Viral Video: ಕುಂಭಮೇಳ ಈಗ ದೇಶದಲ್ಲಿ ಆಧ್ಯಾತ್ಮಿಕ ಹಿಂದೂ ಹಬ್ಬವಾಗಿದೆ. ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ದೇಶ ವಿದೇಶಗಳಿಂದ ಭಕ್ತರು ಹರಿದು ಬರುತ್ತಾರೆ. ಅದರಲ್ಲೂ 144 ವರ್ಷಗಳ ನಂತರ ನಡೆಯುತ್ತಿರುವ ಬೃಹತ್ ಕುಂಭಮೇಳ ಇದಾಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕುಂಭಮೇಳದಲ್ಲಿ ಶಾಹಿ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಹೇಳಬಹುದು.
ಈಗಾಗಲೇ ಈ ಕುಂಭಮೇಳದಲ್ಲಿ.. ಪುಷ್ಯ ಪೌರ್ಣಮಿಯ ವೇಳೆಗೆ ಮೊದಲ ಶಾಹಿ ಸ್ನಾನ ಮುಗಿದಿದೆ. ನಂತರ ಸಂಕ್ರಾಂತಿ ದಿನ, ಪುಷ್ಯ ಅಮವಾಸ್ಯೆ, ವಸಂತ ಪಂಚಮಿ ಮತ್ತು ಮಹಾ ಶಿವರಾತ್ರಿ ಹಬ್ಬಗಳಲ್ಲಿ ಪುಣ್ಯಸ್ನಾನ ಮಾಡಲಾಗುತ್ತದೆ. ಆದರೆ.. ದೇಶದ 13 ಅಖಾಡಗಳಿಂದ ಸಾಧುಗಳು, ಸಂತರು, ಅಘೋರಿಗಳು ಈ ಕುಂಭಮೇಳಕ್ಕೆ ಹರಿದು ಬರುತ್ತಿದ್ದಾರೆ. ವಿದೇಶದಿಂದಲೂ ಭಕ್ತರು ಆಗಮಿಸುತ್ತಿದಾರೆ. ಈ ಹಿನ್ನೆಲೆಯಲ್ಲಿ ಇದೀಗ ಒಬ್ಬ ಅಘೋರಿಯು ಶಾಕಿಂಗ್ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ..
ప్రయాగ్ రాజ్ "మహాకుంభమేళా"లో పాల్గొనడం కోసం హిమాలయ పర్వత సానువుల నుండి విచ్చేసిన "అఘోరాలు" మరియు "నాగ సాధువులు"🙏🙏
విష సర్పాలకే కాదు భూత, ప్రేతాత్మలకు సైతం బెదరని తత్వం, మొక్కవోని ధైర్యం వీరి సొంతం👌 pic.twitter.com/33NYU3GmnW
— CBB (@Telugu1989) January 15, 2025
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮಿಡಿಯಾದಲ್ಲಿ ಹಲವಾರು ಪ್ರಶ್ನೆಗಳು ನೋಡುಗರಿಂದ ಕೇಳಿಬರುತ್ತಿದ್ದು, ಅದರಲ್ಲಿ ಈ ಅಘೋರಿ ಬಾಬಾ ಎಲ್ಲಿಂದ ಬಂದ.. ಅವರ ಮೇಲಿನ ಹಾವುಗಳು ವಿಷಪೂರಿತ ಹಾವುಗಳೇ? ಅವು ಕಚ್ಚುವುದಿಲ್ಲವೇ? ಎಂದು ಸಾಕಷ್ಟು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ..
ಪ್ರಸ್ತುತ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿರುವ ಆ ವಿಡಿಯೋದಲ್ಲಿ ಅಘೋರಿ ಬಾಬಾ ಮೇಲಿರುವ ಆ ಹಾವುಗಳು ಕಚ್ಚುವಂತೆ ವರ್ತಿಸುತ್ತಿದ್ದು, ಅಲ್ಲಿಯವರು ಈ ದ್ರಶ್ಯವನ್ನು ಕಂಡು ಬೆಚ್ಚಿಬಿದ್ದು ದೂರ ಸರಿಯುತ್ತಿದ್ದಾರೆ.. ವಾಸ್ತವವಾಗಿ ಹೇಳಬೇಕೆಂದರೇ ಅಘೋರಿಗಳು ವಿಷಕಾರಿ ಹಾವು, ಪ್ರೇತಗಳ ಮೇಲೂ ಮೇಲುಗೈ ಸಾಧಿಸಬೇಕು ಎನ್ನುತ್ತಾರೆ.. ಹೀಗಾಗಿ ವಿಚಿತ್ರ ಅಘೋರಿಗಳು ಮತ್ತು ಸಾಧು ಮಹಾರಾಜರು ಕುಂಭಮೇಳದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈ ವಿಷಪೂರಿತ ಹಾವುಗಳಿಂದ ತುಂಬಿರುವ ಅಘೋರಿಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಅದೂ ಅಲ್ಲದೆ.. ಹಾವು ಕಚ್ಚಿದರೆ ಏನಾಗಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ