ಶಕ್ತಿಯೂ ಹೆಚ್ಚಿಸುತ್ತದೆ.. 

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, Zee Kannada News ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News